CSA ಟಿ20 ಲೀಗ್: RPSG-ಮಾಲೀಕತ್ವದ ಡರ್ಬನ್ ಫ್ರಾಂಚೈಸ್ ಪರ ಆಡಲಿದ್ದಾರೆ ಕ್ವಿಂಟನ್ ಡಿ ಕಾಕ್, ಹೋಲ್ಡರ್‌

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಸೇರಿದಂತೆ ಕೈಲ್ ಮೇಯರ್ಸ್, ರೀಸ್ ಟೋಪ್ಲೆ ಮತ್ತು ಅನ್‌ಕ್ಯಾಪ್ಡ್ ಪ್ರೆನೆಲನ್ ಸುಬ್ರಾಯೆನ್ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ RPSG ಗ್ರೂಪ್-ಮಾಲೀಕತ್ವದ ಡರ್ಬನ್ ಫ್ರಾಂಚೈಸ್ ತಂಡದ ಪರ ಸಹಿ ಮಾಡಿದ ಐದು ಆಟಗಾರರಾಗಿದ್ದಾರೆ.

ವಿಡಿಯೋ: ರಾಯಲ್ ಲಂಡನ್ ಕಪ್‌; ಒಂದೇ ಓವರ್‌ನಲ್ಲಿ 22 ರನ್ ಚಚ್ಚಿ ಶತಕ ಬಾರಿಸಿದ ಪೂಜಾರವಿಡಿಯೋ: ರಾಯಲ್ ಲಂಡನ್ ಕಪ್‌; ಒಂದೇ ಓವರ್‌ನಲ್ಲಿ 22 ರನ್ ಚಚ್ಚಿ ಶತಕ ಬಾರಿಸಿದ ಪೂಜಾರ

ಕ್ವಿಂಟನ್ ಡಿ ಕಾಕ್, ಜೇಸನ್ ಹೋಲ್ಡರ್ ಮತ್ತು ಕೈಲ್ ಮೇಯರ್ಸ್ ಐಪಿಎಲ್ 2022ರಲ್ಲಿ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಈಗ ಅದೇ ತಂಡದ ಮಾಲೀಕತ್ವದ ಪರ CSA ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕತ್ವ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕತ್ವ

"ನಾನು ಎಲ್ಲಾ ಆಟಗಾರರನ್ನು RPSG ಡರ್ಬನ್ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಇದು ಹೊಸ ಆರಂಭ ಮತ್ತು ಭರವಸೆ ತುಂಬಿದೆ. ಪ್ರತಿಭಾವಂತ ಆಟಗಾರರು ತಂಡದ ಅಡಿಪಾಯವನ್ನು ಗಟ್ಟಿಗೊಳಿಸುತ್ತಾರೆ ಮತ್ತು ನಮ್ಮ ಪ್ರಮುಖ ಪ್ರದರ್ಶನದ ತತ್ವವನ್ನು ಎತ್ತಿಹಿಡಿಯುತ್ತಾರೆ ಎಂಬ ವಿಶ್ವಾಸವಿದೆ," ಎಂದು RPSG ಅಧ್ಯಕ್ಷರಾದ ಸಂಜೀವ್ ಗೋಯೆಂಕಾ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ನಿಯಮಗಳ ಪ್ರಕಾರ, ಆರು ಫ್ರಾಂಚೈಸಿಗಳು ತಮ್ಮ 17 ತಂಡವನ್ನು ರಚಿಸಲು, ಹರಾಜಿನ ಮೊದಲು ಮೂರು ವಿದೇಶಿ ಆಟಗಾರರನ್ನು ಒಳಗೊಂಡ ಐದು ಆಟಗಾರರು, ಒಬ್ಬ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟಿಗ ಮತ್ತು ಒಬ್ಬ ಅನ್ ಕ್ಯಾಪ್ಡ್ ದಕ್ಷಿಣ ಆಫ್ರಿಕಾದ ಆಟಗಾರರನ್ನು ಸಹಿ ಮಾಡಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವದ MI ಕೇಪ್ ಟೌನ್

ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವದ MI ಕೇಪ್ ಟೌನ್

ಈ ಹಿಂದೆ, ಜುಲೈ 25ರಂದು ಡರ್ಬನ್ ಫ್ರಾಂಚೈಸ್ ಮುಂಬರುವ ಜನವರಿ ಮತ್ತು ಫೆಬ್ರವರಿ 2023ರಲ್ಲಿ ನಡೆಯಲಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ತಂಡಕ್ಕೆ ತಮ್ಮ ಮುಖ್ಯ ಕೋಚ್ ಆಗಿ ಲ್ಯಾನ್ಸ್ ಕ್ಲೂಸೆನರ್ ಅವರನ್ನು ಹೆಸರಿಸಿತ್ತು.

ಡರ್ಬನ್ ಫ್ರಾಂಚೈಸ್, MI ಕೇಪ್ ಟೌನ್ ನಂತರ ತಮ್ಮ ಟೂರ್ನಿ-ಪೂರ್ವ ಸಹಿ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ ಎರಡನೇ ತಂಡವಾಗಿದೆ. ಗುರುವಾರದಂದು ಐಪಿಎಲ್‌ನಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಎಂಐ ಕೇಪ್ ಟೌನ್ ತಂಡ ರಶೀದ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್, ಕಗಿಸೊ ರಬಾಡಾ ಮತ್ತು ಡೆವಾಲ್ಡ್ ಬ್ರೆವಿಸ್ ಸಹಿ ಹಾಕಿರುವುದಾಗಿ ಘೋಷಿಸಿದರು.

ಟಿ20 ಲೀಗ್‌ನಲ್ಲಿ ಆರು ತಂಡಗಳು

ಟಿ20 ಲೀಗ್‌ನಲ್ಲಿ ಆರು ತಂಡಗಳು

ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿರುವ ಎಲ್ಲಾ ಆರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ, ಲಕ್ನೋ, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಸಹ ಮಾಲೀಕರು ಖರೀದಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ20 ಲೀಗ್ ಯುಎಇಯ ಇಂಟರ್‌ನ್ಯಾಷನಲ್ ಲೀಗ್ ಟಿ20 (ILT20) ನೊಂದಿಗೆ ನೇರವಾಗಿ ಘರ್ಷಣೆಯನ್ನು ನಡೆಸಲಿದೆ. ಇದು ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ಮತ್ತು ಬಾಂಗ್ಲಾದೇಶದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಇದೇ ಕಾರ್ಯಾಚರಣೆಯ ಅವಧಿಯಲ್ಲಿಯೂ ಇದೆ.

ಪಾರ್ಲ್ ರಾಯಲ್ಸ್ ತಂಡಕ್ಕೆ ಬಟ್ಲರ್, ಮಿಲ್ಲರ್

ಪಾರ್ಲ್ ರಾಯಲ್ಸ್ ತಂಡಕ್ಕೆ ಬಟ್ಲರ್, ಮಿಲ್ಲರ್

ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ಗ್ರೂಪ್ ಶುಕ್ರವಾರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಆಡುವ ತಮ್ಮ ಫ್ರಾಂಚೈಸಿಯ ಹೊಸ ಹೆಸರನ್ನು ಪ್ರಕಟಿಸಿದೆ. ತಂಡವನ್ನು ಪಾರ್ಲ್ ರಾಯಲ್ಸ್ ಎಂದು ನಾಮಕರಣ ಮಾಡಲಾಗಿದ್ದು, ಪಾರ್ಲ್ ನಗರವನ್ನು ಪ್ರತಿನಿಧಿಸುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಚಾಂಪಿಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ಸ್ ಗ್ರೂಪ್ ಈಗಾಗಲೇ ಹೊಂದಿದೆ. ಅವರು ಬಾರ್ಬಡೋಸ್ ರಾಯಲ್ಸ್ ಎಂದು ಕರೆಯಲ್ಪಡುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುವ ತಂಡವನ್ನು ಸಹ ಹೊಂದಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಮತ್ತು ಗುಜರಾತ್ ಟೈಟನ್ಸ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರು ಮೊದಲ ನಾಲ್ಕು ಸಹಿಗಳನ್ನು ಸಹ ಪರ್ಲ್ ರಾಯಲ್ಸ್ ಪ್ರಕಟಿಸಿದರು. ಇವರೊಂದಿಗೆ ವೆಸ್ಟ್ ಇಂಡಿಯಾದ ವೇಗಿ ಓಬೆಡ್ ಮೆಕಾಯ್ ಮತ್ತು ಕಾರ್ಬಿನ್ ಬಾಷ್ ಸೇರಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, August 13, 2022, 13:45 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X