ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs PAK: ಆತ ನಾಯಕನಾಗಲು ಅನರ್ಹ ಎಂದು ಕಿಡಿಕಾರಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

Danish Kaneria Unhappy With Pakistan Bowling In Test Series 1st Match Against England

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 3 ಪಂದ್ಯಗಳ ಸರಣಿಯ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯವಾಗಿದ್ದು, ರಾವಲ್ಪಿಂಡಿಯಲ್ಲಿ ಬ್ಯಾಟರ್ ಗಳ ಪ್ರಾಬಲ್ಯ ಮುಂದುವರಿದಿದೆ. ಎರಡನೇ ದಿನದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್‌ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 181 ರನ್‌ ಗಳಿಸಿದೆ.

ವಿಶ್ವದ ಶ್ರೇಷ್ಠ ಬೌಲಿಂಗ್ ಪಡೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ಸರಿಯಾದ ಉತ್ತರ ನೀಡಿದೆ. ನಾಲ್ವರು ಬ್ಯಾಟರ್ ಮೊದಲನೇ ದಿನದಂದೇ ಶತಕ ಗಳಿಸಿದರು. ಪಾಕಿಸ್ತಾನ ಬೌಲರ್ ವಿಕೆಟ್ ಗಳಿಸಲು ಪರದಾಡಿದರು.

ಐಪಿಎಲ್ 2023ರಲ್ಲಿ ಜಾರಿಯಾಗಲಿದೆ ಹೊಸ ನಿಯಮ: ಇದರಿಂದ ಆಟದಲ್ಲಿ ಆಗುವ ಬದಲಾವಣೆ ಏನು ಗೊತ್ತಾ?ಐಪಿಎಲ್ 2023ರಲ್ಲಿ ಜಾರಿಯಾಗಲಿದೆ ಹೊಸ ನಿಯಮ: ಇದರಿಂದ ಆಟದಲ್ಲಿ ಆಗುವ ಬದಲಾವಣೆ ಏನು ಗೊತ್ತಾ?

ನಾಯಕ ಬಾಬರ್ ಅಜಂ ಬೌಲಿಂಗ್‌ನಲ್ಲಿ ಹಲವು ಬದಲಾವಣೆ ಮಾಡಿದರು ಇಂಗ್ಲೆಂಡ್ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಬೌಲಿಂಗ್ ಪ್ರದರ್ಶನದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಟೀಕೆ ಮಾಡಿದ್ದು, ಬಾಬರ್ ಅಜಂ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ. ನಾಯಕ ಬೌಲಿಂಗ್‌ನಲ್ಲಿ ಸರಿಯಾಗಿ ಬದಲಾವಣೆ ಮಾಡದಿರುವುದೇ ಇಂಗ್ಲೆಂಡ್ ಹೆಚ್ಚಿನ ರನ್ ಗಳಿಸಲು ಕಾರಣ ಎಂದು ಹೇಳಿದರು.

ನಾಯಕತ್ವದಿಂದ ವಜಾಗೊಳಿಸಲು ಸೂಚನೆ

ನಾಯಕತ್ವದಿಂದ ವಜಾಗೊಳಿಸಲು ಸೂಚನೆ

ತಪ್ಪಾದ ಫೀಲ್ಡ್ ಪ್ಲೇಸ್‌ಮೆಂಟ್‌ ಸೆಟ್ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟರ್ ಗಳಿಗೆ ಸುಲಭವಾಗಿ ರನ್ ಗಳಿಸಲು ಅವಕಾಶ ಮಾಡಿಕೊಟ್ಟರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಕ್ಷಣವೇ ಅವರನ್ನು ನಾಯಕತ್ವದಿಂದ ವಜಾಗೊಳಿಸಬೇಕು ಮತ್ತು ಅವರಿಗೆ ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.

ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಸೆಮಿಫೈನಲ್‌ನಲ್ಲಿ ಅವರು ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದರು. ಟಿ20 ವಿಶ್ವಕಪ್‌ನಲ್ಲಿ 7 ಪಂದ್ಯಗಳನ್ನಾಡಿದ್ದ ಬಾಬರ್ ಅಜಂ ಕೇವಲ 124 ರನ್ ಗಳಿಸಿದರು.

Ind vs Ban: ಅಭ್ಯಾಸ ಮಾಡಿದ ಕೊಹ್ಲಿ, ವಿಶ್ರಾಂತಿ ಪಡೆದ ರೋಹಿತ್ ಶರ್ಮಾ ಮತ್ತು ತಂಡ

ನಾಯಕತ್ವದ ಗುಣಗಳು ಆತನಲ್ಲಿ ಇಲ್ಲ

ನಾಯಕತ್ವದ ಗುಣಗಳು ಆತನಲ್ಲಿ ಇಲ್ಲ

ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, ಬಾಬರ್ ಅಜಮ್ ನಾಯಕತ್ವ ನಿಭಾಯಿಸುವ ಅರ್ಹತೆ ಹೊಂದಿಲ್ಲ. ಆತನನ್ನು ಟಿ20, ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನೋಡಿದ್ದೇವೆ. ತಕ್ಷಣ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಬೇರೆಯವರನ್ನು ನಾಯಕನನ್ನಾಗಿ ನೇಮಿಸಬೇಕು, ಬಾಬರ್ ಅಜಮ್‌ಗೆ ಬ್ಯಾಟಿಂಗ್ ಕಡೆ ಗಮನ ಹರಿಸಲು ಸೂಚನೆ ನೀಡಬೇಕು ಎಂದು ಹೇಳಿದರು.

ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡುವಾಗ ಇಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಪಾಕಿಸ್ತಾನ ವಿಫಲವಾಗಿದೆ ಎಂದು ಕನೇರಿಯಾ ಹೇಳಿದ್ದಾರೆ. ನೀವು ಮೊದಲಿನಿಂದ ತವರಿನಲ್ಲಿ ಆಡಿರುವ ಅನುಭವ ಇದ್ದರೂ, ಅದರ ಲಾಭ ಪಡೆಯಲಿಲ್ಲ ಎಂದು ಟೀಕಿಸಿದ್ದಾರೆ.

ಫೀಲ್ಡಿಂಗ್‌ನಲ್ಲಿ ವಿಫಲವಾದ ಪಾಕಿಸ್ತಾನ

ಫೀಲ್ಡಿಂಗ್‌ನಲ್ಲಿ ವಿಫಲವಾದ ಪಾಕಿಸ್ತಾನ

ಹ್ಯಾರಿಸ್ ರೌಫ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ನಾಯಕ ಬಾಬರ್ ಅಜಮ್ ಸ್ಲಿಪ್‌ನಲ್ಲಿದ್ದ ಫೀಲ್ಡರ್ ಗಳನ್ನು ತೆಗೆದುಹಾಕಿದರು. ಕನಿಷ್ಠ ಸ್ಲಿಪ್ ಮತ್ತು ಗಲ್ಲಿಯಲ್ಲಿ ಫೀಲ್ಡರ್ ಅನ್ನು ನಿಲ್ಲಿಸಬೇಕಿತ್ತು, ಆದರೆ ಬಾಬರ್ ಆರಂಭದಿಂದಲೇ ಫೀಲ್ಟಿಂಗ್ ಸೆಟ್ ಮಾಡುವಲ್ಲಿ ವಿಫಲವಾದರು ಎಂದು ಕನೇರಿಯಾ ಹೇಳಿದ್ದಾರೆ.

ಪಾಕಿಸ್ತಾನದ ತಪ್ಪುಗಳ ಲಾಭ ಪಡೆದ ಇಂಗ್ಲೆಂಡ್ ಬ್ಯಾಟರ್ ಗಳು ಉತ್ತಮವಾಗಿ ರನ್ ಗಳಿಸಿದರು. ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ಸ್ ಮೊದಲನೇ ದಿನ ಶತಕಗಳನ್ನು ಗಳಿಸುವ ಮೂಲಕ ಮೊದಲದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 506 ರನ್ ಗಳಿಸಿತ್ತು. ಎರಡನೇ ದಿನದಲ್ಲಿ ಇಂಗ್ಲೆಂಡ್ ಅಂತಿಮವಾಗಿ 101 ಓವರ್‌ಗಳಲ್ಲಿ 657 ರನ್‌ಗಳಿಗೆ ಆಲೌಟ್ ಆದರು.

ಯಾವುದೇ ಒತ್ತಡವಿಲ್ಲ ಎಂದ ಬಾಬರ್ ಅಜಮ್

ಯಾವುದೇ ಒತ್ತಡವಿಲ್ಲ ಎಂದ ಬಾಬರ್ ಅಜಮ್

ಪಾಕಿಸ್ತಾನ ತಂಡವನ್ನು ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನಡೆಸಿದ ಬಾಬರ್ ಅಜಮ್, ಪಾಕಿಸ್ತಾನ ತಂಡಕ್ಕೆ ನಾಯಕತ್ವ ನಿಭಾಯಿಸುವಾಗ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ. ಮೈದಾನದಲ್ಲಿ ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನ ಪಡುತ್ತೇನೆ ಎಂದು ಹೇಳಿದರು.

ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ಕ್ಷಣವಾಗಿದೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದರು. ಬಾಬರ್ ಅಜಮ್ ಇದುವರೆಗೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯ ಸೇರಿದಂತೆ 14 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 8 ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಎರಡು ಪಂದ್ಯಗಳಲ್ಲಿ ಡ್ರಾನಲ್ಲಿ ಕೊನೆಯಾಗಿದೆ.

Story first published: Friday, December 2, 2022, 21:44 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X