ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರಾಜು ಇದ್ದರೆ ಧೋನಿಯನ್ನು ಸಿಎಸ್‌ಕೆ ಉಳಿಸಿಕೊಳ್ಳಬಾರದು: ಚೋಪ್ರಾ

CSK should not retain MS Dhoni if theres a mega auction, says Aakash Chopra

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ಆವೃತ್ತಿಗಾಗಿ ಆಟಗಾರರ ದೊಡ್ಡ ಮಟ್ಟದ ಹರಾಜು ಇದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ನಾಯಕ ಎಂಎಸ್ ಧೋನಿಯನ್ನು ತನ್ನಲ್ಲೇ ಉಳಿಸಿಕೊಳ್ಳಬಾರದು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಹೇಳಿದ್ದಾರೆ.

2021ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಸರಣಿಯ ಸಂಪೂರ್ಣ ಪಟ್ಟಿ2021ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಸರಣಿಯ ಸಂಪೂರ್ಣ ಪಟ್ಟಿ

ಸಿಎಸ್‌ಕೆ ಫ್ರಾಂಚೈಸಿ ಧೋನಿಯನ್ನು ತನ್ನಲ್ಲೇ ಉಳಿಸಿಕೊಂಡರೆ 15 ಕೋ.ರೂ. ಕಳೆದುಕೊಳ್ಳಬೇಕಾಗುತ್ತದೆ. ಅದರ ಬದಲು ಧೋನಿಯನ್ನು ಆಕ್ಷನ್ ಪೂಲ್‌ಗೆ ಇಳಿಸಿ ಮತ್ತೆ ರೈಟ್ ಟು ಮ್ಯಾಚ್ ಕಾರ್ಡ್ ಮುಖಾಂತರ ಮತ್ತೆ ಖರೀದಿಸಬೇಕು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

'ಮೆಗಾ ಆಕ್ಷನ್‌ಗಾಗಿ ಎಂಎಸ್ ಧೋನಿಯನ್ನು ಸಿಎಸ್‌ಕೆ ಬಿಟ್ಟುಕೊಡಬೇಕು. ಮೆಗಾ ಆಕ್ಷನ್ ನಡೆಯುವುದೇ ಹೌದಾದರೆ ನೀವು ಆ ಆಟಗಾರನ ಜೊತೆ ಮೂರು ವರ್ಷಗಳ ಕಾಲ ಇರಬೇಕಾಗುತ್ತದೆ. ಆದರೆ ಧೋನಿ ನಿಮ್ಮ ಜೊತೆ 3 ವರ್ಷಗಳ ಕಾಲ ಇರುತ್ತಾರಾ? ಧೋನಿಯನ್ನು ಇಟ್ಟುಕೊಳ್ಳಬೇಡಿ ಅನ್ನುತ್ತಿಲ್ಲ. ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡಬಹುದು. ಆದರೆ ನೀವು ಅವರನ್ನು ಉಳಿಸಿಕೊಂಡರೆ 15 ಕೋ.ರೂ. ಕಳೆದುಕೊಳ್ಳುವಿರಿ,' ಎಂದು ವಿಡಿಯೋದಲ್ಲಿ ಮಾತನಾಡಿದ ಚೋಪ್ರಾ ಹೇಳಿದ್ದಾರೆ.

ಪ್ರೇಯಸಿಯೊಂದಿಗೆ ಎಂಗೇಜ್ ಆದ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ಪ್ರೇಯಸಿಯೊಂದಿಗೆ ಎಂಗೇಜ್ ಆದ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್

2020ರ ಐಪಿಎಲ್‌ ಸೀಸನ್‌ನಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿತ್ತು. ಐಪಿಎಲ್‌ ಇತಿಹಾಸದಲ್ಲೇ ಸಿಎಸ್‌ಕೆ ಪ್ಲೇ ಆಫ್‌ಗೂ ಪ್ರವೇಶಿಸದೆ ಟೂರ್ನಿಯಿಂದ ಹೊರ ಬಿದ್ದಿದ್ದು ಈ ಸಾರಿಯೇ ಮೊದಲು. ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಧೋನಿ ಈ ಬಾರಿ ಐಪಿಎಲ್‌ ವೇಳೆ ಫಾರ್ಮ್‌ನಲ್ಲಿ ಇರಲಿಲ್ಲ.

Story first published: Tuesday, November 17, 2020, 15:42 [IST]
Other articles published on Nov 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X