ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟಿಗರ ಸೆಕೆಂಡ್ ಇನ್ನಿಂಗ್ಸ್ ಸವಾಲುಗಳು: ನಿವೃತ್ತಿಯ ಬಳಿಕ ಕ್ರಿಕೆಟಿಗರ ಮುಂದಿರುವ ಆಯ್ಕೆಗಳೇನು?

Cricketers after retirement: What are the options for cricketers after retirement

ಕ್ರಿಕೆಟ್ ಕ್ರೀಡಾಲೋಕದ ಶ್ರೀಮಂತ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಅದರಲ್ಲೂ ವಿಶೇಷವಾಗಿ ಭಾರತದ ಕ್ರಿಕೆಟಿಗರ ಆದಾಯ ಉಳಿದ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ ಒಂದು ಹಂತ ಮೇಲಿದೆ. ರಾಷ್ಟ್ರೀಯ ತಂಡವನ್ನು ಒಮ್ಮೆ ಪ್ರತಿನಿಧಿಸಿದರೂ ಆ ಕ್ರಿಕೆಟಿಗರೂ ಆರ್ಥಿಕವಾಗಿ ಮತ್ತೆಂದೂ ಸಮಸ್ಯೆಗೆ ಒಳಗಾಗದಿರುವಂತಾ ಪರಿಸ್ಥಿತಿಯಿದೆ. ಇದಕ್ಕೆ ಐಪಿಎಲ್‌ನಂತಾ ಟೂರ್ನಿ ಕೂಡ ಕಾರಣ.

ಆದರೆ ಕ್ರಿಕೆಟ್ ಆಟಗಾರರು ನಿವೃತ್ತಿ ಪಡೆದ ಬಳಿಕ ಅವರ ಮುಂದೆ ಎನೆಲ್ಲಾ ಆಯ್ಕೆಗಳಿರುತ್ತವೆ ಎಂಬುದು ಕುತೂಹಲಕಾರಿ ಅಂಶ. ವೃತ್ತಿಜೀವನದಲ್ಲಿದ್ದಾಗ ಕೋಟಿ ಕೋಟಿ ಆದಾಯಗಳಿಸುವ ಆಟಗಾರರು ನಿವೃತ್ತರಾದ ಬಳಿಕವೂ ಆದಾಯದ ಪ್ರಮಾಣ ಕೋಟಿಯ ಲೆಕ್ಕದಲ್ಲಿಯೇ ಪಡೆದುಕೊಳ್ಳುವಂತಾ ಆಯ್ಕೆಗಳು ಕ್ರಿಕೆಟಿಗರ ಮುಂದಿದೆ. 35ರಿಂದ 40ನೇ ವಯಸ್ಸಿಗೆ ಸಾಮಾನ್ಯವಾಗಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಆಟಗಾರರು ನಂತರ ಯಾವೆಲ್ಲಾ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಯಾವೆಲ್ಲಾ ಆಯ್ಕೆಗಳು ಅವರ ಮುಂದಿದೆ. ಈ ಬಗೆಗಿನ ಕುತೂಹಕಾರಿ ಮಾಹಿತಿಯನ್ನು ಮುಂದೆ ಓದಿ..

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಕಾಮೆಂಟೇಟರ್ಸ್

ಕಾಮೆಂಟೇಟರ್ಸ್

ಕ್ರಿಕೆಟ್ ಆಟಗಾರರು ನಿವೃತ್ತರಾದ ಬಳಿಕ ಆಯ್ಕೆ ಮಾಡಿಕೊಳ್ಳಲು ಇರುವ ಅತ್ಯುತ್ತಮ ಆಯ್ಕೆಯೆಂದರೆ ಕಾಮೆಂಟೇಟರ್ ಜವಾಬ್ಧಾರಿ. ತಮ್ಮಲ್ಲಿರುವ ಕ್ರಿಕೆಟ್‌ನ ಜ್ಞಾನವನ್ನು ವೀಕ್ಷಕ ವಿವರಣೆ ಮೂಲಕ ವೀಕ್ಷಕರೊಂದಿಗೆ ಹಂಚಿಕೊಳ್ಳುವ ಅವಕಾಶ ಕಾಮೆಂಟೇಟರ್‌ಗಳಾಗಿ ದೊರೆಯುತ್ತದೆ. ಇತ್ತೀಚೆಗೆ ಸ್ಥಳೀಯ ಭಾಷೆಗಳಲ್ಲಿಯೂ ಕಾಮೆಂಟರಿ ಹೆಚ್ಚು ಬೇಡಿಕೆ ಇರುವ ಕಾರಣ ಹಿಂದಿ ಇಂಗ್ಲೀಷ್ ಹೊರತುಪಡಿಸಿ ಸ್ಥಳೀಯ ಮಟ್ಟದಲ್ಲಿಯೂ ಮಾಜಿ ಕ್ರಿಕೆಟಿಗರರಿಗೆ ಕಾಮೆಂಟೇಟರ್‌ಗಳಾಗಿ ಹೆಚ್ಚಿನ ಅವಕಾಶಗಳಿದೆ. ಆದಾಯದ ದೃಷ್ಟಿ ಇದು ನಿವೃತ್ತ ಆಟಗಾರರಿಗೆ ಉತ್ತಮ ಆಯ್ಕೆ ಎನಿಸಿದೆ.

ಕ್ರಿಕೆಟ್ ವಿಶ್ಲೇಷಕರು

ಕ್ರಿಕೆಟ್ ವಿಶ್ಲೇಷಕರು

ಕ್ರಿಕೆಟಿಗರು ನಿವೃತ್ತರಾದ ಬಳಿಕ ಮಾಧ್ಯಮಗಳಿಗೆ ವಿಶ್ಲೇಷಕರಾಗಿ ಸೇರಿಕೊಳ್ಳುವ ಆಯ್ಕೆಗಳು ಕೂಡ ಇದೆ. ಕ್ರಿಕೆಟ್ ಪಂದ್ಯಗಳು ಆರಂಭವಾಗುವುದಕ್ಕೆ ಮುನ್ನ ಹಾಗೂ ಪಂದ್ಯದ ಬಳಿಕ ಈ ವಿಶ್ಲೇಷಕರು ಪಂದ್ಯಗಳ ಬಗೆಗೆ ವಿಶ್ಲೇಷಣೆಗಳನ್ನು ಮಾಡಿ ಪ್ರೇಕ್ಷಕರಿಗೆ ಪಂದ್ಯಗಳ ವಿಚಾರವಾಗಿ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾರೆ. ಸ್ಟಾರ್, ಸೋನಿಯಂತಾ ಮಾದ್ಯಮ ಸಂಸ್ಥೆಗಳು ಎಕ್ಸ್‌ಪರ್ಟ್ಸ್ ಪಾನೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ಲೇಷಕರನ್ನು ಸೇರ್ಪಡೆಗೊಳಿಸುತ್ತಾರೆ. ಆದಾಯದ ವಿಚಾರವಾಗಿ ಇದು ಕೂಡ ಮಾಜಿ ಕ್ರಿಕೆಟಿಗರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಕೋಚ್‌ಗಳು

ಕೋಚ್‌ಗಳು

ಕ್ರಿಕೆಟಿಗರು ನಿವೃತ್ತರಾದ ಬಳಿಕ ಆಯ್ಕೆ ಮಾಡಿಕೊಳ್ಳಲು ಇರುವ ಮತ್ತೊಂದು ಪ್ರಮುಖ ಆಯ್ಕೆಯೆಂದರೆ ಅದು ಕೋಚ್ ಜವಾಬ್ಧಾರಿ. ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್‌ರಂತಾ ಮಾಜಿ ಕ್ರಿಕೆಟಿಗರು ಕೋಚ್‌ಗಳಾಗಿ ಜವಾನ್ಧಾರಿ ವಹಿಸಿಕೊಂಡಿರುವ ಇತ್ತೀಚಿನ ಉದಾಹರಣೆಗಳು. ಇನ್ನು ರಾಷ್ಟ್ರೀಯ ತಮಡದ ಕೋಚ್‌ಗಳ ಜೊತೆಗೆ ಐಪಿಎಲ್‌ನಲ್ಲಿಯೂ ತಮಡಗಳಿಗೆ ಕೋಚ್ ಆಗಿ ಮಾರ್ಗದರ್ಶನ ನೀಡುವ ಆಯ್ಕೆಗಳಿದೆ. ಕೋಚ್‌ಗಳಲ್ಲಿಯೂ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್, ಫಿಲ್ಡಿಂಗ್ ಕೋಚ್ ಹೀಗೆ ಭಿನ್ನವಾದ ಆಯ್ಕೆಗಳು ಕೂಡ ಇದೆ. ಇನ್ನು ಪ್ರಥಮದರ್ಜೆ ಕ್ರಿಕೆಟ್ ಕ್ರಿಕೆಟ್‌ನಲ್ಲಿಯೂ ಕೋಚ್‌ಗಳಾಗಿ ಮಾರ್ಗದರ್ಶನ ನೀಡುವ ಆಯ್ಕೆಗಳಿದೆ.

ಅಂಪೈರ್, ಮ್ಯಾಚ್ ರೆಫ್ರಿ

ಅಂಪೈರ್, ಮ್ಯಾಚ್ ರೆಫ್ರಿ

ಅಂಪೈರ್ ಹಾಗೂ ಮ್ಯಾಚ್ ರೆಫ್ರಿಯಾಗಿಯೂ ಕೆಲ ಕ್ರಿಕೆಟಿಗರು ನಿವೃತ್ತರಾದ ಬಳಿಕ ತೊಡಗಿಸಿಕೊಂಡ ಉದಾಹರಣೆಗಳಿದೆ. ಭಾರತದಲ್ಲಿ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿ ಅಂಪೈರ್‌ಗಳಾಗಿರುವ ಉದಾಹರಣೆ ತೀರಾ ಕಡಿಮೆಯಿದೆ. ಮಾಜಿ ಕ್ರಿಕೆಟಿಗ ಶ್ರೀನಿವಾಸ್ ವೆಂಕಟರಾಘವನ್ ಅಂಪೈರ್ ಆಗಿ ಕಾರ್ಯನಿವರ್ವಹಿಸಿದ್ದರು. ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ಅಶೋಕ ಡಿಸಿಲ್ವ, ಕುಮಾರ ಧರ್ಮಸೇನಾ ಮುಂತಾದವರು ನಿವೃತ್ತರಾದ ಬಳಿಕ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಮ್ಯಾಚ್ ರೆಫ್ರಿಗಳಾಗಿಯೂ ಕಾರ್ಯನಿರ್ವಹಿಸುವ ಆಯ್ಕೆಯಿದೆ. ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಈಗಲೂ ಕರ್ತವ್ಯನಿರ್ವಹಿಸುವುದನ್ನು ಗಮನಿಸಬಹುದು.

ನಿವೃತ್ತ ಕ್ರಿಕೆಟಿಗರಿಗೆ ಇರುವ ಇತರ ಆಯ್ಕೆಗಳು

ನಿವೃತ್ತ ಕ್ರಿಕೆಟಿಗರಿಗೆ ಇರುವ ಇತರ ಆಯ್ಕೆಗಳು

ನಿವೃತ್ತರಾದ ಬಳಿಕ ಮಾಜಿ ಕ್ರಿಕೆಟಿಗರು ಪಿಚ್ ಕ್ಯುರೇಟರ್ ಮತ್ತು ಸಹಾಯಕ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುವ ಅವಕಾಶಗಳಿದೆ. ಅಲ್ಲದೆ ಬಿಸಿಸಿಐ ಪ್ಯಾನಲ್‌ನಲ್ಲಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸುವ ಅವಕಾಶಗಳಿದೆ.

Story first published: Monday, June 27, 2022, 17:41 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X