ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಯಲ್ಲಿ ಧವನ್ ಅಲ್ಲದೆ ಸತತ ಶತಕ ಸಿಡಿಸಿದ ಕಲಿಗಳು ಯಾರು?

Cricketers with centuries in consecutive T20

ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಸಕತ್ ಆಗಿ ಆಡುತ್ತಿದ್ದು, ಪ್ರತಿ ಇನ್ನಿಂಗ್ಸ್ ನಲ್ಲೂ ದಾಖಲೆ ಬರೆಯುತ್ತಿದ್ದಾರೆ. 5000ರನ್ ಗಳಿಸಿದ ಕ್ರಿಕೆಟರ್ಸ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ನಾಲ್ಕನೇ ಭಾರತೀಯ ಆಟಗಾರ ಹಾಗೂ ಒಟ್ಟಾರೆ ಐದನೇ ಕ್ರಿಕೆಟರ್ ಎಂಬ ಸಾಧನೆ ಮಾಡಿದ್ದಾರೆ.

ಐಪಿಎಲ್ ನಲ್ಲಿ ಸತತ ಶತಕ ಸಿಡಿಸಿದ ಧವನ್ ಅವರು ಐಪಿಎಲ್ ನಲ್ಲಿ ಆರಂಭಿಕ ಆಟಗಾರರಾಗಿ ಕೂಡಾ ಗೇಲ್ ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಓಪನರ್ ಎಂಬ ಸಾಧನೆ ಮಾಡಿದ್ದಾರೆ. ಐಪಿಎಲ್ 2020ರಲ್ಲಿ 10 ಪಂದ್ಯಗಳಿಂದ 465 ರನ್ ಗಳಿಸಿದ್ದಾರೆ.

ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್

ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 61 ಎಸೆತವನ್ನು ಎದುರಿಸಿದ ಧವನ್ 106 ರನ್ ಬಾರಿಸಿ ಅಜೇಯವಾಗುಳಿದರು. 173.77ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಧವನ್ 12 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.

ಸತತ ಎರಡನೇ ಶತಕ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದ ಧವನ್ಸತತ ಎರಡನೇ ಶತಕ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದ ಧವನ್

ಭಾರತದ ಅಂಡರ್ 19 ತಂಡದ ಪ್ರತಿಭೆಗಳಾಗಿ ಬೆಳಕಿಗೆ ಬಂದ ಉನ್ಮುಕ್ತ್ ಚಂದ್, ಇಶಾನ್ ಕಿಶಾನ್ ಅವರು ಸೈಯದ್ ಮುಷ್ತಕ್ ಅಲಿ ಟ್ರೋಫಿ ಟೂರ್ನಮೆಂಟ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದರೆ, ಪಟ್ಟಿಯಲ್ಲಿ ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಕೂಡಾ ಇದ್ದಾರೆ.

ಐಪಿಎಲ್ 5000ರನ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ''ಗಬ್ಬರ್'' ಶಿಖರ್ ಧವನ್ಐಪಿಎಲ್ 5000ರನ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ''ಗಬ್ಬರ್'' ಶಿಖರ್ ಧವನ್

ಟಿ20ಯಲ್ಲಿಸತತ ಶತಕ ಸಿಡಿಸಿದ ಕ್ರಿಕೆಟರ್ಸ್:
ಕ್ರಿಕೆಟರ್ ಹೆಸರು-ಟೂರ್ನಮೆಂಟ್-ಸಾಧನೆಯ ವರ್ಷ

* ಡೇವಿಡ್ ವಾರ್ನರ್-ಚಾಂಪಿಯನ್ಸ್ ಲೀಗ್ ಟಿ20-2011
* ಉನ್ಮುಕ್ತ್ ಚಂದ್-ಸೈಯದ್ ಮುಷ್ತಾಕ್ ಅಲಿ ಟ್ರೋಫಿ-2012
* ಲ್ಯೂಕ್ ರೈಟ್- ನ್ಯಾಟ್ ವೆಸ್ಟ್ ಟಿ20 ಬ್ಲಾಸ್ಟ್-2014
* ಮೈಕಲ್ ಕ್ಲಿಂಜರ್- ನ್ಯಾಟ್ ವೆಸ್ಟ್ ಟಿ20 ಬ್ಲಾಸ್ಟ್-2015
* ಕೆವಿನ್ ಪೀಟರ್ಸನ್-ರಾಮ್ ಸ್ಲಾಮ್ ಟಿ20-2015
* ಮಾರ್ಕೊ ಮಾರಿಯಾಸ್- ಆಫ್ರಿಕಾ ಟಿ20 ಕಪ್-2018
* ರೀಜಾ ಹೆಂಡ್ರಿಕ್ಸ್-ಮಾಂಝಿ ಸೂಪರ್ ಲೀಗ್-2018
* ಇಶಾನ್ ಕಿಶಾನ್-ಸೈಯದ್ ಮುಷ್ತಾಕ್ ಅಲಿ ಟ್ರೋಫಿ-2019
* ಶಿಖರ್ ಧವನ್- ಇಂಡಿಯನ್ ಪ್ರೀಮಿಯರ್ ಲೀಗ್-2020.

Story first published: Wednesday, October 21, 2020, 14:30 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X