ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೌರಾಣಿಕ-ವೈಜ್ಞಾನಿಕ ವೆಬ್‌ ಸೀರೀಸ್‌ ನಿರ್ಮಿಸಲಿದ್ದಾರೆ ಎಂಎಸ್ ಧೋನಿ

Cricketer MS Dhoni to produce mythological sci-fi web series

ನವದೆಹಲಿ: ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಪೌರಾಣಿಕ-ವೈಜ್ಞಾನಿಕ ವೆಬ್‌ ಸೀರೀಸ್‌ ಒಂದನ್ನು ನಿರ್ಮಿಸುವುದರಲ್ಲಿದ್ದಾರೆ. ಧೋನಿ ನಿವೃತ್ತಿ ಬಳಿಕ ಅವರ ಹೆಸರಿನಲ್ಲಿರುವ 'ಧೋನಿ ಎಂಟರ್‌ಟೇನ್‌ಮೆಂಟ್' ಹೆಸರಿನ ಮನರಂಜನಾ ಸಂಸ್ಥೆಯಲ್ಲಿ ವೆಬ್‌ ಸೀರೀಸ್ ನಿರ್ಮಾಣವಾಗಲಿದೆ.

ಐಪಿಎಲ್: ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಶಗಳುಐಪಿಎಲ್: ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಶಗಳು

ಎರಡು ಬಾರಿ ಭಾರತಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ನಾಯಕ ಧೋನಿ ಕಳೆದ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಧೋನಿ ಹೆಸರಿನಲ್ಲಿ ಈಗಾಗಲೇ ಎಂಟರ್‌ಟೇನ್ಮೆಂಟ್ ಸಂಸ್ಥೆಯಿದೆ. 2019ರಲ್ಲಿ ಈ ಸಂಸ್ಥೆಯ ಮೂಲಕ ಧೋನಿ ಅವರು 'ರೋರ್ ಆಫ್‌ ದ ಲಯನ್' ಎನ್ನುವ ಡಾಕ್ಯುಮೆಂಟ್ ಸರಣಿ ಹೊರ ತಂದಿದ್ದರು.

ಐಪಿಎಲ್ 2020: ಸೋಲಿನ ಗಾಯದ ಮೇಲೆ ಶ್ರೇಯಸ್ ಅಯ್ಯರ್‌ಗೆ ದಂಡದ ಬರೆಐಪಿಎಲ್ 2020: ಸೋಲಿನ ಗಾಯದ ಮೇಲೆ ಶ್ರೇಯಸ್ ಅಯ್ಯರ್‌ಗೆ ದಂಡದ ಬರೆ

'ರೋರ್ ಆಫ್‌ ದ ಲಯನ್' ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು ಕಬೀರ್ ಖಾನ್. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ನಿಷೇಧಿಸಲ್ಪಟ್ಟಿತ್ತು. ಆ ಬಳಿಕ ಧೋನಿ ನಾಯಕತ್ವದ ಸಿಎಸ್‌ಕೆ ಮತ್ತೆ ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಿತ್ತು. ಇದೇ ಚಿತ್ರಣ 'ರೋರ್ ಆಫ್‌ ದ ಲಯನ್'ನಲ್ಲಿತ್ತು.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ ಸಿಎಸ್‌ಕೆ: ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗರುಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ ಸಿಎಸ್‌ಕೆ: ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗರು

ಧೋನಿ ಎಂಟರ್‌ಟೇನ್ಮೆಂಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ (ವ್ಯವಸ್ಥಾಪಕ ನಿರ್ದೇಶಕಿ) ಜವಾಬ್ದಾರಿಯನ್ನು ಧೋನಿ ಪತ್ನಿ ಸಾಕ್ಷಿ ಧೋನಿ ವಹಿಸಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅಭಿನಯದ 'ಎಂಎಸ್ ಧೋನಿ-ಅನ್‌ಟೋಲ್ಡ್ ಸ್ಟೋರಿಯಲ್ಲಿ ಸಹ ನಿರ್ಮಾಪಕ ಸೂರಜ್ ಸಿಂಗ್‌ ಕೂಡ ಧೋನಿ ಎಂಟರ್‌ಟೇನ್ಮೆಂಟ್ ತಂಡದಲ್ಲಿದ್ದಾರೆ.

Story first published: Thursday, October 1, 2020, 10:01 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X