ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ತಂಡದ ರೊಟೇಶನ್ ಪಾಲಿಸಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಡೇಲ್ ಸ್ಟೇನ್

Dale Steyn praised England cricket Board for rotation policy

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಇಂಗ್ಲೆಂಡ್ ಮಂಡಳಿ ಜಾರಿಗೆ ತಂದಿರುವ ಹೊಸ ರೊಟೇಶನ್ ಪದ್ದತಿ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಮಾದರಿಗಳಲ್ಲೂ ಈ ಪಾಲಿಸಿ ತಂದಿರುವುದರಿಂದ ಆಟಗಾರರಿಗೆ ಅಗತ್ಯವಾದ ವಿಶ್ರಾಂತಿ ದೊರೆಯುತ್ತದೆ ಎಂದಿದ್ದಾರೆ ಡೇಲ್ ಸ್ಟೇಯ್ನ್.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಹೊಸ ರೊಟೇಶನ್ ಪದ್ದತಿಯಿಂದಾಗಿ ಅದ್ಭುತ ಆಟಗಾರರ ಸೈನ್ಯವನ್ನು ನಿರ್ಮಿಸಲು ಸಾಧ್ಯವಾಗಲಿದೆ ಎಂದು ಡೇಲ್ ಸ್ಟೇನ್ ಬಣ್ಣಿಸಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ರದ್ದಾಗಿದ್ದ ಕ್ರಿಕೆಟ್ ಟೂರ್ನಿಗಳು ಪುನಾರಂಭವಾದ ನಂತರ ಅತಿಯಾದ ಆಟದಿಂದ ಆಟಗಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಕಾರಣ ಈ ರೊಟೇಶನ್ ಪದ್ದತಿಯ ಮೊರೆ ಹೋಗಿದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ.

ವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕ

"ಇಂಗ್ಲೆಂಡ್‌ನ ರೊಟೇಶನ್ ಪದ್ಧತಿ ನಿಧಾನವಾಗಿ ಆಟಗಾರರ ಸೈನ್ಯವನ್ನು ನಿರ್ಮಾಣ ಮಾಡುತ್ತದೆ. ನಾವು ಈಗ ಸಾಕಷ್ಟು ಸಂಖ್ಯೆಯಲ್ಲಿ ಇದನ್ನು ಟೀಕಿಸಬಹುದು. ಆದರೆ ಮುಂದೆ 8 ವರ್ಷಗಳಲ್ಲಿ 8 ಐಸಿಸಿ ಟೂರ್ನಮೆಂಟ್‌ಗಳು ಆಯೋಜನೆಯಾದಾಗ ಅವರು ಅಂತಾರಾಷ್ಟ್ರೀಯ ಅನುಭವವುಳ್ಳ ಆಟಗಾರರ ಆಯ್ಕೆಯಲ್ಲಿ ಹಿನ್ನಡೆ ಅನುಭವಿಸಲಾರರು" ಎಂದು ಡೇಲ್ ಸ್ಟೇನ್ ಟ್ವೀಟ್‌ ಮೂಲಕ ರೊಟೇಶನ್ ಒಪದ್ದತಿಗೆ ಬೆಂಬಲವನ್ನು ಸೂಚಿಸಿದ್ದಾರೆ.

ಶ್ರೀಲಂಕಾ ವಿರುದ್ಧಧ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವೇಗಿ ಜೋಫ್ರಾ ಆರ್ಚರ್ ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ವಿಶ್ರಾಂತಿಯನ್ನು ನೀಡಿತ್ತು. ಜೊತೆಗೆ ಆರಂಭಿಕ ಆಟಗಾರ ರೋರಿ ಬರ್ನ್ಸ್‌ಗೆ ಪಿತೃತ್ವದ ರಜೆಯನ್ನೂ ನೀಡಿತ್ತು. ಈ ಮೂವರು ಆಟಗಾರರು ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಸೇರಿಕೊಂಡರು. ಆದರೆ ಜಾನಿ ಬೈರ್ಸ್ಟೋವ್, ಸ್ಯಾಮ್ ಕರ್ರನ್ ಮತ್ತು ಮಾರ್ಕ್ ವುಡ್ ಅಂತಿಮ ಎರಡು ಪಂದ್ಯಗಳಿಗೆ ತಂಡವನ್ನು ಕೂಡಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!

ಇಂಗ್ಲೆಂಡ್ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಅಹ್ಮದಾಬಾದ್‌ನಲ್ಲಿ ಫೆಬ್ರವರಿ 23ರಂದು ಆಡಲಿದೆ. ನಾಲ್ಕು ಪಂದ್ಯಗಳ ಈ ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ. ಮೊದಲ ಪಂದ್ಯವನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಪ್ರವಾಸಿಗರಿಗೆ ತಿರುಗೇಟು ನೀಡಲು ಯಶಸ್ವಿಯಾಗಿತ್ತು.

Story first published: Monday, February 22, 2021, 8:01 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X