ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗೆ ಅಣಕಿಸಿ ಟ್ವೀಟ್‌ ಮಾಡಿದ ಲಾಯ್ಡ್‌ಗೆ ಅಭಿಮಾನಿಗಳಿಂದ ತರಾಟೆ

ಧೋನಿಯನ್ನು ಕಿಂಡಲ್ ಮಾಡಿದ್ರೆ ಹಿಂಗೆ ಆಗೋದು..? | Oneindia Kannada
David Lloyd gets trolled for cheeky tweet on Dhoni

ಹೊಸದಿಲ್ಲಿ, ಜುಲೈ, 22: ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮಹೇಮದ್ರ ಸಿಂಗ್‌ ಧೋನಿ ಮುಂಬರುವ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡದಿಂದ ಹೊರಗುಳಿದು, ಟೆರಿಟೋರಿಯಲ್‌ ಆರ್ಮಿಯ ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಈ ಸುದ್ದಿಗೆ ಅಣಕವಾಡುವಂತೆ ಟ್ವಿಟರ್‌ನಲ್ಲಿ ಕಣ್ಣೀರಿಟ್ಟು ನಗುತ್ತಿರುವ ಇಮೋಜಿಯೊಂದಿಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಡೇವಿಡ್‌ ಲಾಯ್ಡ್‌ ಟ್ವೀಟ್‌ ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಲಾಯ್ಡ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

ಹಲವರು ಲಾಯ್ಡ್‌ ಅವರಿಗೆ ಅವರ ಅಲ್ಪಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿನ ಝಲಕ್‌ ನೀಡಿ, 72 ವರ್ಷದ ಟೆಲಿವಿಷನ್‌ ಬ್ರಾಡ್‌ಕಾಸ್ಟರ್‌ಗೆ ಭಾರತ ತಂಡದ ಮಾಜಿ ನಾಯಕನ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದು ಬಿಸಿಮುಟ್ಟಿಸಿದ್ದಾರೆ. "9 ಟೆಸ್ಟ್‌, 8 ಒಡಿಐ Vs 90 ಟೆಸ್ಟ್ , 350 ಒಡಿಐ. ಇಂಗ್ಲೆಂಡ್‌ನ ಈ ದಿಗ್ಗಜ ಆಟಗಾರನಿಗೆ ಎಮ್ಮೆ ಚರ್ಮ ಇದ್ದಿರಬೇಕು, " ಎಂದು ಅಭಿಮಾನಿಯೊಬ್ಬ ಖಡಕ್‌ ಟ್ವೀಟ್‌ ಮಾಡಿ ಲಾಯ್ಡ್‌ಗೆ ಅವರ ಸ್ಥಾನ ಏನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

"ಹೆದರಿ ಈ ರೀತಿ ನಕ್ಕಿರುವುದೇ? ನೀನೊಬ್ಬ ಹೇಡಿ," ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್‌ ಮಾಡಿದರೆ, "ಗೌರವ ಕೊಡುವುದು ಬರದೇ ಇದ್ದರೆ, ಅದರಿಂದ ದೂರ ಉಳಿಯುವುದನ್ನು ಕಲಿಯಿರಿ. ಇಂಗ್ಲೆಂಡ್‌ನ ಸೋ ಕಾಲ್ಡ್‌ ದಿಗ್ಗಜ ಆಟಗಾರನಿಗೆ ಮಾಡಲು ಬೇಲೆ ಕೆಲಸವಿಲ್ಲ. ಅಯ್ಯೋ ಪಾಪ," ಎಂದು ಮತ್ತೂ ಕೆಲವರು ವ್ಯಂಗ್ಯವಾಡಿದ್ದಾರೆ.

ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!

ಆಗಸ್ಟ್‌ 3ರಂದು ಭಾರತ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸ ಆರಂಭವಾಗಲಿದ್ದು, ಕೆರಿಬಿಯನ್‌ ನಾಡಲ್ಲಿ ಭಾರತ ತಂಡ ತಲಾ ಮೂರು ಟಿ20-ಐ ಮತ್ತು ಏಕದಿನ ಪಂದ್ಯಗಳ ಸರಣಿ ಹಾಗೂ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಇದೇ ವೇಳೆ ಧೋನಿ ನಿವೃತ್ತಿ ಕುರಿತಾಗಿ ಮಾತನಾಡಿರುವ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌, ಧೋನಿ ನಿವೃತ್ತಿ ಸದ್ಯಕ್ಕಿಲ್ಲ, 2020ರ ಟಿ20 ವಿಶ್ವಕಪ್‌ ಟೂರ್ನಿಗೆ ರಿಷಭ್‌ ಪಂತ್‌ ಅವರನ್ನು ಸಿದ್ದಪಡಿಸಲು ಧೋನಿ ನೆರವಾಗಲಿದ್ದಾರೆ ಎಂದು ಹೇಳಿದ್ದರು.

Story first published: Monday, July 22, 2019, 20:57 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X