ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆ

CSK official confirms MS Dhoni will be the first player to be retained by Chennai Super Kings for IPL 2022

ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಯುತವಾಗಿ ಗೆದ್ದು ಚಾಂಪಿಯನ್ ತಂಡ ಎನಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ನೇತೃತ್ವದ ತಂಡ ನಾಲ್ಕನೇ ಬಾರಿಗೆ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯ ಗೆದ್ದ ಬಳಿಕ ಕಾಮೆಂಟೇಟರ್ ಹರ್ಷ ಬೋಗ್ಲೆ ಮಾತಿಗೆ ಪ್ರತಿಕ್ರಿಯಿಸುತ್ತಾ ತಾನಿನನ್ಊ ಆದಿಂದ ಹಿಂದಕ್ಕೆ ಸರಿದಿಲ್ಲ ಎಂದಿದ್ದರು ಎಂಎಸ್ ಧೋನಿ. ಈ ಮೂಲಕ ಮುಂಬುವ ಐಪಿಎಲ್‌ನಲ್ಲಿಯೂ ಪಾಲ್ಗೊಳ್ಳುವುದನ್ನು ಧೋನಿ ಖಚಿತಪಡಿಸಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಕೂಡ ಧೋನಿ ವಿಚಾರವಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಎಎನ್‌ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿಯೊಬ್ಬರು ಮುಂಬರುವ ಐಪಿಎಲ್‌ನಲ್ಲಿಯೂ ಧೋನಿ ಚೆನ್ನೈ ಸೂಒರ್ ಕಿಂಗ್ಸ್ ಪರವ ಆಗಿ ಆಡಲಿದ್ದಾರೆ ಎಂದಿದ್ದಾರೆ. ಮುಂದಿನ ಐಪಿಎಲ್ ಆವೃತ್ತಿಗೆ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿಯನ್ನು ತನ್ನ ಮೊದಲ ರೀಟೆನ್ಶನ್ ಕಾರ್ಡ್ ಬಳಸಿಕೊಂಡು ಉಳಿಸಿಕೊಳ್ಳಲಿದೆ ಎಂದಿದ್ದಾರೆ.

ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

"ಹರಾಜಿನಲ್ಲಿ ರೀಟೆನ್ಶನ್ ಕಾರ್ಡ್ ಇರಲಿದೆ. ಎಷ್ಟು ರೀಟೆನ್ಶನ್ ಕಾರ್ಡ್ ಇರಲಿದೆ ಎಂಬುದು ಇನ್ನೂ ನಮಗೆ ಖಚಿತವಾಗಿಲ್ಲ. ಆದರೆ ಎಂಎಸ್ ಧೋನಿ ವಿಚಾರವಾಗಿ ಎಷ್ಟು ರೀಟೆನ್ಶನ್ ಕಾರ್ಡ್ ದೊರೆಯಲಿದೆ ಎಂಬುದು ನಂತರದ ಸಂಗತೊಯಾಗಲಿದೆ ಯಾಕೆಂದರೆ ಪ್ರಾಮಾಣಿಕವಾಗಿ ನಾವು ಹೇಳುವುದೇನೆಂದರೆ ಮೊದಲ ರೀಟೆನ್ಶನ್ ಕಾರ್ಡನ್ನು ನಾವು ಬಳಸುವುದು ಎಂಎಸ್ ಧೋನಿ ಮೇಲೆ. ಈ ಹಡಗಿಗೆ ತನ್ನ ನಾಯಕನ ಅಗತ್ಯವಿದೆ. ಈ ಮೂಲಕ ಮುಂದಿನ ಬಾರಿಯೂ ಅವರು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಖಚಿತಪಡುಸುತ್ತೇವೆ" ಎಂದಿದ್ದಾರೆ ಸಿಎಸ್‌ಕೆ ಫ್ರಾಂಚೈಸಿಯ ಅಧಿಕಾರಿ.

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

2020ರ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪ್ಲೇಆಫ್‌ಗೆ ಪ್ರವೇಶಿಸದೇ ಹೊರಬಿದ್ದಿತ್ತು. ಏಳನೇ ಸ್ಥಾನವನ್ನು ಪಡೆದು ಹೀನಾಯವಾಗಿ ತಂಡ ಟೂರ್ನಿಯನ್ನು ಅಂತ್ಯಗೊಳಿಸಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಪಡೆ ಅಮೋಘ ರೀತಿಯಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಎನಿಸಿದೆ.

IPL ಮೆಗಾ ಹರಾಜಿನಲ್ಲಿ ಧೋನಿ ಉಳಿಸಿಕೊಳ್ಳಲು CSK ಮಾಸ್ಟರ್ ಪ್ಲಾನ್ | Oneindia Kannada

ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಕ್ಷಣದಲ್ಲಿ ಕಳೆದ ಅಕ್ಟೋಬರ್ 15ರಂದು ನಾಯಕ ಎಂಎಸ್ ಧೋನಿ ಬಳಿ ಮಹಾ ಹರಾಜಿನ ವಿಚಾರವಾಗಿ. ಈ ಪ್ರಶ್ನೆಗೆ ಎಂಎಸ್ ಧೋನಿ "ನಾನು ಈಗಾಗಲೇ ಹೇಳಿದ್ದೇನೆ. ಇದೆಲ್ಲವೂ ಬಿಸಿಸಿಐ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಎರಡು ಹೊಸ ತಂಡಗಳು ಐಪಿಎಲ್‌ಗೆ ಬರುತ್ತಿರುವ ಕಾರಣದಾಗಿ ಯಾವುದು ಸಿಎಸ್‌ಕೆಗೆ ಉತ್ತಮವಾಗಲಿದ ಎಂಬುದನ್ನು ನಾವು ನಿರ್ಧಾರ ಮಾಡಬೇಕಿದೆ. ಇದರಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನವನ್ನು ಪಡೆಯುವುದು ಮುಖ್ಯವಲ್ಲ. ಫ್ರಾಂಚೈಸಿಗೆ ತೊಂದರೆಯಾಗದಂತೆ ಬಲಿಷ್ಠ ಕೋರ್ ತಂಡವನ್ನು ಕಟ್ಟಬೇಕಿದೆ. ಮುಂದಿನ 10 ವರ್ಷಗಳ ಕಾಲ ತಂಡಕ್ಕೆ ಸಹಕಾರಿಯಾಗಬಲ್ಲ ಕೋರ್ ಆಟಗಾರರತ್ತ ನಾವು ಚಿತ್ತ ನೆಡಬೇಕಿದೆ" ಎಂದು ಎಂಎಸ್ ಧೋನಿ ಉತ್ತರಿಸಿದ್ದರು.

Story first published: Monday, October 18, 2021, 10:12 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X