ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CWG 2022: ಬೆಳ್ಳಿ ಪದಕ ಗೆದ್ದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನ

CWG 2022: Karnataka govt announced 15 lakhs cash prize to silver medalist Rajeshwari Gayakwad

ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ ನಗರದಲ್ಲಿ ನಡೆಯುತ್ತಿದ್ದು, ಭಾರತ ತಂಡ ಆರ್ಚರಿ ಮತ್ತು ಶೂಟಿಂಗ್ ವಿಭಾಗ ಇಲ್ಲದೇ ಇದ್ದರೂ ಸಹ ಉತ್ತಮವಾಗಿಯೇ ಪದಕವನ್ನು ಸಂಪಾದಿಸಿದೆ. ಭಾರತದ ಪರ ವಿವಿಧ ವಿಭಾಗಗಳಲ್ಲಿ ಹಲವಾರು ಕ್ರೀಡಾಪಟುಗಳು ವಿವಿಧ ಪದಕಗಳನ್ನು ಗೆದ್ದಿದ್ದು, ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಟೀಂ ಇಂಡಿಯಾ ಪೂರ್ಣಾವಧಿ ನಾಯಕತ್ವಕ್ಕೆ ನಾನು ರೆಡಿ: ರೋಹಿತ್‌ಗೆ ಸೆಡ್ಡು ಹೊಡೆಯಲು ಪಾಂಡ್ಯ ಸ್ಕೆಚ್‌ಟೀಂ ಇಂಡಿಯಾ ಪೂರ್ಣಾವಧಿ ನಾಯಕತ್ವಕ್ಕೆ ನಾನು ರೆಡಿ: ರೋಹಿತ್‌ಗೆ ಸೆಡ್ಡು ಹೊಡೆಯಲು ಪಾಂಡ್ಯ ಸ್ಕೆಚ್‌

ಇನ್ನು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಆಟವನ್ನು ಸಹ ಸೇರ್ಪಡೆಗೊಳಿಸಿಕೊಂಡಿರುವುದು ವಿಶೇಷವಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾರ್ಬಡೋಸ್ ಹೀಗೆ ಒಟ್ಟು 8 ವನಿತೆಯರ ತಂಡಗಳು ಈ ಕ್ರಿಕೆಟ್ ವಿಭಾಗದಲ್ಲಿ ಕಣಕ್ಕಿಳಿದು ಪದಕಕ್ಕಾಗಿ ಸೆಣಸಾಟ ನಡೆಸಿದ್ದವು.

ದೊಡ್ಡ ವೇದಿಕೆಯಲ್ಲಿ ಮತ್ತೆ ಮತ್ತೆ ನಾವು ಅದೇ ತಪ್ಪು ಮಾಡುತ್ತಿದ್ದೇವೆ: ತಂಡದ ಪ್ರದರ್ಶನಕ್ಕೆ ಸಿಡಿದ ನಾಯಕಿದೊಡ್ಡ ವೇದಿಕೆಯಲ್ಲಿ ಮತ್ತೆ ಮತ್ತೆ ನಾವು ಅದೇ ತಪ್ಪು ಮಾಡುತ್ತಿದ್ದೇವೆ: ತಂಡದ ಪ್ರದರ್ಶನಕ್ಕೆ ಸಿಡಿದ ನಾಯಕಿ

ಈ ಪೈಕಿ ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದವು. ನಿನ್ನೆಯಷ್ಟೇ ( ಆಗಸ್ಟ್ 7 ) ನಡೆದ ಈ ಮಹತ್ವದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಗೆಲ್ಲುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಭಾರತ ವನಿತೆಯರು ಕೊನೆಯ ಹಂತದಲ್ಲಿ ಎಡವಿದ ಕಾರಣದಿಂದಾಗಿ 9 ರನ್‌ಗಳ ಸೋಲನ್ನು ಅನುಭವಿಸಿತು. ಈ ಮೂಲಕ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡು ತನ್ನ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಹೀಗೆ ಸಾಧನೆ ಮಾಡಿರುವ ಭಾರತ ವನಿತೆಯರಿಗೆ ವಿವಿಧ ಪುರಸ್ಕಾರಗಳು ಲಭಿಸುತ್ತಿದ್ದು, ಕನ್ನಡದ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರಿಗೂ ಕೂಡ ನಗದು ಬಹುಮಾನ ಸಂದಿದೆ.

15 ಲಕ್ಷ ಬಹುಮಾನ ನೀಡಿದ ಕರ್ನಾಟಕ ಸರ್ಕಾರ

15 ಲಕ್ಷ ಬಹುಮಾನ ನೀಡಿದ ಕರ್ನಾಟಕ ಸರ್ಕಾರ

ಭಾರತ ವನಿತೆಯರ ತಂಡದಲ್ಲಿ ಭಾಗಿಯಾಗಿದ್ದ ಕರ್ನಾಟಕದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದು 15 ಲಕ್ಷ ರೂಪಾಯಿಗಳ ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ. ಇನ್ನು ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳದ ರಾಜೇಶ್ವರಿ ಗಾಯಕ್ವಾಡ್ ಉಳಿದ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನವನ್ನು ತೋರಿದ್ದರು.

ಚಿನ್ನದ ಪದಕ ಕೈ ತಪ್ಪಿಸಿಕೊಂಡ ಭಾರತ

ಚಿನ್ನದ ಪದಕ ಕೈ ತಪ್ಪಿಸಿಕೊಂಡ ಭಾರತ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ವನಿತೆಯರ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿದ ಆಸ್ಟ್ರೇಲಿಯಾ ವನಿತೆಯರು ಭಾರತ ವನಿತೆಯರ ತಂಡಕ್ಕೆ 162 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಭಾರತ ವನಿತೆಯರ ತಂಡದ ಪರ ಜೆಮಿಮಾ ರೊಡ್ರಿಗಸ್ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರೂ ಸಹ ಉಳಿದ ಆಟಗಾರ್ತಿಯರು ಅತಿ ಕಳಪೆ ಆಟವನ್ನಾಡಿದ ಪರಿಣಾಮ ಟೀಮ್ ಇಂಡಿಯಾ ಸೋಲನ್ನುಂಡಿತು. 17.2 ಓವರ್‌ಗಳವರೆಗೂ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಭಾರತ 19.3 ಓವರ್‌ಗೆ 153 ರನ್ ಕಲೆಹಾಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್ ಔಟ್ ಆಯಿತು.

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಪ್ರಕಟವಾಗಿದ್ದ ಭಾರತ ವನಿತೆಯರ ಕ್ರಿಕೆಟ್ ತಂಡ

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಪ್ರಕಟವಾಗಿದ್ದ ಭಾರತ ವನಿತೆಯರ ಕ್ರಿಕೆಟ್ ತಂಡ

ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್ಬೆಂಚ್: ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ಸಭಿನೆನಿ ಮೇಘನಾ ಮತ್ತು ಹರ್ಲಿನ್ ಡಿಯೋಲ್

Story first published: Tuesday, August 9, 2022, 10:34 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X