ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾವುಕ ಸಂದೇಶದೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್!

Dale Steyn retired from all formats of the cricket

ದಕ್ಷಿಣ ಆಫ್ರಿಕಾ ಕಂಡ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗರ ಪೈಕಿ ಒಬ್ಬರಾದ ಡೇಲ್ ಸ್ಟೇನ್ ಮಂಗಳವಾರ ( ಆಗಸ್ಟ್ 31 ) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಸಾಕಷ್ಟು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ, ಅನೇಕ ಪಂದ್ಯಗಳಲ್ಲಿ ತನ್ನ ತಂಡವನ್ನು ಗೆಲ್ಲಿಸಿ, ಹಲವಾರು ವಿಕೆಟ್ ಸಾಧನೆಗಳನ್ನು ಮಾಡಿರುವ ಡೇಲ್ ಸ್ಟೇನ್ ತಮ್ಮ ಕ್ರಿಕೆಟ್ ಜೀವನಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!

38 ವರ್ಷದ ಡೇಲ್ ಸ್ಟೇನ್ 2004 ರ ಡಿಸೆಂಬರ್ 17 ರಂದು ಆರಂಭವಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಮೊದಲ ಸರಣಿಯಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದ ಡೇಲ್ ಸ್ಟೇನ್ ತಂಡದಲ್ಲಿ ಹೆಚ್ಚು ದಿನಗಳ ಕಾಲ ಸ್ಥಾನ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದ್ದರು. ಅದರಂತೆಯೇ ಮುಂದಿನ ಸರಣಿಗಳಲ್ಲಿ ಏಳುಬೀಳುಗಳನ್ನು ಕಂಡ ಡೇಲ್ ಸ್ಟೇನ್ ದಿನ ಕಳೆದಂತೆ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ದಕ್ಷಿಣ ಆಫ್ರಿಕಾ ತಂಡದ ಖಾಯಂ ಆಟಗಾರರ ಪಟ್ಟಿಗೆ ಸೇರಿಬಿಟ್ಟರು.

ಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿ

2018ರ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡೇಲ್ ಸ್ಟೇನ್ ಶಾನ್ ಪೊಲಾಕ್ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು.

ಇನ್ನು ಆಗಸ್ಟ್ 5, 2019 ರಂದು ಡೇಲ್ ಸ್ಟೇನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿ ಸೀಮಿತ ಓವರ್‌ಗಳ ಪಂದ್ಯಗಳತ್ತ ಹೆಚ್ಚಿನ ಗಮನವನ್ನು ಹರಿಸುವುದಾಗಿ ಹೇಳಿದ್ದರು. ಇದಾಗಿ ಸದ್ಯಕ್ಕೆ 2 ವರ್ಷಗಳು ಕಳೆದಿದ್ದು ಡೇಲ್ ಸ್ಟೇನ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.

ಕ್ರಿಕೆಟ್ ಜೀವನ ನೆನೆದು ಭಾವುಕರಾದ ಡೇಲ್ ಸ್ಟೇನ್

ಕ್ರಿಕೆಟ್ ಜೀವನ ನೆನೆದು ಭಾವುಕರಾದ ಡೇಲ್ ಸ್ಟೇನ್

ತಾವು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವುದರ ಕುರಿತು ವಿಶೇಷವಾದ ಪತ್ರವೊಂದನ್ನು ಅಭಿಮಾನಿಗಳಿಗೆ ಬರೆದಿರುವ ಡೇಲ್ ಸ್ಟೇನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಾವು ನಡೆದು ಬಂದ ಹಾದಿಯನ್ನು ನೆನೆದು ಭಾವುಕರಾಗಿದ್ದಾರೆ. 'ನನ್ನ ಕ್ರಿಕೆಟ್ ವೃತ್ತಿ ಜೀವನದ ಗೆಲುವು, ಸೋಲು, ತರಬೇತಿ, ಪಂದ್ಯಗಳು, ಪ್ರವಾಸಗಳು ಹಾಗೂ ಸಹ ಆಟಗಾರರು ಹೀಗೆ ಚರ್ಚಿಸಬಹುದಾದಂತ ಹಲವಾರು ವಿಷಯಗಳು ಇವೆ. ಈ ದಿನ ನಾನು ಅತಿ ಹೆಚ್ಚಾಗಿ ಪ್ರೀತಿಸುವ ಆಟದಿಂದ ಅಧಿಕೃತವಾಗಿ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಕ್ರಿಕೆಟ್‍ ಪಯಣ ಸಿಹಿ ಮತ್ತು ಕಹಿ ಎರಡೂ ಅಂಶಗಳನ್ನೂ ಸಹ ಒಳಗೊಂಡಿದ್ದು ಅದ್ಭುತವಾಗಿತ್ತು. ನನ್ನನ್ನು ಬೆಂಬಲಿಸಿದ ಕುಟುಂಬ ಸದಸ್ಯರು, ಅಭಿಮಾನಿಗಳು, ಸಹ ಆಟಗಾರರು ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದಗಳು' ಎಂದು ಬರೆದುಕೊಳ್ಳುವುದರ ಮೂಲಕ ಡೇಲ್ ಸ್ಟೇನ್ ಅಧಿಕೃತವಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‍ನಲ್ಲಿ ಡೇಲ್ ಸ್ಟೇನ್ ಸಾಧನೆ

ಟೆಸ್ಟ್ ಕ್ರಿಕೆಟ್‍ನಲ್ಲಿ ಡೇಲ್ ಸ್ಟೇನ್ ಸಾಧನೆ

ಮೊದಲೇ ಹೇಳಿದಂತೆ ದಕ್ಷಿಣ ಆಫ್ರಿಕಾ ತಂಡದ ಪರ ಅತಿ ಹೆಚ್ಚು ವಿಕೆಟ್‍ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಡೇಲ್ ಸ್ಟೇನ್ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಮ್ಮ ವೇಗದ ಸ್ವಿಂಗ್ ಬೌಲಿಂಗ್‌ನಿಂದ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿದ್ದ ಡೇಲ್ ಸ್ಟೇನ್ ಒಟ್ಟು 93 ಟೆಸ್ಟ್ ಪಂದ್ಯಗಳನ್ನಾಡಿದ್ದು 439 ವಿಕೆಟ್‍ಗಳನ್ನು ಪಡೆದಿದ್ದಾರೆ.

ಟೀಮ್ ಇಂಡಿಯಾವನ್ನ ಹೇಗೆ ಕಟ್ಟಿಹಾಕ್ಬೇಕು ಅಂತ ನಮ್ಗೆ ಚನ್ನಾಗಿ ಗೊತ್ತು | Oneindia Kannada
ಸೀಮಿತ ಓವರ್ ಪಂದ್ಯಗಳಲ್ಲಿ ಡೇಲ್ ಸ್ಟೇನ್ ಪಡೆದ ವಿಕೆಟ್

ಸೀಮಿತ ಓವರ್ ಪಂದ್ಯಗಳಲ್ಲಿ ಡೇಲ್ ಸ್ಟೇನ್ ಪಡೆದ ವಿಕೆಟ್

ಡೇಲ್ ಸ್ಟೈನ್ ತನ್ನ ವೃತ್ತಿಜೀವನದಲ್ಲಿ 125 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು 196 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ ಹಾಗೂ 47 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು 64 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಳಲ್ಲಿಯೂ ಭಾಗವಹಿಸಿ ಡೇಲ್ ಸ್ಟೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಲಯನ್ಸ್ ತಂಡಗಳ ಪರ ಆಟವಾಡಿದ್ದಾರೆ.

Story first published: Tuesday, August 31, 2021, 17:26 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X