ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈದಾನಕ್ಕಿಳಿದ ಮಾರಕ ವೇಗಿ ಡೇಲ್ ಸ್ಟೇನ್ ಈಗ ದಾಖಲೆ ವಿಕೆಟ್ ಸರದಾರ

Dale Steyn becomes leading wicket-taker for Proteas in T20Is

ಈಸ್ಟ್ ಲಂಡನ್, ಫೆಬ್ರವರಿ 13: ಗಾಯದ ಕಾರಣದಿಂದಾಗಿ ದೀರ್ಘಕಾಲ ಕ್ರಿಕೆಟ್‌ ಮೈದಾನದಿಂದ ದೂರ ಉಳಿದಿದ್ದ ಡೇಲ್ ಸ್ಟೇನ್‌ ಈಗ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ವಿಕೆಟ್‌ ಪಡೆದ ದಕ್ಷಿಣ ಆಫ್ರಿಕಾದ ಮುಂಚೂಣಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಸ್ಟೇನ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದರಾದರೂ ಮತ್ತೆ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು.

ಆರ್‌ಸಿಬಿ ಮೇಲೆ ನಾಯಕ ಕೊಹ್ಲಿಯೂ ಬೇಸರ, ಏನಾಗಿದೆ ಚಾಲೆಂಜರ್ಸ್‌ಗೆ?!ಆರ್‌ಸಿಬಿ ಮೇಲೆ ನಾಯಕ ಕೊಹ್ಲಿಯೂ ಬೇಸರ, ಏನಾಗಿದೆ ಚಾಲೆಂಜರ್ಸ್‌ಗೆ?!

ಇಂಗ್ಲೆಂಡ್ ಪ್ರವಾಸದಲ್ಲಿರುವ ಪ್ರೋಟಿಯಾಸ್, ಆತಿಥೇಯರ ವಿರುದ್ಧ ಟಿ20 ಸರಣಿಯನ್ನಾಡುತ್ತಿದೆ. ಈ ಸರಣಿಯಲ್ಲಿ ಸ್ಟೇನ್ ಕೂಡ ಆಡುತ್ತಿದ್ದಾರೆ. ಈಸ್ಟ್ ಲಂಡನ್‌ನ ಬಫೆಲೋ ಪಾರ್ಕ್‌ನಲ್ಲಿ ಬುಧವಾರ (ಫೆಬ್ರವರಿ 12) ನಡೆದ ಮೊದಲ ಟಿ20 ಪಂದ್ಯದಲ್ಲಿ ಡೇಲ್ ಸ್ಟೇನ್ 1 ವಿಕೆಟ್‌ ಪಡೆದಿದ್ದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ರೋಚಕ 1 ರನ್‌ನಿಂದ ಗೆದ್ದಿತ್ತು.

'12ನೇ ಆಟಗಾರನಾಗಿ ಬಂದ್ರೂ ಕೆ.ಎಲ್ ರಾಹುಲ್ ಶತಕ ಬಾರಿಸ್ತಾನೆ !''12ನೇ ಆಟಗಾರನಾಗಿ ಬಂದ್ರೂ ಕೆ.ಎಲ್ ರಾಹುಲ್ ಶತಕ ಬಾರಿಸ್ತಾನೆ !'

ಈಸ್ಟ್ ಲಂಡನ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ 2.2ನೇ ಓವರ್‌ನಲ್ಲಿ ಜೋಸ್‌ ಬಟ್ಲರ್ ವಿಕೆಟ್ ಡೇಲ್ ಸ್ಟೇನ್‌ಗೆ ಲಭಿಸಿತು. ಈ ವಿಕೆಟ್‌ ಕೂಡ ಸೇರಿ ಸ್ಟೇನ್ ಒಟ್ಟಿಗೆ 62 ವಿಕೆಟ್‌ ಪಡೆದಂತಾಗಿದೆ. ಈ ಸಾಧನೆಯ ಮೂಲಕ ಡೇಲ್, ಇಮ್ರಾನ್ ತಾಹಿರ್ ಹೆಸರಿನಲ್ಲಿದ್ದ ಅತ್ಯಧಿಕ ವಿಕೆಟ್‌ ದಾಖಲೆ ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಸ್ಟೇನ್ 439 ವಿಕೆಟ್ ದಾಖಲೆ ಹೊಂದಿದ್ದಾರೆ.

ಟಿ20ಐ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್‌ ಪಡೆದ ದಾಖಲೆ ಸಾಲಿನಲ್ಲಿ ಮೊದಲ ಸದ್ಯ ಸ್ಥಾನದಲ್ಲಿರುವ 36ರ ಹರೆಯದ ಡೇಲ್ ಸ್ಟೇನ್ 45 ಪಂದ್ಯಗಳಲ್ಲಿ 62 ವಿಕೆಟ್‌ ಪಡೆದಿದ್ದರೆ, ದ್ವಿತೀಯ ಸ್ಥಾನಿ ತಾಹಿರ್ 35 ಪಂದ್ಯಗಳಲ್ಲಿ 61 ವಿಕೆಟ್, ತೃತೀಯ ಸ್ಥಾನಿ ಮಾರ್ನೆ ಮಾರ್ಕೆಲ್ 44 ಪಂದ್ಯಗಳಲ್ಲಿ 47 ವಿಕೆಟ್‌ ಉರುಳಿಸಿದ್ದಾರೆ.

ಕಳಪೆ ಪ್ರದರ್ಶನದ ನಂತರ ನಂಬರ್ 1 ಸ್ಥಾನವನ್ನು ಕಳೆದುಕೊಂಡ ಬೂಮ್ರಾಕಳಪೆ ಪ್ರದರ್ಶನದ ನಂತರ ನಂಬರ್ 1 ಸ್ಥಾನವನ್ನು ಕಳೆದುಕೊಂಡ ಬೂಮ್ರಾ

ಟಿ20 ಅತ್ಯಧಿಕ ವಿಕೆಟ್‌ಗಳನ್ನು ಪಡೆದ ವಿಶ್ವದ ಸಾಧಕರನ್ನು ಪರಿಗಣಿಸಿದರೆ, ಶ್ರೀಲಂಕಾದ ಲಸಿತ್ ಮಾಲಿಂಗ 106 ವಿಕೆಟ್‌ (81 ಇನ್ನಿಂಗ್ಸ್‌), ಪಾಕ್ ಆಲ್ ರೌಂಡರ್ ಶಾಹಿದ್ ಅಫ್ರಿದಿ 98 ವಿಕೆಟ್‌ (97 ಇನ್ನಿಂಗ್ಸ್‌), ಬಾಂಗ್ಲಾದೇಶ ಆಲ್ ರೌಂಡರ್ 92 ವಿಕೆಟ್‌ಗಳು (75 ಇನ್ನಿಂಗ್ಸ್‌), ಪಾಕಿಸ್ತಾನದ ಉಮರ್ ಗುಲ್ 85 ವಿಕೆಟ್‌ (60 ಇನ್ನಿಂಗ್ಸ್‌) ಸಾಧನೆ ಹೊಂದಿದ್ದಾರೆ.

Story first published: Thursday, February 13, 2020, 15:47 [IST]
Other articles published on Feb 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X