ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಸೂರು: ಕೆಪಿಎಲ್-2019 ಟ್ರೋಫಿ ಅನಾವರಣಗೊಳಿಸಿದ ಪ್ರಮೋದಾದೇವಿ

By Yashaswini Mk
Cultural city Mysuru is All Set To Host KPL 2019 Second Leg match

ಮೈಸೂರು, ಆಗಸ್ಟ್ 24: ಟಿ20 ಕ್ರಿಕೆಟ್ ಟೂರ್ನಿ ಕೆಪಿಎಲ್-2019ರ ಆವೃತ್ತಿಯ ಮೈಸೂರು ಲೆಗ್‌ನ ಪಂದ್ಯಗಳು ಆಗಷ್ಟ್ 25ರ ಭಾನುವಾರದಿಂದ ಆರಂಭಗೊಳ್ಳಲಿವೆ. ಈ ಹಿನ್ನೆಲೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಮೈಸೂರು ಲೆಗ್‌ನ ಪಂದ್ಯಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೆಪಿಎಲ್‌ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಮೈಸೂರಿನ ಪಂದ್ಯಗಳಿಗೆ ಆತಿಥ್ಯ ವಹಿಸಲು ಗಂಗೋತ್ರಿ ಗ್ಲೇಡ್ಸ್‌(ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗ್ರೌಂಡ್‌) ಕ್ರೀಡಾಂಗಣ ಸಜ್ಜಾಗಿದೆ. ಆರು ಲೀಗ್‌ ಪಂದ್ಯಗಳು, ಮೂರು ಪ್ಲೇಆಫ್‌ ಪಂದ್ಯಗಳು ಮತ್ತು ಫೈನಲ್‌ ಹಣಾಹಣಿಗೆ ಮೈಸೂರು ಆತಿಥ್ಯ ವಹಿಸಲಿದೆ. ಫೈನಲ್‌ ಪಂದ್ಯ ಆಗಸ್ಟ್ 31 ರಂದು ನಡೆಯಲಿದೆ.

ಕನಿಷ್ಠ ರನ್‌ಗೆ ಆಲೌಟ್ ಆಗಿ ದಾಖಲೆ ಬರೆದ ವಿಶ್ವ ಚಾಂಪಿಯನ್ ಇಂಗ್ಲೆಂಡ್!ಕನಿಷ್ಠ ರನ್‌ಗೆ ಆಲೌಟ್ ಆಗಿ ದಾಖಲೆ ಬರೆದ ವಿಶ್ವ ಚಾಂಪಿಯನ್ ಇಂಗ್ಲೆಂಡ್!

ಬೆಂಗಳೂರಿನಲ್ಲಿ ಆಯೋಜಿಸಿದ್ದ ಟೂರ್ನಿಯ ಮೊದಲ ಹಂತದ ಪಂದ್ಯಗಳು ಶುಕ್ರವಾರ ಕೊನೆಗೊಂಡವು. ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಮಳೆಯ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.

ಕ್ರಿಕೆಟ್ ಪ್ರೋತ್ಸಾಹಕ್ಕೆ ಬದ್ಧ

ಕ್ರಿಕೆಟ್ ಪ್ರೋತ್ಸಾಹಕ್ಕೆ ಬದ್ಧ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸುಧಾಕರ್‌ ಆರ್‌. ರಾವ್ ಮಾತನಾಡಿ, 'ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ರಿಕೆಟ್‌ ಆಟಕ್ಕೆ ಪ್ರೋತ್ಸಾಹ ನೀಡಲು ಸಂಸ್ಥೆಯು ಬದ್ಧವಾಗಿದೆ. ಕೆಪಿಎಲ್ ಎಂಟನೇ ಅವೃತ್ತಿಯ ಟೂರ್ನಿಯ ಪಂದ್ಯಗಳು ಮೈಸೂರಿನಲ್ಲಿ ಆಯೋಜನೆಯಾಗಿರುವುದು ಸಂತಸದ ವಿಷಯ. ಪ್ರಮುಖ ಟೂರ್ನಿ ಆಯೋಜಿಸಲು ಬೇಕಾದ ಎಲ್ಲ ಸೌಕರ್ಯಗಳೂ ಮೈಸೂರಿನಲ್ಲಿವೆ,' ಎಂದರು ಕೆಪಿಎಲ್‌ ಟೂರ್ನಿ ಆರಂಭಿಸಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರೂ ಕಾರಣಕರ್ತರು ಎಂಬುದನ್ನು ನೆನಪಿಸಿಕೊಂಡರು.

ಸ್ವಂತ ಕ್ರೀಡಾಂಗಣ

ಸ್ವಂತ ಕ್ರೀಡಾಂಗಣ

ಮೈಸೂರಿನಲ್ಲಿ ಸ್ವಂತ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ದೊರಕಿಸಿಕೊಡಲು ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಸಂಸ್ಥೆಯು ಶೀಘ್ರದಲ್ಲೇ ಮೈಸೂರಿನಲ್ಲಿ ಸ್ವಂತ ಕ್ರೀಡಾಂಗಣ ಹೊಂದಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ಗಳು ಲಭ್ಯ

ಟಿಕೆಟ್‌ಗಳು ಲಭ್ಯ

ಕೆಪಿಎಲ್‌ ಟೂರ್ನಿಯ ಪ್ರಚಾರ ರಾಯಭಾರಿ, ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೈಸೂರಿನಲ್ಲಿ ನಡೆಯಲಿರುವ ಕೆಪಿಎಲ್‌ ಪಂದ್ಯಗಳ ಟಿಕೆಟ್‌ಗಳಿಗೆ 75 ರೂ., 100 ರೂ. ಮತ್ತು 300 ರೂ. ಬೆಲೆ ನಿಗದಿಪಡಿಸಲಾಗಿದೆ. ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದ ಕೌಂಟರ್‌ನಲ್ಲಿ ಟಿಕೆಟ್‌ಗಳು ಲಭ್ಯವಿವೆ. ಆನ್‌ಲೈನ್‌ನಲ್ಲೂ ಟಿಕೆಟ್‌ ಖರೀದಿಸಬಹುದು ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ರಸ್ಥಾನದಲ್ಲಿ ಬಳ್ಳಾರಿ

ಅಗ್ರಸ್ಥಾನದಲ್ಲಿ ಬಳ್ಳಾರಿ

ಬೆಂಗಳೂರು ಲೆಗ್‌ನ ಒಟ್ಟು 15 ಲೀಗ್ ಪಂದ್ಯಗಳು ಮುಕ್ತಾಯಗೊಂಡಿವೆ. ಸದ್ಯ ಕೆಪಿಎಲ್ ಅಂಕಪಟ್ಟಿಯಲ್ಲಿ 5ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಬಳ್ಳಾರಿ ಟಸ್ಕರ್ಸ್ ಅಗ್ರ ಸ್ಥಾನದಲ್ಲಿದೆ. ಶಿವಮೊಗ್ಗ ಲಯನ್ಸ್, ಹುಬ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಬೆಳಗಾವಿ ಪ್ಯಾಂಥರ್ಸ್ ಅನಂತರದ ಸ್ಥಾನಗಳಲ್ಲಿವೆ.

Story first published: Saturday, August 24, 2019, 18:24 [IST]
Other articles published on Aug 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X