ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುತ್ರಿಯೊಂದಿಗೆ 'ಶೀಲಾ ಕಿ ಜವಾನಿ'ಗೆ ಡ್ಯಾನ್ಸ್ ಮಾಡಿದ ವಾರ್ನರ್: ವೀಡಿಯೋ

David Warner dances to Sheila Ki Jawani with daughter Indi

ಸಿಡ್ನಿ, ಏಪ್ರಿಲ್ 18: ಕೊರೊನಾವೈರಸ್‌ ಕಾರಣದಿಂದ ನಿಷೇಧ ಹೇರಲ್ಪಟ್ಟಿರುವುದರಿಂದ ಬರೀ ಭಾರತದ ಕ್ರಿಕೆಟರ್ಸ್ ಅಷ್ಟೇ ಅಲ್ಲ, ವಿದೇಶಿಗರೂ ಬಿಡುವಿನ ವೇಳೆ ಕಳೆಯಲು ವಿಭಿನ್ನ ದಾರಿ ಹುಡುಕುತ್ತಿದ್ದಾರೆ. ಭಾರತದ ಕ್ರಿಕೆಟಿಗರು ಮತ್ತು ಭಾರತೀಯರ ಬಗ್ಗೆ ಅಭಿಮಾನ ಹೊಂದಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಬಾರಿ ಡ್ಯಾನ್ಸ್ ವೀಡಿಯೋ ಮೂಲಕ ಗಮನ ಸೆಳೆದಿದ್ದಾರೆ.

ನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಡೇವಿಡ್ ವಾರ್ನರ್, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ವಾರ್ನರ್ ಮತ್ತು ಅವರ ಪುತ್ರಿ ಇಂಡಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ.

ಐಪಿಎಲ್‌ನಲ್ಲಿ ಬ್ರೆಂಡನ್‌ ಮೆಕಲಮ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಇದೇ ದಿನ!ಐಪಿಎಲ್‌ನಲ್ಲಿ ಬ್ರೆಂಡನ್‌ ಮೆಕಲಮ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಇದೇ ದಿನ!

ವಾರ್ನರ್ ತನ್ನ ಪುಟಾಣಿ ಪುತ್ರಿಯೊಂದಿಗೆ ಡ್ಯಾನ್ಸ್ ಮಾಡಿದ್ದು ಭಾರತೀಯರನ್ನು ಹೆಚ್ಚು ಸೆಳೆದಿದ್ದು ಯಾಕೆಂದರೆ ಆ ಡ್ಯಾನ್ಸ್‌ಗೆ ಬಳಸಿಕೊಂಡ ಮ್ಯೂಸಿಕ್ ಬಾಲಿವುಡ್‌ನದ್ದು. ಕತ್ರೀನ ಕೈಫ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 'ತೀಸ್‌ ಮಾರ್‌ ಖಾನ್‌' ಚಿತ್ರದ 'ಶೀಲಾ ಕಿ ಜವಾನಿ' ಸಾಂಗಿಗೆ ವಾರ್ನರ್ ಮತ್ತವರ ಪುತ್ರಿ ಕುಣಿದಿದ್ದಾರೆ.

ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!

'ನಿಮಗಾಗಿ ಹೀಗೊಂದು ನೃತ್ಯ ಮಾಡಲು ಇಂಡಿ ಕೇಳಿಕೊಂಡಳು. ಯಾರಾದರೂ ನನಗೆ ಸಹಾಯ ಮಾಡಿ' ಅಂತ ಡೇವಿಡ್ ವಾರ್ನರ್ ತನ್ನ ಇನ್‌ಸ್ಟಾಗ್ರಾಮ್‌ ವೀಡಿಯೋದ ಜೊತೆ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಭಾರತೀಯರಿಂದ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.

Story first published: Saturday, April 18, 2020, 16:18 [IST]
Other articles published on Apr 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X