ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಿಂದ ಸುರೇಶ್ ರೈನಾ ಹಿಂದೆ ಸರಿದಿದ್ದಕ್ಕೆ ಅಸಲಿ ಕಾರಣ ಬಹಿರಂಗ!

Cricketer Suresh Raina’s Uncle Killed, aunt in critical condition, after Pathankot House Attack

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಸುರೇಶ್ ರೈನಾ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ರೈನಾ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದಷ್ಟೇ ಸಿಎಸ್‌ಕೆ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದ್ದರು. ಆದರೆ ರೈನಾ ಐಪಿಎಲ್‌ನಲ್ಲಿ ಆಡದಿರುವುದಕ್ಕೆ ನಿಜವಾದ ಕಾರಣ ಬಹಿರಂಗವಾಗಿದೆ.

ದೀಪಕ್ ಚಹಾರ್‌ಗೆ ಕೊರೊನಾ, ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬದೀಪಕ್ ಚಹಾರ್‌ಗೆ ಕೊರೊನಾ, ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬ

ಜಾಗ್ರಣ್ ಡಾಕ್ ಕಾಮ್ ವರದಿಯ ಪ್ರಕಾರ, ಪಠಾಣ್‌ಕೋಟ್‌ನ ತಾರಿಯಲ್ ಗ್ರಾಮದಲ್ಲಿ ನಡೆದ ದಾಳಿಯಿಂದಾಗಿ ರೈನಾ ಸಂಬಂಧಿಕರೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರೈನಾ ಮಾವ ಒಬ್ಬರು ಮೃತರಾಗಿದ್ದಾರೆ.

ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

ಕುಟುಂಬದ ಸದಸ್ಯರು ತೊಂದರೆಯಲ್ಲಿರುವುದರಿಂದ ರೈನಾ ಐಪಿಎಲ್ ತ್ಯಜಿಸುವ ನಿರ್ಧಾರ ತಾಳಿದ್ದಾರೆ ಎಂದು ತಿಳಿದು ಬಂದಿದೆ.

ರೈನಾ ಅತ್ತೆಗೆ ಗಂಭೀರ ಗಾಯ

ರೈನಾ ಅತ್ತೆಗೆ ಗಂಭೀರ ಗಾಯ

ವರದಿಯಂತೆ, ದಾಳಿ ನಡೆದಿದ್ದು ಆಗಸ್ಟ್ 19ರಂದು. ಮನೆಯ ಟೆರೆಸ್‌ನಲ್ಲಿ ಕುಟುಂಬಸ್ಥರು ಮಲಗಿರುವಾಗ ಅಪರಿಚಿತರಾರೋ ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ದಾಳಿಯಿಂದಾಗಿ ರೈನಾ ಮಾವ ಮೃತರಾಗಿದ್ದರೆ, ರೈನಾ ಅವರ ಅತ್ತೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋದರ ಸಂಬಂಧಿಗಳಿಗೂ ಗಾಯ

ಸೋದರ ಸಂಬಂಧಿಗಳಿಗೂ ಗಾಯ

ರೈನಾ ಅವರ ತಂದೆಯ ತಂಗಿ ಆಶಾ ದೇವಿ ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ರೈನಾ ಅವರ 58ರ ಹರೆಯದ ಮಾವ ಅಶೋಕ್ ಕುಮಾರ್ ಸಾವನ್ನಪ್ಪಿದ್ದಾರೆ. ಇನ್ನು, ರೈನಾ ಸೋದರ ಸಂಬಂಧಿಗಳಾದ 32ರ ಹರೆಯದ ಕೌಶಲ್ ಕುಮಾರ್ ಮತ್ತು 24ರ ಹರೆಯದ ಅಪಿನ್ ಕುಮಾರ್‌ಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಅಭಿಮಾನಿಗಳಿಗೆ ನಿರಾಸೆ

ಅಭಿಮಾನಿಗಳಿಗೆ ನಿರಾಸೆ

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನ ಭಾರತದ ಮಾಜಿ ನಾಯಕ, ಸಿಎಸ್‌ಕೆ ಕ್ಯಾಪ್ಟನ್ ಎಂಎಸ್ ಧೋನಿ ಜೊತೆಗೆ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ನಿವೃತ್ತಿ ನೀಡಿರುವ ಧೋನಿ-ರೈನಾರ ಆಟವನ್ನು ಐಪಿಎಲ್‌ನಲ್ಲಾದರೂ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಯಸಿದ್ದರು. ಆದರೆ ಅಭಿಮಾನಿಗಳ ಆಸೆ ನಿರಾಸೆಯಾಗಿದೆ.

ವೇಳಾಪಟ್ಟಿ ಘೋಷಣೆ ವಿಳಂಬ

ವೇಳಾಪಟ್ಟಿ ಘೋಷಣೆ ವಿಳಂಬ

ಐಪಿಎಲ್‌ನಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಸಿಎಸ್‌ಕೆಯ 2 ಆಟಗಾರರು (ದೀಪಕ್ ಚಹಾರ್, ರುತುರಾಜ್ ಗಾಯಕ್ವಾಡ್) ಮತ್ತು 11 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಘೋಷಣೆಯಾಗುವುದರಲ್ಲಿದ್ದ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ವಿಳಂಬಗೊಂಡಿದೆ. 'ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ಕೊರೊನಾದಿಂದ ತಕ್ಷಣದ ಬೆದರಿಕೆ ಇಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ,' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

Story first published: Saturday, August 29, 2020, 16:58 [IST]
Other articles published on Aug 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X