ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೈಚಳಕ ತೋರಿದ ಮಿಲ್ಲರ್‌ನ 'ಧೋನಿ' ಎಂದ ಡು ಪ್ಲೆಸಿಸ್: ವೈರಲ್ ವಿಡಿಯೋ!

David Miller’s smart work behind the stumps forces Du Plessis to call him ‘MS Dhoni’

ಸೆಂಚುರಿಯನ್, ಮಾರ್ಚ್ 7: ವಿಕೆಟ್ ಕೀಪಿಂಗ್ ಗಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಕೀಪಿಂಗ್ ವಿಚಾರದಲ್ಲಿ ಧೋನಿಯ ಜನಪ್ರಿಯತೆಯನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್ ನೆನಪಿಸುವ ಮೂಲಕ ಗಮನ ಸೆಳೆದರು.

500ನೇ ಏಕದಿನ ಗೆಲುವಿನ ಬಳಿಕ ಮತ್ತೊಂದು ದಾಖಲೆಗೆ ಕೊಹ್ಲಿ ಬಳಗ ಸಜ್ಜು!500ನೇ ಏಕದಿನ ಗೆಲುವಿನ ಬಳಿಕ ಮತ್ತೊಂದು ದಾಖಲೆಗೆ ಕೊಹ್ಲಿ ಬಳಗ ಸಜ್ಜು!

ಇದಾಗಿದ್ದು ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಪಾರ್ಕ್ ನಲ್ಲಿರುವ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 6) ನಡೆದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ದ್ವಿತೀಯ ಏಕದಿನ ಪಂದ್ಯದಲ್ಲಿ. ಕೀಪಿಂಗ್‌ಗೆ ಇಳಿದಿದ್ದ ಡೇವಿಡ್ ಮಿಲ್ಲರ್ ಎದುರಾಳಿ ಆಟಗಾರನನ್ನು ಸ್ಟಂಪ್ಡ್ ಔಟ್ ಮಾಡಲು ಯತ್ನಿಸಿದಾಗ, ಮಿಲ್ಲರ್ ಅವರನ್ನು ಪ್ಲೆಸಿಸ್ ಧೋನಿ ಎಂದು ಕರೆದರು.

ಡ್ರೈವರ್ ಆಗಿ ಜೊತೆ ಆಟಗಾರರನ್ನು ಹಮ್ಮರ್ ರೈಡ್‌ಗೆ ಕರೆದೊಯ್ದ ಧೋನಿ!ಡ್ರೈವರ್ ಆಗಿ ಜೊತೆ ಆಟಗಾರರನ್ನು ಹಮ್ಮರ್ ರೈಡ್‌ಗೆ ಕರೆದೊಯ್ದ ಧೋನಿ!

ಪ್ರೋಟಿಯಾಸ್ ಎಂದಿನ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರು 31ನೇ ಓವರ್‌ನಲ್ಲಿ ಮೈದಾನದಿಂದ ನಿರ್ಗಮಿಸಲು ನಿರ್ಧರಿಸಿದರು. ಆಗ ಕಿಪಿಂಗ್ ಹೊಣೆಗಾರಿಕೆಯನ್ನು ಡು ಪ್ಲೆಸಿಸ್ ಅವರು ಫೀಲ್ಡಿಂಗ್‌ ಪ್ರವೀಣ ಮಿಲ್ಲರ್ ಅವರ ಹೆಗಲ ಮೇಲೆ ಹಾಕಿದರು.

ಏಕದಿನ ಪಂದ್ಯ: ಡಿ ಕಾಕ್ ಅಬ್ಬರ, ಶ್ರೀಲಂಕಾಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾಏಕದಿನ ಪಂದ್ಯ: ಡಿ ಕಾಕ್ ಅಬ್ಬರ, ಶ್ರೀಲಂಕಾಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

ಹೀಗೆ ಮೊದಲ ಬಾರಿಗೆ ಕೀಪಿಂಗ್ ಗ್ಲೌಸ್ ಧರಿಸಿದ ಮಿಲ್ಲರ್ 32ನೇ ಓವರ್‌ನಲ್ಲಿ ಇಮ್ರಾನ್ ತಾಹಿರ್ ಎಸೆತದಲ್ಲಿ ಎದುರಾಳಿ ಲಂಕಾ ಆಟಗಾರನನ್ನು ಸ್ಟಂಪ್ಡ್ ಮಾಡಲು ಯತ್ನಿಸಿದರು. ಇದನ್ನು ಕಂಡ ಪ್ಲೆಸಿಸ್, 'ನಿನ್ನ ಕೈಚಳಕ ನೋಡಿದೆ. ಕಮಾನ್ ಎಂಎಸ್' ಎಂದು ಕೂಗಿ ಮಿಲ್ಲರ್ ಅವರನ್ನು ಹುರಿದುಂಬಿಸಿದರು.

ಈ ಪಂದ್ಯದಲ್ಲಿ ಆಫ್ರಿಕಾ 113 ರನ್ ಜಯ ಸಾಧಿಸಿತು. ಅಂದ್ಹಾಗೆ ಪ್ಲೆಸಿಸ್ ಅವರು ಪಂದ್ಯದ ವೇಳೆ ಧೋನಿ ಅವರನ್ನು ನೆನಪಿಸಿಕೊಂಡಿದ್ದಕ್ಕೆ ಕಾರಣವೂ ಇದೆ. ಐಪಿಎಲ್ ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿರುವ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ಮನ್ ಕೈಚಳಕ ತೋರಿದ ಮಿಲ್ಲರ್‌ನ 'ಧೋನಿ' ಎಂದ ಡು ಪ್ಲೆಸಿಸ್: ವೈರಲ್ ವಿಡಿಯೋ! ಪ್ಲೆಸಿಸ್, ಧೋನಿ ಅವರ ಕೀಪಿಂಗ್, ಬ್ಯಾಟಿಂಗ್‌ ಪ್ರತಿಭೆಯನ್ನು ಹತ್ತಿರದಿಂದ ಕಂಡಿದ್ದಾರಲ್ಲವೆ?

Story first published: Thursday, March 7, 2019, 18:51 [IST]
Other articles published on Mar 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X