ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಲ್ಲಿ ಒಳ್ಳೆಯ ಭವಿಷ್ಯವಿರುವ ಕೆಕೆಆರ್ ಆಟಗಾರನ ಹೆಸರಿಸಿದ ಡೇವಿಡ್ ಹಸ್ಸಿ

David Hussey names KKR youngster who has got ‘a big future’ in cricket

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅದ್ಭುತ ಪ್ರದರ್ಶನ ನೀಡಿತ್ತು. ಕೆಕೆಆರ್ ತಂಡದಲ್ಲಿದ್ದ ಯುವ ಬ್ಯಾಟ್ಸ್‌ಮನ್‌ ವೆಂಕಟೇಶ್ ಅಯ್ಯರ್ ಹೆಚ್ಚು ಗಮನ ಸೆಳೆದಿದ್ದರು. ದ್ವಿತೀಯ ಹಂತದ ಟೂರ್ನಿಯಲ್ಲಿ ಆರಂಭದಿಂದಲೂ ತಂಡದ ಬಲವಾಗಿ ನಿಂತ ಅಯ್ಯರ್ ತಂಡವನ್ನು ಫೈನಲ್‌ ಕಡೆಗೆ ಕೊಂಯೊಯ್ಯುವಲ್ಲಿ ಪ್ರಮುಖ ಕಾರಣರಾಗಿದ್ದರು.

 ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

ಈ ಐಪಿಎಲ್ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿರುವ ವೆಂಕಟೇಶ್ ಅಯ್ಯರ್, 40ರ ಸರಾಸರಿಯಲ್ಲಿ 320 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಅಷ್ಟೇ ಅಲ್ಲ, ಬೌಲಿಂಗ್‌ನಲ್ಲೂ 3 ವಿಕೆಟ್‌ ಪಡೆದಿದ್ದಾರೆ. ಐಯ್ಯರ್‌ನಂಥ ಬಲಿಷ್ಠ ಆಟಗಾರರಿದ್ದಿದ್ದರಿಂದಲೇ ಕೆಕೆಆರ್ ತಂಡ ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಯ್ಯರ್ 41 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಪಂದ್ಯದಲ್ಲಿ ಕೆಕೆಆರ್ 3 ವಿಕೆಟ್‌ ಜಯ ಗಳಿಸಿತ್ತು. ಕ್ವಾಲಿಫೈಯರ್ ಪಂದ್ಯದ ಬಳಿಕ ಕೋಲ್ಕತ್ತಾ ಮುಖ್ಯ ಮೆಂಟರ್ ಡೇವಿಡ್ ಹಸ್ಸಿ ವೆಂಕಟೇಶ್ ಅಯ್ಯರ್ ಅವರನ್ನು ಶ್ಲಾಘಿಸಿದ್ದಾರೆ.

ರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾ

"ನಾವು ವೆಂಕಟೇಶ್ ಅಯ್ಯರ್ ಅವರಂಥ ಆಟಗಾರನನ್ನು ಕಂಡುಕೊಂಡಿದ್ದೇವೆ. ಆತನೊಬ್ಬ ಕ್ಲಾಸ್ ಆಟಗಾರ ಅಷ್ಟೇ ಅಲ್ಲ, ಆತನೊಬ್ಬ ಅದ್ಭುತ ವ್ಯಕ್ತಿ. ಒಂದನೇ ಬಾಲ್‌ನಿಂದಲೂ ಆತ ಚಚ್ಚಲು ಶುರು ಮಾಡುತ್ತಾನೆ. ನನಗನ್ನಿಸುತ್ತಿದೆ, ಕ್ರಿಕೆಟ್‌ನಲ್ಲಿ ಅಯ್ಯರ್‌ಗೆ ಉತ್ತಮ ಭವಿಷ್ಯವಿದೆ," ಎಂದು ಹಸ್ಸಿ ಹೇಳಿದ್ದಾರೆ.

Story first published: Thursday, October 14, 2021, 19:49 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X