ಸಿಡ್ನಿ, ಜೂನ್ 8: ವಿಶ್ವದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದಾಗ ಕ್ರಿಕೆಟ್ ಅಭಿಮಾನಿಗಳನ್ನು ಹೆಚ್ಚು ರಂಜಿಸಿದವರೆಂದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೀವಿಡ್ ವಾರ್ನರ್. ಅದರಲ್ಲೂ ಭಾರತೀಯ ಗೀತೆಗಳಿಗೆ ಸ್ಟೆಪ್ ಹಾಕಿದ್ದ ವಾರ್ನರ್ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದರು.
ಐಪಿಎಲ್ನಲ್ಲಿ ವರ್ಣಬೇಧ: ಸ್ಯಮಿ ಆರೋಪಕ್ಕೆ ಬಾಯ್ತೆರೆದ ಪಾರ್ಥಿವ್, ಪಠಾಣ್
ಡೇವಿಡ್ ವಾರ್ನರ್ ಮತ್ತವರ ಇಡೀ ಕುಟುಂಬ ಇನ್ನೊಂದು ಚಂದದ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದೆ. ಇದರಲ್ಲಿ ವಾರ್ನರ್ ಮತ್ತವರ ಕುಟುಂಬಸ್ಥರು ಮಾಡಿರುವ ಬೇರೆ ಬೇರೆ ವೀಡಿಯೋಗಳನ್ನು ಒಟ್ಟುಗೂಡಿಸಲಾಗಿದೆ. ವಾರ್ನರ್ ಕಂಪೈಲ್ ಮಾಡಿರುವ ಈ ವೀಡಿಯೋದಲ್ಲೂ ತೆಲುಗು ಸಾಂಗ್ ಇದೆ.
ವರ್ಣಬೇಧದ ವಿರುದ್ಧ ಧ್ವನಿಯೆತ್ತಿ, ಯಾಕಂದ್ರೆ ಅದು ತಪ್ಪು: ಜೋಫ್ರಾ ಆರ್ಚರ್
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಅಲ ವೈಕುಂಟಪುರಮುಲೂ' ಚಿತ್ರದ 'ರಾಮುಲೂ ರಾಮುಲಾ' ಸಾಂಗ್ಗೆ ವೀಡಿಯೋಗಳನ್ನು ಕಂಪೈಲ್ ಮಾಡಲಾಗಿದೆ. ಡೇವಿಡ್, ಪತ್ನಿ ಕ್ಯಾಡೀಸ್ ವಾರ್ನರ್ ಮತ್ತವರ ಮೂವರು ಮಕ್ಕಳೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಗಂಗೂಲಿ ಐಸಿಸಿ ಅಧ್ಯಕ್ಷನಾಗಲಿ ಎಂದ ಪಾಕಿಸ್ತಾನದ ಮಾಜಿ ಸ್ಪಿನ್ನರ್
ಕೊರೊನಾ ಲಾಕ್ಡೌನ್ ಸಮಯದಲ್ಲಿ ಟಿಕ್ ಟಾಕ್ ವೀಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಳ್ಳುತ್ತಿದ್ದ ವಾರ್ನರ್ ಹೆಚ್ಚು ಗಮನ ಸೆಳೆದಿದ್ದರು. ಮುಖ್ಯವಾಗಿ ಭಾರತೀಯರ ಡ್ಯಾನ್ ವೀಡಿಯೋಗಳು, ಭಾರತೀಯ ಗೀತೆಗಳ ವೀಡಿಯೋವನ್ನೇ ಹೆಚ್ಚಾಗಿ ವಾರ್ನರ್ ಶೇರ್ ಮಾಡುತ್ತಿರುವುದರಿಂದ ಭಾರತೀಯರಿಗೆ ಇಂಥ ವೀಡಿಯೋಗಳು ಹೆಚ್ಚು ಇಷ್ಟವಾಗುತ್ತಿವೆ.