ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ

Cricketer Robin Uthappa reveals about his battles with depression

ಬೆಂಗಳೂರು, ಜೂನ್ 4: ತಾನು ತೀವ್ರ ಖಿನ್ನತೆಗೆ ಒಳಗಾಗಿ ನರಳಿದ್ದ ಕ್ಷಣವನ್ನು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಸ್ಮರಿಸಿಕೊಂಡಿದ್ದಾರೆ. 2009ರಿಂದ 2011ರ ವರೆಗೆ ತಾನು ಪ್ರತೀ ದಿನ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ಪ್ರತೀ ದಿನವೂ ನನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂದು ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಉತ್ತಮ ಹೇಳಿಕೊಂಡಿದ್ದಾರೆ. ಆ ಖಿನ್ನತೆಯ ಕ್ಷಣವನ್ನು ಹೇಗೋ ಕಳೆದು ಬಂದಿದ್ದೇನೆ. ಈಗ ನಾನು ಮಾನಸಿಕವಾಗಿ ಸಾಕಷ್ಟು ಬಲಿಷ್ಠನಾಗಿದ್ದೇನೆ ಎಂದು ರಾಬಿನ್ ವಿವರಿಸಿದ್ದಾರೆ.

ಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆ

ದ ರಾಯಲ್ ರಾಜಸ್ಥಾನ್ ಫೌಂಡೇಶನ್, 'ಮೈಂಡ್, ಬಾಡಿ ಆ್ಯಂಡ್ ಸೋಲ್' (ಮನಸ್ಸು, ದೇಹ ಮತ್ತು ಆತ್ಮ) ಎಂಬ ಸೆಶನ್ ನಡೆಸಿತ್ತು. ಇದರಲ್ಲಿ ಪಾಲ್ಗೊಂಡಿದ್ದ ರಾಬಿನ್ ಉತ್ತಪ್ಪ ಬದುಕಿನಲ್ಲಿ ತಾನು ಅನುಭವಿಸಿದ ಖಿನ್ನತೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಗಂಗೂಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ನನ್ನ ಆಯ್ಕೆಯನ್ನು ಬಯಸಿರಲಿಲ್ಲ: ಇರ್ಫಾನ್ ಪಠಾಣ್ಗಂಗೂಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ನನ್ನ ಆಯ್ಕೆಯನ್ನು ಬಯಸಿರಲಿಲ್ಲ: ಇರ್ಫಾನ್ ಪಠಾಣ್

2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ತನ್ನ ಮಾನಸಿಕ ತೊಳಲಾಟದ ಬಗ್ಗೆ ಆಡಿರುವ ಮಾತುಗಳು ಇಲ್ಲಿವೆ.

ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ

ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ

'ನಾನು 2006ರಲ್ಲಿ ಪಾದಾರ್ಪಣೆ ಮಾಡಿದಾಗ, ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ. ಅಂದಿನಿಂದ ನಾನು ಸಾಕಷ್ಟು ಕಲಿಕೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿದೆ. ಇದೀಗ, ನನ್ನ ಬಗ್ಗೆ ನನಗೆ ತುಂಬಾ ತಿಳಿದಿದೆ. ನನ್ನ ಆಲೋಚನೆಗಳು ಸ್ಥಿಮಿತಕ್ಕೆ ಬಂದಿವೆ. ನನ್ನ ಬಗ್ಗೆ ನನಗೆ ನಿಜವಾಗಿಯೂ ಸ್ಪಷ್ಟ ಅರಿವಿದೆ. ನಾನು ಎಲ್ಲೋ ಒಂದು ಸ್ಥಳದಲ್ಲಿ ಜಾರಿಬಿದ್ದರೆ ಈಗ ನನ್ನನ್ನು ಹಿಡಿಯುವುದು ನನಗೆ ಸುಲಭವೆನಿಸಿದೆ,' ಎಂದು ಉತ್ತಪ್ಪ ಹೇಳಿದ್ದಾರೆ.

ಆತ್ಮಹತ್ಯೆಗೆ ಯೋಚಿಸಿದ್ದೆ

ಆತ್ಮಹತ್ಯೆಗೆ ಯೋಚಿಸಿದ್ದೆ

'ಈಗ ನಾನು ಸಾಕಷ್ಟು ಗಟ್ಟಿಗನಾಗಿದ್ದೇನೆ ಯಾಕೆಂದರೆ ನಾನು ಈ ಮೊದಲು ಬಲು ಕಷ್ಟದ ಸನ್ನಿವೇಶವನ್ನು ದಾಟಿ ಬಂದಿದ್ದೇನೆ. ಆವತ್ತು ಮಾತ್ರ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ, ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಿದ್ದೆ. 2009ರಿಂದ 2011ರ ವರಗೆ ನಾನು ದಿನನಿತ್ಯ ಈ ಖಿನ್ನತೆಯನ್ನು ನಿಭಾಯಿಸಬೇಕಾಗಿ ಬಂದಿತ್ತು,' ಎಂದು ರಾಬಿನ್ ವಿವರಿಸಿದ್ದಾರೆ. ಬಹುಶಃ ಉತ್ತಪ್ಪ ಇಲ್ಲಿ ತನ್ನ ವೈಯಕ್ತಿಕ ಬದುಕಿನಲ್ಲಿ ಎದುರಾದ ತೊಳಲಾಟದ ಕ್ಷಣದ ಬಗ್ಗೆ ಮಾತನಾಡಿದ್ದಾರೆ ಅನ್ನಿಸುತ್ತದೆ.

ಕ್ರಿಕೆಟ್‌ ಬಗ್ಗೆ ಯೋಚನೆಯೇ ಇರಲಿಲ್ಲ

ಕ್ರಿಕೆಟ್‌ ಬಗ್ಗೆ ಯೋಚನೆಯೇ ಇರಲಿಲ್ಲ

ಮಾತು ಮುಂದುವರೆಸಿದ ಉತ್ತಪ್ಪ, 'ಆ ಮಾನಸಿಕ ಒತ್ತಡದ ಸಮಯಸಲ್ಲಿ ನಾನು ಕ್ರಿಕೆಟ್ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ಕ್ರಿಕೆಟ್‌ ಬಗ್ಗೆ ಯೋಚಿಸೋದು ಆಗ ನನ್ನ ಪಾಲಿಗೆ ದೂರ ಮಾತಾಗಿತ್ತು. ಆಗ ನಾನು ಈ ಖಿನ್ನತೆಯಿಂದ ಹೇಗೆ ಪಾರಾಗೋದು? ನನ್ನ ಬದುಕಿನಲ್ಲಿ ಏನಾಗುತ್ತಿದೆ? ನನ್ನ ಜೀವನ ಎತ್ತ ಸಾಗುತ್ತಿದೆ? ಎಂದಷ್ಟೇ ಯೋಚಿಸಿ ಕೊರಗುತ್ತಿದ್ದೆ,' ಎಂದರು.

ಬಾಲ್ಕನಿಯಿಂದ ಹಾರಲು ಯೋಚಿಸಿದ್ದೆ

ಬಾಲ್ಕನಿಯಿಂದ ಹಾರಲು ಯೋಚಿಸಿದ್ದೆ

'ಆ ಬಳಿಕ ಕ್ರಿಕೆಟ್‌ ಆಟ ನನ್ನನ್ನು ಇಂಥ ಯೋಚನೆಗಳಿಂದ ದೂರವಿಟ್ಟಿತು. ಆದರೆ ಪಂದ್ಯಗಳಿರದ ಸಮಯ, ಆಫ್‌ ಸೀಸನ್‌ಗಳಲ್ಲಿ ಮತ್ತೆ ಇಂಥ ಆಯೋಚೆನೆಗಳು ಬಂದಾಗ ನನಗೆ ತುಂಬಾ ಕಷ್ಟವೆನಿಸುತ್ತಿತ್ತು. ಆಗ ನಾನು ಸುಮ್ಮನೆ ಒಂದೆಡೆ ಕೂತು ನನ್ನ ಬಗ್ಗೆಯೇ ಯೋಚಿಸುತ್ತಿದ್ದೆ, ಮೂರರವರೆಗೂ ಕೌಂಟ್ ಮಾಡುತ್ತಿದ್ದೆ, ಓಡಿ ಬಂದು ಬಾಲ್ಕನಿಯಿಂದ ಹಾರಲು ಮುಂದಾಗುತ್ತಿದ್ದೆ. ಆದರೆ ಏನೋ ಒಂದು ನನ್ನನ್ನು ಆ ಕೆಟ್ಟ ಆಲೋಚನೆಗಳಿಂದ ಹಿಂದಕ್ಕೆ ಎಳೆಯುತ್ತಿತ್ತು. ಆದರೆ ಈಗ ನಾನು ಆ ನಕಾರಾತ್ಮಕ ಆಲೋಚನೆಗಳಿಂದ ಹೊರ ಬಂದಿದ್ದೇನೆ. ಸಕಾರಾತ್ಮಕವಾಗಿ ಗಟ್ಟಿಯಾಗಿದ್ದೇನೆ,' ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ.

Story first published: Thursday, June 4, 2020, 16:15 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X