ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂದೆಯಾಗುತ್ತಿರುವ ಖುಷಿಯಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್ ಕುಮಾರ್

Cricketer Vinay Kumar To Become Father Soon, Shares Wife’s Picture With Baby Bump

ಭಾರತ ರಾಷ್ಟ್ರೀಯ ತಂಡದ ಮಾಜಿ ಕ್ರಿಕೆಟಿಗ, ವೇಗದ ಬೌಲರ್ ವಿನಯ್ ಕುಮಾರ್ ಟ್ವಿಟರ್ ಮೂಲಕ ತಾವು ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಪತ್ನಿ ರಿಚಾ ಸಿಂಗ್ ಅವರ ಬೇಬಿ ಬಂಪ್ ಫೋಟೋ ಶೂಟ್ ಚಿತ್ರಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿನಯ್ ಕುಮಾರ್ ನಾವೀಗ ಮೂವರಾಗುತ್ತಿದ್ದೇವೆ, ನಿಮ್ಮ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ.

ಗಾಯಕ್ಕೊಳಗಾಗಿ ದ.ಆಫ್ರಿಕಾ ಸರಣಿಯಿಂದ ಹೊರಬಿದ್ದ ರಾಹುಲ್ ಕುರಿತು ಸಿಹಿಸುದ್ದಿ ಕೊಟ್ಟ ಬಿಸಿಸಿಐ ಅಧಿಕಾರಿಗಾಯಕ್ಕೊಳಗಾಗಿ ದ.ಆಫ್ರಿಕಾ ಸರಣಿಯಿಂದ ಹೊರಬಿದ್ದ ರಾಹುಲ್ ಕುರಿತು ಸಿಹಿಸುದ್ದಿ ಕೊಟ್ಟ ಬಿಸಿಸಿಐ ಅಧಿಕಾರಿ

ಇನ್ನು ವಿನಯ್ ಕುಮಾರ್ ಮತ್ತು ರಿಚಾ ಸಿಂಗ್ 2013ರ ನವೆಂಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ 9 ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ನಡೆಸಿರುವ ಈ ಜೋಡಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗಿದೆ.

ಇನ್ನು ವಿನಯ್ ಕುಮಾರ್ ಅವರು ಹಂಚಿಕೊಂಡಿರುವ ಈ ಚಿತ್ರಗಳಿಗೆ ಅವರ ಹಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ವಿನಯ್ ಕುಮಾರ್ ಮತ್ತು ರಿಚಾ ಸಿಂಗ್ ಇಬ್ಬರಿಗೂ ಶುಭಾಶಯವನ್ನು ಕೋರಿದ್ದಾರೆ.

ಕ್ರಿಕೆಟ್ ವೃತ್ತಿ ಜೀವನ:

2010ರ ಮೇ 28ರಂದು ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ವಿನಯ್ ಕುಮಾರ್ 2013ರ ನವೆಂಬರ್ 2ರಂದು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದು ತಮ್ಮ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಯಣವನ್ನು ಕೊನೆಗೊಳಿಸಿದ್ದರು.

2012ರ ಜನವರಿ 13ರಂದು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ ವಿನಯ್ ಕುಮಾರ್ ನಂತರ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಳ್ಳಲೇ ಇಲ್ಲ. ಈ ಮೂಲಕ ಒಂದೇ ಒಂದು ಟೆಸ್ಟ್ ಪಂದ್ಯಕ್ಕೆ ವಿನಯ್ ಕುಮಾರ್ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತು.

IND vs SA: ಈ 3 ಬದಲಾವಣೆ ಮಾಡಿಕೊಳ್ಳದಿದ್ದರೆ ದ್ವಿತೀಯ ಟಿ20 ಪಂದ್ಯದಲ್ಲೂ ಭಾರತಕ್ಕೆ ಸೋಲು ಖಚಿತ!IND vs SA: ಈ 3 ಬದಲಾವಣೆ ಮಾಡಿಕೊಳ್ಳದಿದ್ದರೆ ದ್ವಿತೀಯ ಟಿ20 ಪಂದ್ಯದಲ್ಲೂ ಭಾರತಕ್ಕೆ ಸೋಲು ಖಚಿತ!

ಇನ್ನು 2010ರ ಮೇ 211ರಂದು ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಪ್ರವೇಶಿಸಿದ್ದ ವಿನಯ್ ಕುಮಾರ್ 2013ರ ಅಕ್ಟೋಬರ್ 10ರಂದು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟಿ ಟ್ವೆಂಟಿ ಪಂದ್ಯದಲ್ಲಿ ಕೊನೆಯ ಬಾರಿ ಕಣಕ್ಕಿಳಿದಿದ್ದಾರೆ.

ಹೀಗೆ ಸುಮಾರು 3 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪಾಲ್ಗೊಂಡಿದ್ದ ವಿನಯ್ ಕುಮಾರ್ 2004ರಿಂದ 2019ರವರೆಗೆ ಸುಧೀರ್ಘವಾಗಿ ಕರ್ನಾಟಕ ತಂಡದ ಪರ ಆಟವಾಡಿದ್ದರು. ಹಾಗೂ ಮೂಲತಃ ಕರ್ನಾಟಕದ ದಾವಣಗೆರೆ ಜಿಲ್ಲೆಯವರಾದ ವಿನಯ್ ಕುಮಾರ್ ದಾವಣಗೆರೆ ಎಕ್ಸ್ ಪ್ರೆಸ್ ಎಂದೇ ಹೆಸರನ್ನು ಮಾಡಿದ್ದಾರೆ. ವಿನಯ್ ಕುಮಾರ್ ಬಳಿಕ 2019ರಿಂದ 2021ರವರೆಗೆ ಪುದುಚೇರಿ ಪರ ಕೂಡ ಕಣಕ್ಕಿಳಿದಿದ್ದಾರೆ.

2008ರಿಂದ 2017ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿರುವ ವಿನಯ್ ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಚ್ಚಿ ಟಸ್ಕರ್ಸ್ ಕೇರಳ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪರ ಕಣಕ್ಕಿಳಿದ ಅನುಭವವನ್ನು ಹೊಂದಿದ್ದಾರೆ.

ಪಡೆದ ವಿಕೆಟ್‍ಗಳು:

ಇನ್ನು ಕೇವಲ ಒಂದೇ ಒಂದು ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿನಯ್ ಕುಮಾರ್ 1 ವಿಕೆಟ್ ಪಡೆದಿದ್ದರೆ, 31 ಏಕದಿನ ಪಂದ್ಯಗಳನ್ನಾಡಿ 48 ವಿಕೆಟ್ ಪಡೆದಿದ್ದಾರೆ ಹಾಗೂ 9 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 10 ವಿಕೆಟ್ ಪಡೆದಿದ್ದಾರೆ.

Story first published: Saturday, June 11, 2022, 18:24 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X