ಲುಂಗಿ ಎನ್‌ಗಿಡಿ ಟೀಕಿಸಿದ ದಕ್ಷಿಣ ಆಫ್ರಿಕಾ ಆಟಗಾರರ ವಿರುದ್ಧ ಸಾಮಿ ಕಿಡಿ

ಪೋರ್ಟ್ ಅಫ್‌ ಸ್ಪೇನ್, ಜುಲೈ 10: #BlackLivesMatterಗೆ ಬೆಂಬಲ ಸೂಚಿಸಿದ ಪ್ರೋಟಿಯಾಸ್ ವೇಗಿ ಲುಂಗಿಸಾನಿ ಎನ್‌ಗಿಡಿಯನ್ನು ಟೀಕಿಸಿದ ದಕ್ಷಿಣ ಆಫ್ರಿಕಾ ಮಾಜಿ ಆಟಗಾರರ ವಿರುದ್ಧ ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಾಮಿ ಕಿಡಿ ಕಾರಿದ್ದಾರೆ. ವರ್ಣಬೇಧ ನೀತಿಯ ವಿರುದ್ಧ ಮಾತೆತ್ತಿದ್ದ ಮೊದಲ ಕ್ರಿಕೆಟಿಗನಾಗಿ ಸಾಮಿ ಗುರುತಿಸಿಕೊಂಡಿದ್ದರು.

ಕ್ರಿಕೆಟ್ ಆಡಬೇಕಾದರೆ ಇಸಿಬಿ ಸಂಪರ್ಕಿಸು: ಕನೇರಿಯಾಗೆ ಪಿಸಿಬಿ ಸಲಹೆ

'ಒಂದು ಸತ್ಯ ಸಂಗತಿಯೆಂದರೆ, ಕೆಲ ಮಾಜಿ ಆಟಗಾರರಿಗೆ ಲುಂಗಿ ಎನ್‌ಗಿಡಿ ಅವರು #blacklivesmatter ಪ್ರತಿಭಟನೆಯ ಪರ ನಿಂತಿದ್ದು ಸರಿ ಕಾಣಿಸಿಲ್ಲ. ನಾವು ಬ್ಲ್ಯಾಕ್‌ ಲೈವ್ಸ್ ಮ್ಯಾಟರ್ ಬಗ್ಗೆ ಈಗಲೂ ಧ್ವನಿಯೆತ್ತುತ್ತಿರುವುದರ ಅಸಲಿ ಕಾರಣವಿದು. #standupbrother ನಾವು ನಿನ್ನ ಜೊತೆಗಿದ್ದೇವೆ' ಎಂದು ಮಾಜಿ ಆಲ್ ರೌಂಡರ್ ಸಾಮಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪ್ರತಿಭಟನೆಗೆ ಬೆಂಬಲಿಸಿದ ಲುಂಗಿ ಎನ್‌ಗಿಡಿ ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ಆಟಗಾರರಾದ ಪ್ಯಾಟ್ ಸಿಮ್ಕಾಕ್ಸ್ ಮತ್ತು ಬೋಟಾ ಡಿಪ್ಪೆನಾರ್ ಟೀಕಿಸಿದ್ದರು. ಎನ್‌ಗಿಡಿ ಅವರು ದೇಶದಲ್ಲಿ ನಡೆಯುತ್ತಿರುವ ಬಿಳಿಯರ ಮೇಲಿನ ಹಲ್ಲೆಯ ಬಗ್ಗೆಯೂ ಮಾತನಾಡಬೇಕು ಎಂದಿದ್ದರು. ಮಾಜಿ ಆಟಗಾರರ ಈ ಬಾಲಿಶ ಹೇಳಿಕೆಗೆ ಸಾಮಿ ತಿರುಗೇಟು ನೀಡಿದ್ದಾರೆ.

ಕ್ರಿಕೆಟ್ ವೃತ್ತಿ ಜೀವನದ ಅತಿ ದೊಡ್ಡ ಹಿನ್ನಡೆಗೆ ಗ್ರೇಗ್ ಚಾಪೆಲ್ ಒಬ್ಬರೇ ಕಾರಣವಲ್ಲ: ಸೌರವ್ ಗಂಗೂಲಿ

24ರ ಹರೆಯದ ಲುಂಗಿ ಎನ್‌ಗಿಡಿ ವರ್ಣಭೇದ ನೀತಿಯ ವಿರುದ್ಧ ಮಾತನಾಡಿದ್ದರು. 'ಉಳಿದ ದೇಶಗಳಂತೆ ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ವರ್ಣಭೇದ. ನಾವಿಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ,' ಎಂದಿದ್ದರು. ಲುಂಗಿಯ ಹೇಳಿಕೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ರೂಡಿ ಸ್ಟೇನ್‌ಗೂ ಸರಿಕಾಣಿಸಿಲ್ಲ. ಸಿಮ್ಕಾಕ್ಸ್ ಮತ್ತು ಡಿಪ್ಪೆನಾರ್ ಅವರಂತೆ ಸ್ಟೇನ್ ಕೂಡ ಎನ್‌ಗಿಡಿಯನ್ನು ಟೀಕಿಸಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 10, 2020, 22:07 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X