ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸಿಎಸ್‌ಕೆಗೆ ಸಿಹಿ ಸುದ್ದಿ, ಇಂದಿನಿಂದ ಅಭ್ಯಾಸ ಆರಂಭ

Csk To Begin Training Today After No Fresh Covid-19 Cases

ಆತಂಕದಲ್ಲಿದ್ದ ಸಿಎಸ್‌ಕೆ ಪಾಳಯ ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೊರೊನಾ ಇಬ್ಬರು ಆಟಗಾರರ ಸಹಿತ 13 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿ ಆತಂಕಕ್ಕೆ ಒಳಗಾಗಿದ್ದ ಇಡೀ ಸಿಎಸ್‌ಕೆ ತಂಡದಲ್ಲಿ ಸಕಾರಾತ್ಮ ಸುದ್ದಿ ಹೊರಬಿದ್ದಿಗೆ. ಯಾವುದೇ ಹೊಸ ಕೊರೊನಾ ವೈರಸ್ ಪ್ರಕರಣಗಳು ಸಿಎಸ್‌ಕೆ ಪಾಳಯದಲ್ಲಿ ಪತ್ತೆಯಾಗದ ಕಾರಣ ಶುಕ್ರವಾರದಿಂದ ಅಭ್ಯಾಸಕ್ಕಿಯುತ್ತಿದೆ ಚೆನ್ನೈ ತಂಡ.

ಗುರುವಾರ ಸಿಎಸ್‌ಕೆ ತಂಡದ ಆಟಗಾರರ ಮತ್ತೊಂದು ಸುತ್ತಿನ ಕೊರೊನಾ ಪರೀಕ್ಷೆಯನ್ನು ನಡೆಸಲಾಯಿತು. ಈ ಪರಿಕ್ಷೆಯಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹೀಗಾಗಿ ನಿಗದಿಯಂತೆಯೇ ಇಂದಿನಿಂದ ಅಭ್ಯಾಸಕ್ಕೆ ಇಳಿಯಲು ಸಜ್ಜಾಗಿದೆ.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

ಈಗಾಗಲೇ ಕೊರೊನಾ ವೈರಸ್‌ಗೆ ತುತ್ತಾಗಿರುವ ಆಟಗಾರರು ಹಾಗೂ ಸಿಬ್ಬಂದುಗಳು ಒಟ್ಟು 14 ಸಿನಗಳ ಕ್ವಾರಂಟೈನ್ ಪೂರೈಸಬೇಕಿದೆ. ಬಳಿಕ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬಂದರಷ್ಟೇ ತಂಡದ ಬಯೋ ಬಬಲ್‌ಗೆ ಸೇರ್ಪಡಗೊಂಡು ಅಭ್ಯಾಸವನ್ನು ಆರಂಭಿಸುವ ಅವಕಾಶವಿದೆ. ಉಳಿದಂತೆ ಎಲ್ಲಾ ಆಟಗಾರರ ಅಭ್ಯಾಸ ಇಂದಿನಿಮದ ಆರಂಭವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳುವ ಮುನ್ನ ಚೆನ್ನೈನಲ್ಲಿ ಅಭ್ಯಾಸ ಶಿಬಿರವನ್ನು ಹಮ್ಮಿಕೊಂಡಿತ್ತು. ಹಿರಿಯ ಆಟಗಾರರಾದ ಎಂಎಸ್ ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರೂ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬಳಿಕ ಯುಎಇಗೆ ಪ್ರಯಾಣಿಸಿದ್ದರು.

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

ಯುಎಇನಲ್ಲಿ ಎಲ್ಲಾ ಆಟಗಾರರು ಕಡ್ಡಾಯ ಕ್ವಾರಂಟೈನ್ ಪೂರೈಸಿದ್ದರು. ಈ ಸಂದರ್ಭದಲ್ಲಿ ಕೊನೆಯ ಕೊರೊನಾ ಪರೀಕ್ಷೆಯ ಸಂದರ್ಭದಲ್ಲಿ ಇಬ್ಬರು ಆಟಗಾರರ ಸಹಿತ 13 ಸಿಬ್ಬಂದಿಗಳು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಪತ್ತೆಯಾಗಿತ್ತು. ಹೀಗಾಗಿ ಎಲ್ಲಾ ಆಟಗಾರರ ಕ್ವಾರಮಟೈನ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ನಿರ್ಧಾರಕ್ಕೆ ಬರಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಪರೀಕ್ಷೆಯಲ್ಲೂ ಉಳಿದ ಎಲ್ಲಾ ಆಟಗಾರರ ವರದಿ ನಕಾರಾತ್ಮಕ ಬಂದಿರುವುದು ಸಿಎಸ್‌ಕೆ ಪಾಳಯದಲ್ಲಿದ್ದ ಆತಂಕದ ಛಾಯೆ ಸರಿದಿದೆ.

Story first published: Friday, September 4, 2020, 14:31 [IST]
Other articles published on Sep 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X