ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಂಗ್ಲರ ವಿರುದ್ಧ ಕಿತ್ತಳೆ ಜರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕೆ?

ICC World Cup 2019 : ಇಂಗ್ಲೆಂಡ್ ವಿರುದ್ಧ ಬಟ್ಟೆ ಬದಲಿಸಲಿದೆ ಟೀಂ ಇಂಡಿಯಾ..? | Oneindia Kannada
CWC 2019: Team India are likely to sport orange coloured outfits against England

ಲಂಡನ್, ಜೂನ್ 23: ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಕ್ರಿಕೆಟ್ 2019ರ ಲೀಗ್ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ವಿಶ್ವಕಪ್ ನಲ್ಲಿ 50ನೇ ಗೆಲುವನ್ನು ಟೀಂ ಇಂಡಿಯಾ ಸಾಧಿಸಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ವಿರುದ್ಧ ಜಯ ದಾಖಲಿಸಿರುವ ಕೊಹ್ಲಿ ಪಡೆಯು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿ, ಅಂಕ ಹಂಚಿಕೆಯಾಗಿದೆ. ಈಗ ಟೂರ್ನಮೆಂಟ್ ನ ನೆಚ್ಚಿನ ತಂಡವೆನಿಸಿರುವ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಟೀಂ ಇಂಡಿಯಾ ಸಜ್ಜಾಗಿದೆ.

ಈ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿ ಬಣ್ಣ ಬದಲಾಗಲಿದೆ. 1992ರಿಂದ ನೀಲಿ ಬಣ್ಣದ ದಿರಿಸಿನಲ್ಲಿ ಆಡುತ್ತಿರುವ ಭಾರತ ಈ ಪಂದ್ಯದಲ್ಲಿ ಕಿತ್ತಳೆ- ನೀಲಿ ಮಿಶ್ರಿತ ಹೊಸ ಜರ್ಸಿತೊಟ್ಟು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಹೇಳಿಕೆ ಬಂದಿಲ್ಲ.

ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಜರ್ಸಿ ಚಿತ್ರಗಳು ಹರಿದಾಡುತ್ತಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಅವರು ಕೂಡಾ ಹೊಸ ಜರ್ಸಿ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಮಳಿಗೆಗಳಲ್ಲೂ ಹೊಸ ಜರ್ಸಿ ಮಾರಾಟಕ್ಕೆ ಲಭ್ಯವಿದೆ ಎಂದಿದ್ದಾರೆ.

{headtohead_cricket_3_2}

ಬೇರೆ ಬಣ್ಣ ಏಕೆ?: ಒಂದೇ ಬಣ್ಣದ ಶೇಡ್ ಹೊಂದಿರುವ ತಂಡಗಳು ಎದುರಾದಾಗ ಒಂದು ತಂಡ ಮೂಲ ಬಣ್ಣದ ದಿರಿಸನ್ನು ತೊಟ್ಟರೆ ಎದುರಾಳಿ ತಂಡ ಬದಲಿ ಬಣ್ಣದ ಜರ್ಸಿ ತೊಟ್ಟು ಕಣಕ್ಕಿಳಿಯುವುದು ಫುಟ್ಬಾಲ್ ಲೋಕದಲ್ಲಿ ಸಾಮಾನ್ಯ ಸಂಗತಿ. ಈಗ ವಿಶ್ವಕಪ್ ಕ್ರಿಕೆಟ್ ನಲ್ಲಿ ಐಪಿಎಲ್ ಮಾದರಿಯಲ್ಲಿ ಹೋಮ್, ಅವೇ ಪಂದ್ಯಗಳೆಂದು ಪ್ರತ್ಯೇಕಿಸಲಾಗಿದೆ. away ಪಂದ್ಯಗಳಿಗೆ ಹೊಸ ಮಾದರಿ, ಹೊಸ ಬಣ್ಣದ ಮಿಶ್ರಿತ ಜರ್ಸಿ ತೊಡುವುದು ವಾಡಿಕೆ. ಅದರಂತೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಹೆಚ್ಚು ಕಿತ್ತಳೆ, ಸ್ವಲ್ಪ ನೀಲಿ ಮಿಶ್ರಿತ ಜರ್ಸಿ ತೊಡುವ ಸಾಧ್ಯತೆಯಿದೆ.

ಇದಲ್ಲದೆ, ವಿಶ್ವಕಪ್ ನಲ್ಲಿ ಭಾರತ, ಶ್ರೀಲಂಕಾ, ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ಜರ್ಸಿಯ ಮೂಲ ಬಣ್ಣ ನೀಲಿಯಾಗಿದೆ. ಈ ತಂಡಗಳು ಎದುರಾದಾಗ ಒಂದು ತಂಡ ಬದಲಿ ಬಣ್ಣದ ಜರ್ಸಿ ತೊಡಬಹುದು. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಭಾರತ ಕಿತ್ತಳೆ ಬಣ್ಣ ತೊಡಲಿದ್ದಾರೆ. ಇದರಿಂದ ನೋಡುಗರಿಗೂ ಅನುಕೂಲ ಎನ್ನಲಾಗಿದೆ.

ಐಸಿಸಿ ನಿಯಮದ ಪ್ರಕಾರ, ಪ್ರತಿ ತಂಡಗಳು ಎರಡು ಮಾದರಿ ಜರ್ಸಿಗಳನ್ನು ಅಧಿಕೃತವಾಗಿ ಸಲ್ಲಿಸಿವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಈಗಾಗಲೇ ಬದಲಿ ಜರ್ಸಿಯನ್ನು ಪ್ರದರ್ಶಿಸಿವೆ.

Story first published: Sunday, June 23, 2019, 14:02 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X