ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSA T20 League: ಸಿಎಸ್‌ಕೆ ಮಾಲೀಕತ್ವದ ತಂಡಕ್ಕೆ ಅಲಿ, ಡು ಪ್ಲೆಸಿಸ್, ಮಹೀಶ್ ತೀಕ್ಷಣ ಸಹಿ

CSA T20 League: Moeen Ali, Faf du Plessis And Maheesh Theekshana Sign For CSK-owned Team

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಒಡೆತನದ ಜೋಹಾನ್ಸ್‌ಬರ್ಗ್ ಫ್ರಾಂಚೈಸ್ ಕ್ರಿಕೆಟ್ ಸೌತ್ ಆಫ್ರಿಕಾ (CSA) ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಸಿಎಸ್‌ಕೆಯ ಮೊಯಿನ್ ಅಲಿ, ಮಹೀಶ್ ತೀಕ್ಷಣ, ರೊಮಾರಿಯೋ ಶೆಫರ್ಡ್ ಮತ್ತು ಜೆರಾಲ್ಡ್ ಕೋಟ್ಜಿ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಈ ಐವರಲ್ಲಿ ಮೊಯಿನ್ ಅಲಿ ಮತ್ತು ಮಹೇಶ್ ತೀಕ್ಷಣ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ. 2022ರ ಆವೃತ್ತಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖರೀದಿಸುವ ಮೊದಲು ಫಾಫ್ ಡು ಪ್ಲೆಸಿಸ್ ಸೂಪರ್ ಕಿಂಗ್ಸ್‌ಗಾಗಿ ಕೆಲವು ಸೀಸನ್‌ಗಳನ್ನು ಆಡಿದ್ದರು.

ರಿಷಭ್ ಪಂತ್ ಫಿನಿಶರ್ ಅಲ್ಲ; ಏಷ್ಯಾ ಕಪ್ 2022ಕ್ಕೂ ಮುನ್ನ ಮಾಜಿ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ!ರಿಷಭ್ ಪಂತ್ ಫಿನಿಶರ್ ಅಲ್ಲ; ಏಷ್ಯಾ ಕಪ್ 2022ಕ್ಕೂ ಮುನ್ನ ಮಾಜಿ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ!

ಮತ್ತೊಂದೆಡೆ, ರೊಮಾರಿಯೋ ಶೆಫರ್ಡ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ವೆಸ್ಟ್ ಇಂಡೀಸ್ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್‌ಗಾಗಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಪ್ರಭಾವಶಾಲಿ ಪ್ರದರ್ಶನದ ಹಿನ್ನೆಲೆಯಲ್ಲಿ, ರೊಮಾರಿಯೋ ಶೆಫರ್ಡ್ 2022ರ ಆವೃತ್ತಿಗೆ ಮುಂಚಿತವಾಗಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಆಟಗಾರ ಸೇರಿದಂತೆ ದೇಶದಿಂದ ಮೂರು ಆಟಗಾರರು

ಜೆರಾಲ್ಡ್ ಕೋಟ್ಜಿಗೆ ಸಂಬಂಧಿಸಿದಂತೆ, ಅವರು ಇನ್ನೂ ದಕ್ಷಿಣ ಆಫ್ರಿಕಾಕ್ಕೆ ಪಾದಾರ್ಪಣೆ ಮಾಡಿಲ್ಲ. ಆದರೆ ಅವರ ಹೆಸರಿಗೆ 83 ವಿಕೆಟ್‌ಗಳನ್ನು ಹೊಂದಿದ್ದಾರೆ. ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ. ಫಾಫ್ ಡು ಪ್ಲೆಸಿಸ್ ಅವರನ್ನು ಶಿಫಾರಸು ಮಾಡಿದ ನಂತರ ಜೆರಾಲ್ಡ್ ಅವರನ್ನು ಆಯ್ಕೆ ಮಾಡಲಾಯಿತು.

"CSA ನಿಯಮಗಳ ಪ್ರಕಾರ, ನಾವು ಲಭ್ಯವಿರುವ ಆಟಗಾರರ ಒಪ್ಪಂದದ ಪಟ್ಟಿಯಿಂದ ನಾಲ್ಕು ಆಟಗಾರರನ್ನು ತೆಗೆದುಕೊಳ್ಳಲು ಅರ್ಹರಾಗಿದ್ದೇವೆ. ದಕ್ಷಿಣ ಆಫ್ರಿಕಾದ ಒಬ್ಬ ರಾಷ್ಟ್ರೀಯ ಆಟಗಾರ ಸೇರಿದಂತೆ ದೇಶದಿಂದ ಮೂರು ಮತ್ತು ಇತರೆ ದೇಶಗಳಿಂದ ಎರಡಕ್ಕಿಂತ ಹೆಚ್ಚಿಲ್ಲದ ಆಟಗಾರರನ್ನು ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದೇವೆ," ಎಂದು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಸಿಇಒ ಕೆ.ಎಸ್. ವಿಶ್ವನಾಥನ್ ಹೇಳಿದ್ದಾರೆ.

ಮೊಯಿನ್ ಅಲಿ, ಮಹೀಶ್ ಆಯ್ಕೆ ಮಾಡಲು ನಿರ್ಧಾರ

ಮೊಯಿನ್ ಅಲಿ, ಮಹೀಶ್ ಆಯ್ಕೆ ಮಾಡಲು ನಿರ್ಧಾರ

"ಕ್ರಿಕೆಟ್ ದಕ್ಷಿಣ ಆಫ್ರಿಕಾದಿಂದ ಗುತ್ತಿಗೆ ಪಡೆದಿರುವ ನಾಲ್ವರು ಆಟಗಾರರಾಗಿ ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಮಹೀಶ್ ಮತ್ತು ರೊಮಾರಿಯೊ ಅವರನ್ನು ಆಯ್ಕೆ ಮಾಡಲು ನಾವು ನಿರ್ಧರಿಸಿದ್ದೇವೆ. ದಕ್ಷಿಣ ಆಫ್ರಿಕಾದಿಂದ ಒಬ್ಬ ಅಂತಾರಾಷ್ಟ್ರೀಯ ಆಟಗಾರನನ್ನು ತೆಗೆದುಕೊಳ್ಳಲು ನಮಗೆ ಅವಕಾಶವಿದೆ. ಫಾಫ್ ಶಿಫಾರಸು ಮಾಡಿದಂತೆ ನಾವು ಜೆರಾಲ್ಡ್ ಅವರನ್ನು ನಿರ್ಧರಿಸಿದ್ದೇವೆ," ಎಂದು ಅವರು ಹೇಳಿದರು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಸುಮಾರು ಒಂದು ದಶಕದ ಕಾಲ ಆಡಿದ ನಂತರ ಸಿಎಸ್‌ಎ ಟಿ20 ಲೀಗ್‌ಗೆ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ಸಿಎಸ್‌ಕೆ ಸಿಇಒ ಸಂತೋಷಪಟ್ಟರು.

ಫಾಫ್ ಅವರನ್ನು ಮರಳಿ ಪಡೆದಿರುವುದಕ್ಕೆ ನಮಗೆ ಸಂತೋಷ

ಫಾಫ್ ಅವರನ್ನು ಮರಳಿ ಪಡೆದಿರುವುದಕ್ಕೆ ನಮಗೆ ಸಂತೋಷ

"ಕಳೆದ 10 ವರ್ಷಗಳಿಂದ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬೆನ್ನೆಲುಬಾಗಿದ್ದರು. ಅವರು ನಮ್ಮ ತಂಡದ ಅತ್ಯಂತ ಸ್ಥಿರ ಆಟಗಾರರಲ್ಲಿ ಒಬ್ಬರು. ಐಪಿಎಲ್‌ನ ಕೊನೆಯ ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡುವ ಅದೃಷ್ಟ ನಮಗೆ ಇರಲಿಲ್ಲ. ನಾವು ಅವಕಾಶಕ್ಕಾಗಿ ಹುಡುಕುತ್ತಿದ್ದೇವೆ ಮತ್ತು ಅದು ಸಿಎಸ್ಎ ಟಿ20 ಲೀಗ್‌ನಲ್ಲಿ ಬಂದಿತು. ನಾವು ಸೂಪರ್ ಕಿಂಗ್ಸ್ ಕುಟುಂಬದೊಂದಿಗೆ ಫಾಫ್ ಅವರನ್ನು ಮರಳಿ ಪಡೆದಿರುವುದಕ್ಕೆ ನಮಗೆ ಸಂತೋಷವಾಗಿದೆ,'' ಎಂದರು.

"ಫಾಫ್ ಡು ಪ್ಲೆಸಿಸ್ ಮರಳಿ ಬಂದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾಡಿದಂತೆಯೇ ಉತ್ತಮ ಪ್ರದರ್ಶನ ನೀಡಲು ಇದು ಉತ್ತಮ ಅವಕಾಶವಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರ ಮತ್ತು ನಾಯಕನಾಗಿ ಅವರ ಅನುಭವ, ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು ಅಮೂಲ್ಯವಾದುದು. ಅವರು ತಂಡಕ್ಕೆ ಪ್ರವೇಶಿಸುವುದರೊಂದಿಗೆ ನಮಗೆ ಉತ್ತಮ ಭವಿಷ್ಯವಿದೆ ಎಂದು ನನಗೆ ಖಾತ್ರಿಯಿದೆ," ಎಂದು ಸಿಎಸ್‌ಕೆ ಸಿಇಒ ವಿಶ್ವನಾಥನ್ ಅಭಿಪ್ರಾಯಪಟ್ಟರು.

Story first published: Sunday, August 21, 2022, 20:03 [IST]
Other articles published on Aug 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X