ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮನ್‌ವೆಲ್ತ್ ಗೇಮ್ಸ್: ಹರ್ಮನ್‌, ರೇಣುಕಾ ಸಿಂಗ್ ಪ್ರಯತ್ನ ವ್ಯರ್ಥ: ಭಾರತಕ್ಕೆ ಆಘಾತ ನೀಡಿದ ಗಾರ್ಡ್ನರ್

CWG 2022: India women lost 1st match by 3 wickets against australia

ಕಾಮನ್‌ವೆಲ್ತ್‌ ಗೇಮ್ಸ್‌ನ ಚೊಚ್ಚಲ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲುವ ಅವಕಾಶವನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ಕಳೆದುಕೊಂಡಿದ್ದು ಅನಿರೀಕ್ಷಿತ ಸೋಲು ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಶಫಾಲಿ ವರ್ಮಾ ಅವರ ಅದ್ಭುತ ಪ್ರದರ್ಶನದ ಬಳಿಕ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಅವರ ಅಮೋಘ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಈ ಪಂದ್ಯವನ್ನು ಗೆದ್ದುಕೊಂಡಿದೆ.

ಸವಾಲಿನ ಗುರಿಯನ್ನು ನಿಗದಿಪಡಿಸಿದ್ದ ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವ ಅದ್ಭುತ ಅವಕಾಶವಿತ್ತು. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರೆಲ್ಲರೂ ಪವರ್‌ಪ್ಲೇ ಮುಗಿಯುವ ವೇಳೆಗಾಗಲೇ ಡಗೌಟ್‌ಗೆ ಮರಳಿದ್ದರು. ಆದರೆ ಕೆಳ ಕ್ರಮಾಂಕದ ಆಟಗಾರರ ಪ್ರದರ್ಶನದಿಂದ ತಿರುಗಿ ಬಿದ್ದ ಆಸಿಸ್ ಪಡೆ ತಾಉ ಚಾಂಪಿಯನ್ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

CWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿCWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿ

ಆಸರೆಯಾದ ಶಫಾಲಿ, ಹರ್ಮನ್

ಆಸರೆಯಾದ ಶಫಾಲಿ, ಹರ್ಮನ್

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕ ಮಾಡಿಕೊಂಡ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಸ್ಮೃತಿ ಮಂಧಾನ 24 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬಂದ ಯಸ್ತಿಕಾ ಬಾಟಿಯಾ ಕೂಡ 8 ರನ್‌ಗಳಿಗೆ ವಿಕಟ್ ಕಳೆದುಕೊಂಡರು. ಆದರೆ ಶಫಾಲಿ ವರ್ಮಾ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌಟ್ ಅವರಿಂದ ಅದ್ಭುತ ಇನ್ನಿಂಗ್ಸ್ ಬಂದಿತು. ಶಫಾಲಿ ವರ್ಮಾ 48 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಾಯಕಿ ಹರ್ಮನ್ ಅಂತಿಮ ಹಂತದವರೆಗೂ ಹೋರಾಟವನ್ನು ನಡೆಸಿದ್ದು ತಂಡದ ಮೊತ್ತ 150ರ ಗಡಿದಾಟಲು ಕಾರಣವಾದರು. 34 ಎಸೆತಗಳಲ್ಲಿ 52 ರನ್‌ಗಳಿಸಿ ಅಂತಿಮ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು.

ರೇಣುಕಾ ಸಿಂಗ್ ಆಘಾತ

ರೇಣುಕಾ ಸಿಂಗ್ ಆಘಾತ

ಭಾರತ ನಿಡಿದ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಭಾರತ ವೇಗದ ಬೌಲರ್ ರೇಣುಕಾ ಸಿಂಗ್ ಅಗ್ರ ಕ್ರಮಾಂಕದ ನಾಲ್ವರು ಆಟಗಾರ್ತಿಯರನ್ನು ಕೂಡ ಫೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಆಸ್ಟ್ರೇಲಿಯಾ 34 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 49 ರನ್‌ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಕಣಕ್ಕಿಳಿದ ಆಶ್ಲೈಗ್ ಗಾರ್ಡ್‌ನರ್ ಭಾರತ ತಂಡದ ಅವಕಾಶವನ್ನ ಕಸಿದುಕೊಂಡರು. ಗಾರ್ಡ್ನರ್ 35 ಎಸೆತಗಳಲ್ಲಿ 52 ರನ್‌ಗಳಿಸಿ ಅಜೇಯವಾಗುಳಿದು ಆಸಿಸ್ ತಂಡವನ್ನು ಗೆಲ್ಲಿಸಿದರು.

ಆಡುವ ಬಳಗ ಹೀಗಿದೆ

ಆಡುವ ಬಳಗ ಹೀಗಿದೆ

ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಅನ್ನಾಬೆಲ್ ಸದರ್ಲ್ಯಾಂಡ್, ನಿಕೋಲಾ ಕ್ಯಾರಿ, ಅಮಂಡಾ ವೆಲ್ಲಿಂಗ್ಟನ್, ಎಲ್ಲಿಸ್ ಪೆರ್ರಿ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್
ಬೆಂಚ್: ಸಬ್ಬಿನೇನಿ ಮೇಘನಾ, ಪೂಜಾ ವಸ್ತ್ರಕರ್, ಸ್ನೇಹ ರಾಣಾ, ತನಿಯಾ ಭಾಟಿಯಾ

Story first published: Friday, July 29, 2022, 19:25 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X