ಜೋಹಾನ್ಸ್‌ಬರ್ಗ್‌ ಸೂಪರ್‌ ಕಿಂಗ್ಸ್‌ ನಾಯಕನಾಗಿ ಫಾಫ್ ಡುಪ್ಲೆಸಿಸ್ ಆಯ್ಕೆ: ಕೋಚ್ ಫ್ಲೆಮಿಂಗ್

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೋಹಾನ್ಸ್‌ ಬರ್ಗ್‌ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಚೊಚ್ಚಲ ಆವೃತ್ತಿಯು 2023ರಲ್ಲಿ ಮುನ್ನಡೆಯಲಿದ್ದು JSK ತಂಡವನ್ನ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ.

ಐಪಿಎಲ್ 2022ರ ಸೀಸನ್‌ಗೂ ಮುಂಚೆ ಹರಾಜಿನಲ್ಲಿ ಸ್ವಲ್ಪದರಲ್ಲೇ ಮಿಸ್ ಆರ್‌ಸಿಬಿ ತೆಕ್ಕೆಗೆ ಸೇರಿದ್ದ್ ಫಾಫ್ ಡುಪ್ಲೆಸಿಸ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ತನ್ನ ಇನ್ನೊಂದು ಫ್ರಾಂಚೈಸಿಗೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. 3,75,000 ಅಮೆರಿಕನ್ ಡಾಲರ್ ಚೆನ್ನೈ ಸೂಪರ್ ಕಿಂಗ್ಸ್ ಸ್ಪೋರ್ಟ್ಸ್ ಲಿಮಿಟೆಡ್‌ ಸಹಿ ಮಾಡಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ರಮುಖ ಆಟಗಾರನಾಗಿದ್ದ ಡುಪ್ಲೆಸಿಸ್

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ರಮುಖ ಆಟಗಾರನಾಗಿದ್ದ ಡುಪ್ಲೆಸಿಸ್

ಫಾಫ್ ಡುಪ್ಲೆಸಿಸ್ ಸೂಪರ್ ಕಿಂಗ್ಸ್ ಪರ ಆಡುವುದು ಮಾತ್ರವಲ್ಲದೆ ತಂಡವನ್ನು ಮುನ್ನಡೆಸುವುದು ಇದೀಗ ಅಧಿಕೃತವಾಗಿರುವುದರಿಂದ ಸಿಎಸ್‌ಕೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಡುಪ್ಲೆಸಿಸ್ 2011 ರಿಂದ 2021 ರವರೆಗೆ ಸಿಎಸ್‌ಕೆ ಫ್ರಾಂಚೈಸಿಯನ್ನು ಅಮಾನತುಗೊಳಿಸಿದಾಗ ಎರಡು ಋತುಗಳನ್ನು ಹೊರತುಪಡಿಸಿ ಚೆನ್ನೈ ತಂಡದ ಪರ ಆಡಿದ್ದಾರೆ.

ಹರಾಜಿಗೂ ಮುನ್ನ ಐವರು ಆಟಗಾರರನ್ನ ಪಡೆಯಲು ಆರು ಫ್ರಾಂಚೈಸಿಗಳಿಗೆ ಅವಕಾಶ

ಹರಾಜಿಗೂ ಮುನ್ನ ಐವರು ಆಟಗಾರರನ್ನ ಪಡೆಯಲು ಆರು ಫ್ರಾಂಚೈಸಿಗಳಿಗೆ ಅವಕಾಶ

ದಕ್ಷಿಣ ಆಪ್ರಿಕಾ ಟಿ20 ಲೀಗ್‌ನಲ್ಲಿ ಭಾಗಿಯಾಗಲಿರುವ ಆರು ಫ್ರಾಂಚೈಸಿಗಳಿಗೆ ಆಟಗಾರರ ಹರಾಜಿಗೂ ಮುನ್ನ ಐವರು ಆಟಗಾರರನ್ನು ಪಡೆಯಲು ಅವಕಾಶ ನೀಡಿತ್ತು. ಅದರ ಕ್ರಮವಾಗಿಯೇ ಫಾಫ್ ಡುಪ್ಲೆಸಿಸ್ ಜೊತೆಗೆ ಳೆದ ಋತುವಿನವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಲಿದ್ದಾರೆ. ಜೊತೆಗೆ ಶ್ರೀಲಂಕಾದ ಮಹೀಶ್ ತೀಕ್ಷಣ ಕೂಡ ತಂಡ ಸೇರಿದ್ದರು. ಈ ಇಬ್ಬರು ಆಟಗಾರರು ಕ್ರಮವಾಗಿ 4,00,000 ಡಾಲರ್ ಮತ್ತು 2,00,000 ಡಾಲರ್ ಮೊತ್ತಕ್ಕೆ ಸಹಿ ಮಾಡಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ವಿಜೇತ ಅರ್ಜುನ್ ರಣತುಂಗ ವಿರುದ್ಧ ಮಾನನಷ್ಟ ಮೊಕದ್ದಮೆ: 2 ಬಿಲಿಯನ್ ಹಣ ನೀಡುವಂತೆ SLC ಬೇಡಿಕೆ

ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಮೂರನೇ ಆಟಗಾರ ಮೋಯಿನ್ ಅಲಿ

ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಮೂರನೇ ಆಟಗಾರ ಮೋಯಿನ್ ಅಲಿ

ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಪ್ರಸ್ತುತ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಹೆಚ್ಚು ಮೊತ್ತಕ್ಕೆ ತಂಡ ಸೇರಿಕೊಂಡಿರುವ ಮೂರನೇ ಆಟಗಾರನಾಗಿದ್ದಾರೆ. ಇದಲ್ಲದೆ ಮೊಯಿನ್ ಅಲಿ ಯುಎಇ ಟಿ20 ಲೀಗ್‌ನಲ್ಲೂ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ. ಆದ್ರೆ ಒಂದೇ ಸಮಯದಲ್ಲಿ ಎರಡೂ ಟೂರ್ನಿಗಳು ನಡೆಯುವ ಕಾರಣ ಯುಎಇ ಟಿ20 ಲೀಗ್‌ನಲ್ಲಿ ಮೋಯಿನ್ ಆಡುವುದು ಅನುಮಾನವಾಗಿದೆ.

ಈ ಮೇಲೆ ಹೆಸರಿಸಿದ ಮೂವರು ಆಟಗಾರರನ್ನ ಹೊರತುಪಡಿಸಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ 1,75,000 ಡಾಲರ್ ಮೊತ್ತಕ್ಕೆ, ಆಟಗಾರರ ಸೆಟ್ ಅನ್ನು ಪೂರ್ಣಗೊಳಿಸಲು ಅನ್ ಕ್ಯಾಪ್ಡ್ ಯುವ ಆಟಗಾರ ಗೆರಾಲ್ಡ್ ಕೋಟ್ಜಿ 50,000 ಅಮೆರಿಕನ್ ಡಾಲರ್‌ಗೆ ಸಹಿ ಹಾಕಿದರು.

ಭಾರತದ ಫುಟ್ಬಾಲ್ ಫೆಡರೇಶನ್ ಬ್ಯಾನ್ ಮಾಡಿದ ಫಿಫಾ: ಬೈಚುಂಗ್ ಭುಟಿಯಾ ಪ್ರತಿಕ್ರಿಯೆ

ಸ್ಟೀಫನ್ ಫ್ಲೆಮಿಂಗ್ ಕೋಚ್ ಆಗಿ ಆಯ್ಕೆ

ಸ್ಟೀಫನ್ ಫ್ಲೆಮಿಂಗ್ ಕೋಚ್ ಆಗಿ ಆಯ್ಕೆ

ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಜೋಹಾನ್ಸ್‌ಬರ್ಗ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದರೆ, ಎರಿಕ್ ಸಿಮನ್ಸ್ ಅವರ ಸಹಾಯಕರಾಗಿ ಇರುತ್ತಾರೆ.
ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವರ ಸಹಾಯಕರಾಗಿದ್ದವರೆಲ್ಲರೂ ದಕ್ಷಿಣ ಆಫ್ರಿಕಾದಲ್ಲಿ ಅವರೊಂದಿಗೆ ಇರುತ್ತಾರೆ.

17 ಆಟಗಾರರ ತಂಡವನ್ನು ಒಟ್ಟುಗೂಡಿಸಲು ಪ್ರತಿ ಫ್ರಾಂಚೈಸಿಗೆ $2 ಮಿಲಿಯನ್ ವೇತನದ ಕ್ಯಾಪ್ ನೀಡಲಾಗಿದೆ ಎಂಬುದು ಗಮನಾರ್ಹ.

For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 17:39 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X