ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಯೋಬಬಲ್‌ನಲ್ಲಿ ನಮ್ಮ ಆಟಗಾರರು ಸುರಕ್ಷಿತರಾಗಿದ್ದರು: ಗ್ರೇಮ್ ಸ್ಮಿತ್

CSA Director says South Africa players felt secure in IPLs bio-bubble

ಕ್ರಿಕೆಟ್ ಸೌತ್ ಆಫ್ರಿಕಾದ ನಿರ್ದೇಶಕ ಗ್ರೇಮ್ ಸ್ಮಿತ್ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರ ಕೂಡ ಅಸುರಕ್ಷಿತ ಭಾವನೆಯನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಬಿಸಿಸಿಐ ಅತ್ಯುತ್ತಮ ಬಯೋಬಬಲ್‌ಅನ್ನು ನಿರ್ಮಾಣ ಮಾಡಿದ್ದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಸುರಕ್ಷಿತರಾಗಿದ್ದೇವೆ ಎಂಬ ಭಾವನೆಯನ್ನು ಹೊಂದಿದ್ದರು ಎಂದು ಸ್ಮಿತ್ ಹೇಳಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಮೊದಲಾರ್ಧ ಸಂಪೂರ್ಣ ಗೊಳಿಸಿದ ನಂತರ ಬಯೋಬಬಲ್‌ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದ ಕಾರಣ ಮುಂದೂಡಲಾಗಿದೆ. ಬಳಿಕ ಎಲ್ಲಾ ಆಟಗಾರರು ಕೂಡ ತಮ್ಮ ತವರಿಗೆ ಸುರಕ್ಷಿತವಾಗಿ ಮರಳಿದ್ದಾರೆ.

ಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾ

ನಾವು ಯಾವುದೇ ರೀತಿಯಲ್ಲಿಯೂ ನಿರ್ಣಯವನ್ನು ನೀಡುವುದಿಲ್ಲ. ನಮ್ಮ ಆಟಗಾರರೊಂದಿಗೆ ನಾವು ಮಾತನಾಡಿದ್ದು ಅವರು ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಬಯೋ ಸೆಕ್ಯೂರ್ ವಾತಾವರಣ ಭಾರತದಲ್ಲಿ ನಿಜಕ್ಕೂ ಉತ್ತಮ ಅನುಭವವಾಗಿತ್ತು ಎಂದಿರುವುದಾಗಿ ಗ್ರೇಮ್ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.

"ಈ ಸಾಂಕ್ರಾಮಿಕ ರೋಗ ಈಗ ಕೆರಳಿದಂತಾಗಿದ್ದು ಅಪಾಯದ ಸನ್ನಿವೇಶಗಳು ಯಾವಾಗಬೇಕಾದರೂ ಎದುರಾಗಬಹುದು. ಹೀಗಾಗಿ ಆಯೋಜಕರನ್ನು ಇಂತಾ ಸನ್ನಿವೇಶದಲ್ಲಿ ತಪ್ಪಿಸಸ್ಥರನ್ನಾಗಿ ಮಾಡುವುದು ಅಸಾಧ್ಯ" ಎಂದು ಗ್ರೇಮ್ ಸ್ಮಿತ್ ಇದೇ ಸಂದರ್ಭದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್

ಇನ್ನು ಸುರಕ್ಷಿತವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ತವರಿಗೆ ಮರಳಲು ಬಿಸಿಸಿಐ ಮಾಡಿದ ಪ್ರಯತ್ನವನ್ನು ಸ್ಮಿತ್ ಇದೇ ಸಂದರ್ಭದಲ್ಲಿ ಕೊಂಡಾಡಿದ್ದಾರೆ. ಭಾರತದಿಂದ ಎಲ್ಲಾ ದಕ್ಷಿಣ ಆಫ್ರಿಕಾ ಮೂಲದ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದು ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದಾರೆ.

Story first published: Friday, May 7, 2021, 15:10 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X