ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ರೋಹಿತ್ ಶರ್ಮ ಸಜ್ಜು

ICC World Cup 2019: India vs New Zealand: Rohit Sharma on the verge of breaking two big Sachin Tendulkar records

ಲಂಡನ್, ಜುಲೈ 08: ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಭರ್ಜರಿ ಲಯದಲ್ಲಿರುವ 'ಹಿಟ್ ಮ್ಯಾನ್' ರೋಹಿತ್ ಶರ್ಮ ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳನ್ನು ಧ್ವಂಸ ಮಾಡುತ್ತಾ ಸಾಗುತ್ತಿದ್ದಾರೆ. ಲೀಗ್ ಹಂತದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮ ಅವರು ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ವಿಶ್ವಕಪ್ 2019 ಅಂಕಿ ಅಂಶ:

ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮ ಅವರು ವಿಶ್ವಕಪ್ ನ ಮೊದಲ ಸೆಮಿಫೈನಲ್​ನಲ್ಲಿ ದಾಖಲೆಗಳನ್ನು ಬರೆಯಲು ಮುಂದಾಗಿದ್ದಾರೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಜುಲೈ 09ರಂದು ಟೀಂ ಇಂಡಿಯಾ ಸೆಣಸಲಿದೆ. ಸದ್ಯ ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿ ಆಡಿರುವ ರೋಹಿತ್, 8 ಪಂದ್ಯಗಳಲ್ಲಿ 647 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರೋಹಿತ್ ಮುರಿಯುವ ಸಾಧ್ಯತೆಯಿದೆ.

ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್

ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಅವರು 8 ಇನಿಂಗ್ಸ್​ ನಲ್ಲಿ​ 5 ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 92.43 ರನ್​ ಸರಾಸರಿಯಂತೆ 647 ರನ್​ದಾಖಲಿಸಿದ್ದಾರೆ. ರೋಹಿತ್ 98.77 ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಸಚಿನ್ ದಾಖಲೆ ಮುರಿಯಲು ರೋಹಿತ್ ಸಿದ್ಧ

ಸಚಿನ್ ದಾಖಲೆ ಮುರಿಯಲು ರೋಹಿತ್ ಸಿದ್ಧ

ವಿಶ್ವಕಪ್ 2019ರಲ್ಲಿ 647ರನ್ ಗಳಿಸಿರುವ ರೋಹಿತ್ ಅವರು ಇನ್ನು 27ರನ್ ಗಳಿಸಿದರೆ ಒಂದು ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 2003ರ ವಿಶ್ವಕಪ್ ನಲ್ಲಿ 11 ಇನಿಂಗ್ಸ್​ಗಳಿಂದ 673 ರನ್​ ಗಳಿಸಿದ್ದರು. ಸಚಿನ್ ಅವರ ಈ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿದೆ.

ಅತಿ ಹೆಚ್ಚು ಶತಕ ಗಳಿಕೆ ಸಾಧನೆ

ಅತಿ ಹೆಚ್ಚು ಶತಕ ಗಳಿಕೆ ಸಾಧನೆ

2019ರ ಐಸಿಸಿ ವಿಶ್ವಕಪ್ ನಲ್ಲಿ ರೋಹಿತ್​ಶರ್ಮ ಅವರು 5 ಶತಕ ಗಳಿಸಿದ್ದಾರೆ. ಒಟ್ಟಾರೆ, ಈ ಹಿಂದಿನ ವಿಶ್ವಕಪ್ ಶತಕ ಸೇರಿಸಿ 6 ವಿಶ್ವಕಪ್ ಶತಕ ಗಳಿಸಿ, ಸಚಿನ್ ದಾಖಲೆ ಸಮಕ್ಕೆ ನಿಂತಿದ್ದಾರೆ.

ಇನ್ನೊಂದು ಶತಕ ಗಳಿಸಿದರೆ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ಶತಕ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಈ ಮೂಲಕ ಒಟ್ಟಾರೆ ವಿಶ್ವಕಪ್ ಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ. ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 103ರನ್ ಗಳಿಸಿದ್ದರು.

ವಿಶ್ವಕಪ್‌ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್‌ ಶರ್ಮಾ

1000 ಕ್ಕೂ ಹೆಚ್ಚು ರನ್​ಗಳಿಕೆ

1000 ಕ್ಕೂ ಹೆಚ್ಚು ರನ್​ಗಳಿಕೆ

ಆರಂಭಿಕ ಆಟಗಾರ ರೋಹಿತ್​ಶರ್ಮ ಅವರು 23 ರನ್​ಗಳಿಸಿದರೆ ವಿಶ್ವಕಪ್​ನಲ್ಲಿ 1000 ಕ್ಕೂ ಹೆಚ್ಚು ರನ್​ಗಳಿಸಿದ ಆಟಗಾರರ ಸಾಲಿಗೆ ಸೇರಲಿದ್ದಾರೆ. ರೋಹಿತ್ ಗೂ ಮುನ್ನ ಸಚಿನ್​ ತೆಂಡೂಲ್ಕರ್, ಸೌರವ್​ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿಶ್ವಕಪ್​ನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಇನ್ನಷ್ಟು ದಾಖಲೆಗಳನ್ನು ಮುರಿಯಲಿರುವ ರೋಹಿತ್

ಇನ್ನಷ್ಟು ದಾಖಲೆಗಳನ್ನು ಮುರಿಯಲಿರುವ ರೋಹಿತ್

2017ರಿಂದ ಇಲ್ಲಿ ತನಕ ರೋಹಿತ್ ಶರ್ಮ 17 ಏಕದಿನ ಶತಕ ಗಳಿಸಿದ್ದು, ನಾಯಕ ಕೊಹ್ಲಿಯನ್ನು ಮೀರಿಸಿದ್ದಾರೆ. ಕೊಹ್ಲಿ ಈ ಅವಧಿಯಲ್ಲಿ 15 ಶತಕ ಗಳಿಸಿದ್ದಾರೆ. ಈ ವಿಶ್ವಕಪ್ ನಲ್ಲಿ ಸತತ ಅರ್ಧಶತಕ ಗಳಿಸಿರುವ ಕೊಹ್ಲಿ ಇನ್ನೂ ನೂರರ ಗಡಿ ದಾಟಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ರೋಹಿತ್ ಶತಕ ಗಳಿಸಿ, ಪಂದ್ಯ ಗೆಲ್ಲಿಸಲಿ ಎಂದು ಬಯಸುತ್ತೇನೆ, ಈ ಸಂದರ್ಭಕ್ಕೆ ವಿಶ್ವದ ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ ಎಂದು ರೋಹಿತ್ ಬಗ್ಗೆ ಕೊಹ್ಲಿ ಹೇಳಿದ್ದಾರೆ.

ವಿಶ್ವಕಪ್: ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ಸರಿದೂಗಿಸಿದ ರೋಹಿತ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, July 8, 2019, 20:53 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more