ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿತ್ತಳೆ ಜರ್ಸಿ- ಇದೇನು ಪೆಟ್ರೋಲ್ ಪಂಪ್ ವಾಲ ಯೂನಿಫಾರ್ಮಾ?

CWC 2019: Does Team Indias new jersey look like a petrol pump wala uniform? Twitterati amused

ಬೆಂಗಳೂರು, ಜೂನ್ 30: ಐಪಿಎಲ್ ಮಾದರಿಯಲ್ಲಿ ಎರಡು ಮಾದರಿ ಜರ್ಸಿ ಧರಿಸುವ ಪದ್ಧತಿಗೆ ಟೀಂ ಇಂಡಿಯಾ ಇಂದು ಒಗ್ಗಿಕೊಳ್ಳುತ್ತಿದೆ. ಇಂಗ್ಲೆಂಡ್ ವಿರುದ್ಧದ ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಭಾರತ ತಂಡವು ಹೊಸ ಕಿತ್ತಳೆ ಜರ್ಸಿ ತೊಟ್ಟು ಮೈದಾನಕ್ಕಿಳಿಯಲಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಳೆದ ಶುಕ್ರವಾರದಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಟೀಮ್‌ ಇಂಡಿಯಾದ ನೂತನ ಜರ್ಸಿ ಅನಾವರಣ ಪಡಿಸಿತ್ತು. ಈಗಾಗಲೇ ಜರ್ಸಿಯ ಕೇಸರಿ ಬಣ್ಣದ ವಿಚಾರವಾಗಿ ವಿವಾದ ಭುಗಿಲೆದ್ದಿದೆಯಾದರೂ, ಅಭಿಮಾನಿಗಳಂತೂ ನೂತನ ಜರ್ಸಿ ವೀಕ್ಷಿಸಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಆದರೆ, ಅನೇಕ ಮಂದಿ ಹಾಸ್ಯಮಯ ಟ್ವೀಟ್ ಮೂಲಕ ಹೊಸ ಜರ್ಸಿಯನ್ನು ಸ್ವಾಗತಿಸಿದ್ದಾರೆ.

1
43681

ಕಳೆದ ಒಂದೆರಡು ವಾರಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರತ ತಂಡದ ನೂತನ ಜರ್ಸಿ ಕುರಿತಾಗಿ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಇಂದು ಪಂದ್ಯದ ಟಾಸ್ ಸಂದರ್ಭದಲ್ಲೂ ಚರ್ಚೆ ಮುಂದುವರೆದಿದೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಜೂನ್‌ 30ರಂದು ಬರ್ಮಿಂಗ್‌ಹ್ಯಾಮ್‌ನ ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಇಂಗ್ಲೆಂಡ್‌ ತನ್ನ ಪಾಲಿನ ಉಳಿದೆರಡು ಪಂದ್ಯಗಳನ್ನು ಗೆದ್ರಷ್ಟೇ ಮುಂದಿನ ಹಂತಕ್ಕೇರುವ ಒತ್ತಡದ ಸ್ಥಿತಿಯಲ್ಲಿದೆ.

{headtohead_cricket_3_2}

ಈ ನಿಟ್ಟಿನಲ್ಲಿ ಭಾರತ ಫುಟ್ಬಾಲ್‌ ತಂಡದ ಜರ್ಸಿಯಿಂದ ಸ್ಫೂರ್ತಿ ಪಡೆದು ನೂತನ ಕೇಸರಿ ಬಣ್ಣದ ಜರ್ಸಿಯನ್ನು ಬಿಸಿಸಿಐ ಹೊರತಂದಿದೆ. ಇಂಗ್ಲೆಂಡ್‌ ತಂಡ ಆತಿಥ್ಯ ವಹಿಸಿರುವ ಹಿನ್ನೆಲೆಯಲ್ಲಿ ತನ್ನ ನೈಜ ಬಣ್ಣದ ಜರ್ಸಿಯಲ್ಲೇ ಆಡಬಹುದಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಎರಡು ಮಾದರಿ ಜರ್ಸಿಗಳನ್ನು ಅಧಿಕೃತವಾಗಿ ಸಲ್ಲಿಸಿವೆ

ಎರಡು ಮಾದರಿ ಜರ್ಸಿಗಳನ್ನು ಅಧಿಕೃತವಾಗಿ ಸಲ್ಲಿಸಿವೆ

ಐಸಿಸಿ ನಿಯಮದ ಪ್ರಕಾರ, ಪ್ರತಿ ತಂಡಗಳು ಎರಡು ಮಾದರಿ ಜರ್ಸಿಗಳನ್ನು ಅಧಿಕೃತವಾಗಿ ಸಲ್ಲಿಸಿವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಈಗಾಗಲೇ ಬದಲಿ ಜರ್ಸಿಯನ್ನು ಪ್ರದರ್ಶಿಸಿವೆ. ಈ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿ ಬಣ್ಣ ಬದಲಾಗಲಿದೆ. 1992ರಿಂದ ನೀಲಿ ಬಣ್ಣದ ದಿರಿಸಿನಲ್ಲಿ ಆಡುತ್ತಿರುವ ಭಾರತ ಈ ಪಂದ್ಯದಲ್ಲಿ ಕಿತ್ತಳೆ- ನೀಲಿ ಮಿಶ್ರಿತ ಹೊಸ ಜರ್ಸಿತೊಟ್ಟು ಕಣಕ್ಕಿಳಿಯಲಿದ್ದಾರೆ

ಐಪಿಎಲ್ ಮಾದರಿಯಲ್ಲಿ ಹೋಮ್, ಅವೇ ಪಂದ್ಯ

ಒಂದೇ ಬಣ್ಣದ ಶೇಡ್ ಹೊಂದಿರುವ ತಂಡಗಳು ಎದುರಾದಾಗ ಒಂದು ತಂಡ ಮೂಲ ಬಣ್ಣದ ದಿರಿಸನ್ನು ತೊಟ್ಟರೆ ಎದುರಾಳಿ ತಂಡ ಬದಲಿ ಬಣ್ಣದ ಜರ್ಸಿ ತೊಟ್ಟು ಕಣಕ್ಕಿಳಿಯುವುದು ಫುಟ್ಬಾಲ್ ಲೋಕದಲ್ಲಿ ಸಾಮಾನ್ಯ ಸಂಗತಿ. ಈಗ ವಿಶ್ವಕಪ್ ಕ್ರಿಕೆಟ್ ನಲ್ಲಿ ಐಪಿಎಲ್ ಮಾದರಿಯಲ್ಲಿ ಹೋಮ್, ಅವೇ ಪಂದ್ಯಗಳೆಂದು ಪ್ರತ್ಯೇಕಿಸಲಾಗಿದೆ. away ಪಂದ್ಯಗಳಿಗೆ ಹೊಸ ಮಾದರಿ, ಹೊಸ ಬಣ್ಣದ ಮಿಶ್ರಿತ ಜರ್ಸಿ ತೊಡುವುದು ವಾಡಿಕೆ.

ಪೆಟ್ರೋಲ್ ಪಂಪ್ ವಾಲ ಯೂನಿಫಾರ್ಮಾ

ವಿಶ್ವಕಪ್ ನಲ್ಲಿ ಭಾರತ, ಶ್ರೀಲಂಕಾ, ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ಜರ್ಸಿಯ ಮೂಲ ಬಣ್ಣ ನೀಲಿಯಾಗಿದೆ. ಈ ತಂಡಗಳು ಎದುರಾದಾಗ ಒಂದು ತಂಡ ಬದಲಿ ಬಣ್ಣದ ಜರ್ಸಿ ತೊಡಬಹುದು. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಭಾರತ ಕಿತ್ತಳೆ ಬಣ್ಣ ತೊಡಲಿದ್ದಾರೆ ಎಂದು ತಿಳಿಯಿತು. ಆದರೆ, ನಾನು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಹೋಗಿದ್ದೆ, ಈ ಬಣ್ಣದ ಜರ್ಸಿ ನೋಡಿದೆ

ಇಂಡಿಯನ್ ಆಯಿಲ್ ನಿಂದ ಪ್ರೇರಣೆ ಪಡೆದಿದ್ದೇ?

ಟೀಂ ಇಂಡಿಯಾದ ಕಿತ್ತಳೆ ಜರ್ಸಿ ವಿನ್ಯಾಸಕರು ಇಂಡಿಯನ್ ಆಯಿಲ್ ಸಿಬ್ಬಂದಿಗಳ ಕಿತ್ತಳೆ-ನೀಲಿ ಜರ್ಸಿಯಿಂದ ಸ್ಫೂರ್ತಿ ಪಡೆದಿದ್ದಾರೆಯೇ? ಎಂದು ಟ್ವಿಟ್ಟಗರು ಪ್ರಶ್ನಿಸಿದ್ದಾರೆ.

Story first published: Sunday, June 30, 2019, 15:23 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X