ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಇಂಗ್ಲೆಂಡ್ ಮಾಜಿ ನಾಯಕ

David Gower sees Sourav Ganguly as ICC boss

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭವಿಷ್ಯದಲ್ಲಿ ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ಅಧ್ಯಕ್ಷ ಭವಿಷ್ಯ ನುಡಿದಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಚಾಣಾಕ್ಷತನವೂ ಸೌರವ್ ಗಂಗೂಲಿ ಬಳಿ ಇದೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಡೇವಿಡ್ ಗೋವೆರ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಗಂಗೂಲಿ ಬಗ್ಗೆ ಸಾಕಷ್ಟು ಉತ್ತಮ ಮಾತುಗಳನ್ನು ಹೇಳಿದ್ದಾರೆ."ಗಂಗೂಲಿ ವ್ಯಕ್ತಿಯಾಗಿ ಬಹಳ ಉತ್ತಮ ಮನುಷ್ಯ. ರಾಜಕೀಯ ಕೌಶಲ್ಯವನ್ನು ಹೊಂದಿದ್ದಾರೆ. ಉತ್ತಮ ಮನೋಭಾವವನ್ನು ಹೊಂದಿದ್ದಾರೆ. ಹಲವು ವಿಚಾರಗಳನ್ನು ಒಗ್ಗೂಡಿಸಿ ಕೆಲಸ ಮಾಡುತ್ತಾರೆ ಎಂದು ಗೋವೆರ್ ಪ್ರಶಂಸಿಸಿದ್ದಾರೆ.

ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್

ಮುಂದುವರಿದು, ಭವಿಷ್ಯದಲ್ಲಿ ಐಸಿಸಿಯನ್ನು ಮುನ್ನಡೆಸಲು ಬೇಕಾದ ಸಾಮರ್ಥ್ಯವನ್ನು ಬಿಸಿಸಿಐನಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಗಳಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಬಿಸಿಸಿಐನ ಅಧ್ಯಕ್ಷರಾಗಿರುವುದು ಜಾಗತಿಕ ಕ್ರಿಕೆಟ್ ನ ಅತ್ಯಂತ ಕಠಿಣ ಕೆಲಸ. ಖಂಡಿತವಾಗಿಯೂ ನೀವು ಅನುಸರಿಸಬೇಕಾದ ತಂತ್ರಗಳಿಗೆ ಹೊಣೆಗಾರಿಕೆಯಾಗಿರಬೇಕಾಗುತ್ತದೆ. ಅಂದರೆ ಅಪಾರ ಜನಸಂಖ್ಯೆಯಿರುವ ಭಾರತದಲ್ಲಿ ಇನ್ನೆಲಾ ಭಾಗಗಳಿಗಿಂತ ಹೆಚ್ಚಿ ಜವಾಬ್ಧಾರಿಯಿರುತ್ತದೆ ಎಂದು ಇಂಗ್ಲೆಂಡ್‌ನ ಮಾಜಿ ಆಟಗಾರ ಹೇಳಿದ್ದಾರೆ

ಬಿಸಿಸಿಐ ಅಧ್ಯಕ್ಷಗಿರಿಯನ್ನು ನಿಭಾಯಿಸುತ್ತಿರುವ ರೀತಿಗೆ ಪ್ರಶಂಸಿಸಿದ ಗೋವೆರ್, ಸೌರಭ್ ಗಂಗೂಲಿ ಅವರಲ್ಲಿ ಉತ್ತಮ ಆಡಳಿತಗಾರನ ಎಲ್ಲಾ ಗುಣಗಳನ್ನು ಇವೆ, ಭವಿಷ್ಯದಲ್ಲಿ ಕ್ರಿಕೆಟ್‌ನ ವಿಶ್ವ ಸಂಸ್ಥೆಯಾದ ಐಸಿಸಿಯ ಅಧ್ಯಕ್ಷರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಪೂರಕವಾದ ಸಾಮರ್ಥ್ಯವನ್ನುಪ್ರದರ್ಶಿಸುತ್ತಿದ್ದಾರೆ ಎಂದು ಡೇವಿಡ್ ಗೋವೆರ್ ಹೇಳಿದರು.

ಪ್ರಥಮ ODI ದ್ವಿಶತಕ: 190 ರನ್‌ಗಳಿಸಿದ್ದಾಗಲೇ ಸಚಿನ್ ಔಟಾಗಿದ್ದರು ಎಂದು ಸುಳ್ಳು ಹೇಳಿದ ಡೇಲ್ ಸ್ಟೇಯ್ನ್ಪ್ರಥಮ ODI ದ್ವಿಶತಕ: 190 ರನ್‌ಗಳಿಸಿದ್ದಾಗಲೇ ಸಚಿನ್ ಔಟಾಗಿದ್ದರು ಎಂದು ಸುಳ್ಳು ಹೇಳಿದ ಡೇಲ್ ಸ್ಟೇಯ್ನ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅನ್ನು ಮುನ್ನೆಡಸಲು ಬೇಕಾದ ಉತ್ತಮ ರಾಜಕೀಯ ಕೌಶಲವನ್ನು ಹೊಂದಿದ್ದಾರೆ ಎಂದು ಅಭಿಮಾನಿಗಳೊಂದಿಗೆ ಟ್ವಿಟ್ಟರ್‌ನಲ್ಲಿ ಸಂವಾದವನ್ನು ನಡೆಸುವ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಡೇವಿಡ್ ಗೋವೆರ್ ಅಭಿಪ್ರಾಯಪಟ್ಟಿದ್ದಾರೆ.

Story first published: Sunday, May 17, 2020, 17:05 [IST]
Other articles published on May 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X