ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇತಿಹಾಸ ನಿರ್ಮಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ನ ಸುರೇಶ್ ರೈನಾ ಸಜ್ಜು!

CSK vs MI: Suresh Raina on the verge of historic first in IPL

ಚೆನ್ನೈ, ಏಪ್ರಿಲ್ 26: ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಆಟಗಾರನಾಗಿ ಗುರುತಿಸಿಕೊಂಡ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್ಮನ್‌ ಸುರೇಶ್ ರೈನಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವುದರಲ್ಲಿದ್ದಾರೆ. ಬಹುಶಃ ಶುಕ್ರವಾರ (ಏಪ್ರಿಲ್ 26) ನಡೆಯುವ ಐಪಿಎಲ್ ಪಂದ್ಯದಲ್ಲಿ ರೈನಾ ಅಪರೂಪದ ಸಾಧನೆ ಮೆರೆಯುವ ನಿರೀಕ್ಷೆಯಿದೆ.

ಚೆನ್ನೈ vs ಮುಂಬೈ ಪಂದ್ಯ, ಶುಕ್ರವಾರ (ಏಪ್ರಿಲ್ 26), Live ಸ್ಕೋರ್‌

1
45920

ಶುಕ್ರವಾರ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 44ನೇ ಪಂದ್ಯಕ್ಕಾಗಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸುರೇಶ್ ರೈನಾ ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್‌ಗಾಗಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.

ಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆ

ಸುರೇಶ್ ರೈನಾ ಜೊತೆ ಇನ್ನಿತರ ಆಟಗಾರರು ರೇಸ್‌ನಲ್ಲಿದ್ದಾರೆ. ಐಪಿಎಲ್ ಅತ್ಯಧಿಕ ಕ್ಯಾಚ್‌ಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

100 ಕ್ಯಾಚ್‌ಗಳ ಸರದಾರ

100 ಕ್ಯಾಚ್‌ಗಳ ಸರದಾರ

ಐಪಿಎಲ್‌ನಲ್ಲಿ ಒಟ್ಟು 99 ಕ್ಯಾಚ್‌ಗಳನ್ನು ಪಡೆದ ದಾಖಲೆ ರೈನಾ ಹೆಸರಿನಲ್ಲಿದೆ. ಅತ್ಯಧಿಕ ಕ್ಯಾಚ್ ಯಾದಿಯಲ್ಲಿ ರೈನಾ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಶುಕ್ರವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಇನ್ನೊಂದೇ ಕ್ಯಾಚ್ ಲಭಿಸಿದರೂ ರೈನಾ ಐಪಿಎಲ್ 100 ಕ್ಯಾಚ್ ಮಾಡಿದ ಭಾರತದ ಮೊದಲ ಆಟಗಾರರಾಗಿ ಗುರುತಿಸಿಕೊಳ್ಳಲಿದ್ದಾರೆ.

ಎರಡನೇ ಸ್ಥಾನದಲ್ಲಿ ಎಬಿಡಿ

ಎರಡನೇ ಸ್ಥಾನದಲ್ಲಿ ಎಬಿಡಿ

ಐಪಿಎಲ್ ಅತ್ಯಧಿಕ ಕ್ಯಾಚ್ ಸರದಾರರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಮ್ಯಾನ್, ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಬಿಡಿ ಒಟ್ಟು 84 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇದೇ ಯಾದಿಯಲ್ಲಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ (82 ಕ್ಯಾಚ್ಸ್) ತೃತೀಯ ಸ್ಥಾನಿಗ.

ರೇಸ್‌ನಲ್ಲಿ ಪೊಲಾರ್ಡ್, ಕೊಹ್ಲಿ

ರೇಸ್‌ನಲ್ಲಿ ಪೊಲಾರ್ಡ್, ಕೊಹ್ಲಿ

ಮುಂಬೈ ಇಂಡಿಯನ್ಸ್ ಮತ್ತೊಬ್ಬ ಆಟಗಾರ ಕೀರನ್ ಪೊಲಾರ್ಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕೂಡ ಐಪಿಎಲ್ ಅತ್ಯಧಿಕ ಕ್ಯಾಚ್ ಗಾಗಿ ರೇಸ್‌ನಲ್ಲಿದ್ದಾರೆ. ಪೊಲಾರ್ಡ್ ಒಟ್ಟು 79 ಕ್ಯಾಚ್ ಪಡೆದಿದ್ದರೆ, ಕೊಹ್ಲಿ 71 ಕ್ಯಾಚ್ ದಾಖಲೆ ಹೊಂದಿದ್ದಾರೆ.

ಚೆನ್ನೈ ಸೂಪರ್!

ಚೆನ್ನೈ ಸೂಪರ್!

ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸಿಎಸ್‌ಕೆ ಒಟ್ಟು 16 ಅಂಕಗಳನ್ನು ಕಲೆ ಹಾಕಿದೆ. ಚೆನ್ನೈ ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದೆ. ಆದರೆ ಮುಂಬೈ ಇಂಡಿಯನ್ಸ್ ಪಾಲಿಗೆ ಶುಕ್ರವಾರದ ಪಂದ್ಯ ಹೆಚ್ಚು ಪ್ರಮುಖವಾದುದು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೆಳಗಿಳಿಸಿ ಜಿಗಿತ ಕಾಣುವ ತವಕ ಎಂಐದು.

Story first published: Friday, April 26, 2019, 17:17 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X