ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇಲ್ ಸ್ಟೇನ್ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ಇಬ್ಬರು ಭಾರತೀಯರ ಹೆಸರು

Dale Steyn names two Indian greats in list of best batsmen he has played with

ಕೇಪ್‌ ಟೌನ್, ಏಪ್ರಿಲ್ 13: ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿ ಪ್ರಕಟಿಸಿದ್ದಾರೆ. ತಾನು ಎದುರಾಳಿಯಾಗಿ ಆಡಿದ ಆಟಗಾರರಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಹ ಆಟಗಾರ ಆಗಿರುವ ಸ್ಟೇನ್ ಹೆಸರಿಸಿದ್ದಾರೆ. ಡೇಲ್ ಪಟ್ಟಿಯಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ ಕೂಡ ಸೇರಿ ಭಾರತದ ಕ್ರಿಕೆಟ್‌ ದಿಗ್ಗಜರೊಬ್ಬರೂ ಇದ್ದಾರೆ.

ಇಂಡೋ-ಪಾಕ್ ಸರಣಿ ವಿಚಾರವನ್ನು ಕಪಿಲ್ ಅರ್ಥ ಮಾಡಿಕೊಳ್ಳಲಿಲ್ಲ: ಅಖ್ತರ್ಇಂಡೋ-ಪಾಕ್ ಸರಣಿ ವಿಚಾರವನ್ನು ಕಪಿಲ್ ಅರ್ಥ ಮಾಡಿಕೊಳ್ಳಲಿಲ್ಲ: ಅಖ್ತರ್

#AskDale ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವಿಟರ್‌ನಲ್ಲಿ ಭಾನುವಾರ (ಏಪ್ರಿಲ್ 12) ಕ್ರಿಕೆಟ್‌ ಅಭಿಮಾನಿಯೊಬ್ಬರು ಡೇಲ್ ಸ್ಟೇನ್‌ಗೆ ಪ್ರಶ್ನೆ ಕೇಳಿದ್ದರು. 'ನಿಮ್ಮ ಬೆಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿ' ಎಂಬುದು ಪ್ರಶ್ನೆಯಾಗಿತ್ತು.

'ವಿಸ್ಡನ್ಸ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿಲ್ಲದ್ದು ನೋಡಿ ಅಚ್ಚರಿಯಾಯ್ತು!''ವಿಸ್ಡನ್ಸ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿಲ್ಲದ್ದು ನೋಡಿ ಅಚ್ಚರಿಯಾಯ್ತು!'

ಅಭಿಮಾನಿಯ ಪ್ರಶ್ನೆಗೆ ಡೇಲ್ ಸ್ಟೇನ್ ಐದು ಹೆಸರುಗಳನ್ನು ಹೆಸರಿಸಿದ್ದಾರೆ. ಇದರಲ್ಲಿ ಭಾರತದ ಇಬ್ಬರು ಬ್ಯಾಟ್ಸ್‌ಮನ್‌ಗಳು ಇದ್ದಾರೆ.

ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಯಾರು?

ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಯಾರು?

'ನೀವು ಎದುರಾಳಿಯಾಗಿ ಆಡಿದವರಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಯಾರು?' ಎಂಬ ಪ್ರಶ್ನೆಯನ್ನು ಕೋಲ್ ಲರ್ಗಿಯರ್ ಎಂಬವರು ಡೇಲ್ ಸ್ಟೇನ್ ಅವರಲ್ಲಿ ಕೇಳಿದ್ದರು. ಅದಕ್ಕೆ ಸ್ಟೇನ್ ಉತ್ತರಿಸಿ ಒಟ್ಟಿಗೆ ಐದು ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ್ದಾರೆ.

ಡೇಲ್ ಸ್ಟೇನ್ ಉತ್ತರ

ಡೇಲ್ ಸ್ಟೇನ್ ಉತ್ತರ

ಪ್ರಶ್ನೆಗೆ ಉತ್ತರಿಸಿರುವ ಸ್ಟೇನ್, 'ಫ......* ಎಲ್ಲರೂ ಉತ್ತಮ ಬ್ಯಾಟ್ಸ್‌ಮನ್‌ಗಳೆ. ರಿಕಿ ಪಾಂಟಿಂಗ್ ಅವಿಭಾಜ್ಯ ಬ್ಯಾಟ್ಸ್‌ಮನ್. ಸಚಿನ್ ತೆಂಡೂಲ್ಕರ್ ಗೋಡೆ ಇದ್ದಾಗೆ. ರಾಹುಲ್ ದ್ರಾವಿಡ್, ಕ್ರಿಸ್‌ ಗೇಲ್, ಕೆವಿನ್ ಪೀಟರ್ಸನ್' ಇವರೆಲ್ಲರೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು' ಎಂದು ಬರೆದುಕೊಂಡಿದ್ದಾರೆ.

ಭಾರತದವರಲ್ಲಿ ಸಚಿನ್-ದ್ರಾವಿಡ್ ಯಾಕೆ

ಭಾರತದವರಲ್ಲಿ ಸಚಿನ್-ದ್ರಾವಿಡ್ ಯಾಕೆ

ಭಾರತ ಕ್ರಿಕೆಟ್‌ ತಂಡದಲ್ಲಿ ಅನೇಕ ಪ್ರತಿಭಾನ್ವಿತರು ಬಂದು ಹೋಗಿದ್ದಾರೆ. ಬರುತ್ತಲೂ ಇದ್ದಾರೆ. ಆದರೆ ಸ್ಟೇನ್ ಅವರು ಸಚಿನ್ ಮತ್ತು ದ್ರಾವಿಡ್ ಅವರನ್ನು ಹೆಸರಿಸಲು ಕಾರಣವಿದೆ. ಅದೇನೆಂದರೆ, ವಿಶ್ವದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡಿದ್ದ ಸಚಿನ್ ಮತ್ತು ದ್ರಾವಿಡ್ ಇಬ್ಬರೂ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ದಾಖಲೆ ಉಳಿಸಿಕೊಂಡಿದ್ದಾರೆ. ಅಲ್ಲದೆ ಸಚಿನ್, ದ್ರಾವಿಡ್ ಯಾರೇ ಒಪ್ಪಿಕೊಳ್ಳುವಂತ ಪ್ರತಿಭಾನ್ವಿತ ಆಟಗಾರರೂ ಹೌದು.

ಟಿ20 ವಿಶ್ವಕಪ್‌ ನಡೆಯುತ್ತಾ?

ಟಿ20 ವಿಶ್ವಕಪ್‌ ನಡೆಯುತ್ತಾ?

ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಸ್ಟೇನ್ ಕೊಟ್ಟಿರುವ ಉತ್ತರ, ವಿಶ್ವಕಪ್‌ ನಡೆಯುತ್ತೋ ಇಲ್ಲವೊ ಎಂಬ ಅನುಮಾನದಲ್ಲಿದ್ದಂತಿತ್ತು. ವಿಶ್ವಕಪ್ ಪ್ರಶ್ನೆಗೆ ಡೇಲ್, 'ಇಂಥ ಈ ಸಂದರ್ಭದಲ್ಲೂ ಅದು ನಡೆಯಲಿದೆಯಾ?' ಎಂದು ಮರು ಪ್ರಶ್ನಿಸಿದ್ದಾರೆ.

Story first published: Tuesday, April 14, 2020, 14:48 [IST]
Other articles published on Apr 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X