ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ವಾಗೆ ಬೆದರಿಕೆ ಹಾಕಿದ್ದ ಅಂಬ್ರೋಸ್: 25 ವರ್ಷಗಳ ನಂತರ ಕಾರಣ ಬಹಿರಂಗ

Curtly Ambrose Recalls When He Threatened To ‘Knock Out’ Steve Waugh

ವೆಸ್ಟ್ ಇಂಡೀಸ್‌ ಕ್ರಿಕೆಟ್‌ನ ದಿಗ್ಗಜ ಬೌಲರ್ ಕಾರ್ಟ್ಲೀ ಅಂಬ್ರೋಸ್ ಮೈದಾನದಲ್ಲಿ ತಮ್ಮ ನಿಖರ ಬೌಲಿಂಗ್ ದಾಳಿಯ ಜೊತೆಗೆ ತಮ್ಮ ಸೌಮ್ಯ ಸ್ವಭಾವದಿಂದ ಖ್ಯಾತರಾದವರು. ಆದರೆ ಇಂತಾ ಕ್ರಿಕೆಟಿಗ ಒಮ್ಮೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಜೊತೆಗೆ ವಾಗ್ವಾದವನ್ನು ನಡೆಸಿದ್ದರು. ಅದು ಎಷ್ಟರ ಮಟ್ಟಿಗೆ ಹೋಗಿತ್ತು ಅಂದರೆ ಒಂದು ಹಂತದಲ್ಲಿ ವಿಂಡೀಸ್ ನಾಯಕ ರಿಚೀ ರಿಚರ್ಡ್ಸನ್ ಮಧ್ಯೆ ಬಂದು ಬಲವಂತವಾಗಿ ಆಂಬ್ರೋಸ್ ಅವರನ್ನು ದೂರ ಕರೆದೊಯ್ದಿದ್ದರು.

ಆ ಸಂದರ್ಭವನ್ನು ಆಂಬ್ರೋಸ್ ಸ್ಮರಿಸಿಕೊಂಡಿದ್ದಾರೆ. ಆ ಮಾತಿನ ಚಕಮಕಿಗೆ ಕಾರಣವಾದ ಅಂಶವನ್ನು ಅವರು ಹೇಳಿಕೊಂಡಿದ್ದಾರೆ. ಸ್ಕೈ ಸ್ಪೋರ್ಟ್ಸ್‌ನ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ವಿಂಡೀಸ್‌ನ ಮಾಜಿ ಆಟಗಾರ ಇಯಾನ್ ಬಿಶಪ್ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಅಂಬ್ರೋಸ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

"10 ವರ್ಷಗಳಿಂದ ಕ್ರಿಕೆಟನ್ನು ಮುಗಿಸುತ್ತಿದ್ದೀರಿ" : ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಗಂಭೀರ ಆರೋಪ

"ನನ್ನ ಮತ್ತು ಸ್ಟೀವ್ ವಾ ಮಧ್ಯೆ ಯಾವಾಗಲೂ ಕಠಿಣ ಸ್ಪರ್ಧೆ ಇರುತ್ತಿತ್ತು. ಇದು ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿತ್ತು. ಆದರೆ ನಾನು ಆತನನ್ನು ಯಾವಾಗಲೂ ಗೌರವಿಸುತ್ತಿದ್ದೆ. ಆದರೆ ಆ ನಿರ್ದಿಷ್ಟ ಪಂದ್ಯದಲ್ಲಿ ಸ್ಟೀವ್ ವಾ ನನಗೆ ಇಷ್ಟವಾಗದ ಮಾತುಗಳನ್ನಾಡಿದ್ದರು ಎಂದು ಆಂಬ್ರೋಸ್ ವಿವರಿಸಿದ್ದಾರೆ.

ಆರಂಭದಲ್ಲಿ ನಾನು ಅದನ್ನು ನಿರ್ಲಕ್ಷಿಸಿದ್ದೆ. ಆದರೆ ಆ ನಂತರವೂ ಮುಂದುವರಿದಾಗ ನಾನು ಪ್ರಶ್ನಿಸಿದೆ, ಆದಕ್ಕೆ ಸ್ಟೀವ್ ವಾ "ನನಗೇನು ಅನಿಸುತ್ತೋ ನಾನು ಅದನ್ನು ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದರು. ಆತನಿಂದ ಗೌರವ ದೊರೆಯದಿದ್ದಾಗ ನಾನು ಪ್ರತಿಕ್ರಿಯಿಸಿದ್ದೆ. "ಈ ಕ್ಷಣವೇ ನನ್ನ ಕ್ರಿಕೆಟ್ ವೃತ್ತಿ ಜೀವನ ಅಂತ್ಯ ಗೊಳ್ಳಬಹುದು, ಅದರಿಂದ ನನಗೆ ಹೆಚ್ಚಿನ ವ್ಯತ್ಯಾಸವಾಗಲಾರದು, ಆದರೆ ನಿನ್ನ ಕೆರಿಯರ್ ಸಂಪೂರ್ಣ ಅಂತ್ಯವಾಗುತ್ತದೆ. ನಿನಗೆ ಇನ್ನು ಯಾವತ್ತೂ ಕ್ರಿಕೆಟ್ ಆಡಲು ಸಾಧ್ಯವಾಗದಂತೆ ಹೋಡೆತವನ್ನು ನೀಡುತ್ತೇನೆ " ಎಂದು ಹೇಳಿದ್ದನ್ನು ನೆನಪಿಸಿಕೊಂಡರು ಆಂಬ್ರೋಸ್.

'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!

ಆದರೆ ಈ ಘಟನೆಯ ಬಳಿಕ ಕೆಲ ಸಂದರ್ಭದಗಳಲ್ಲಿ ಸ್ಟೀವ್ ವಾ ಅವರನ್ನು ಭೇಟಿಯಾಗಿದ್ದಾಗಿ ಆಂಬ್ರೋಸ್ ಹೇಳಿದ್ದಾರೆ. ಆದರೆ ಮತ್ತೆಂದೂ ವಿಚಾರ ಇಬ್ಬರ ಮಧ್ಯೆ ಪ್ರಸ್ತಾಪವಾಗಲಿಲ್ಲ ಎಂದಿದ್ದಾರೆ. "ನನಗೆ ಗೌರವ ಸಿಗದ ಬಗ್ಗೆ ಬೇಸರವುಂಟಾಗಿತ್ತು" ಎಂದು ದಿಗ್ಗಜ ಬೌಲರ್ ಹೇಳಿಕೊಂಡಿದ್ದಾರೆ. ಆದರೆ ಆ ಘಟನೆ ಅಲ್ಲೇ ಆರಂಭವಾಗಿ ಅಲ್ಲಿಗೇ ಅಂತ್ಯವಾಗಿತ್ತು ಎಂದಿದ್ದಾರೆ.

Story first published: Wednesday, May 27, 2020, 12:14 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X