ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಅನುಮಾನ ಎಂದ ಆಸಿಸ್ ಕೋಚ್

David Warner doubtful for 1st Test vs India says Australia coach

ಟೀಮ್ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಫೀಲ್ಡಿಂಗ್ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯಗೊಂಡಿದ್ದರು. ಹೀಗಾಗಿ ಸೀಮಿತ ಓವರ್‌ಗಳ ಸರಣಿಯಿಂದ ಅವರು ಹೊರಬಿದ್ದಿದ್ದಾರೆ ಎಂಬು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿತ್ತು. ಆದರೆ ಈಗ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟೀನ್ ಲ್ಯಾಂಗರ್ ಡೇವಿಡ್ ವಾರ್ನರ್ ಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಡೇವಡಿ್ ವಾರ್ನರ್ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ. ಆತ ಅಸಾಧಾರಣ ನೋವನ್ನು ಅನುಭವಿಸುತ್ತಿದ್ದಾನೆ ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

"ಅದು ಅಸಾಧಾರಣವಾದ ನೋವಿನಿಂದ ಕೂಡಿದೆ. ಬಂದೂಕಿನಿಂದ ಶೂಟ್ ಮಾಡಿದ ನೋವಿನಂತೆ ಅದು ಭಾಸವಾಗುತ್ತಿದೆ. ಚೇಂಚ್‌ರೂಮ್‌ಗೆ ಕರೆದುಕೊಂಡ ಬಂದರ ಆತ ಅತ್ಯಂತ ನೋವಿನಿಂದ ನರಳುತ್ತಿದ್ದರು. ಈಗ ನಾವು ಕ್ಯಾನ್‌ಬೆರಾಗೆ ಬಂದಿಳಿದಿದ್ದೇವೆ. ಮುಂದಿನ ಐದಾರ ದಿನಗಳಲ್ಲಿ ಮತ್ತೆ ಸಿಡ್ನಿಗೆ ತೆರಳಲಿದ್ದು ಆತನನ್ನು ಕಾಣುತ್ತೇವೆ" ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾರ್ಧಯತೆಯಿದೆ ಎಂದು ಜಸ್ಟೀನ್ ಲ್ಯಾಂಗರ್ ಹೇಳಿದರು. ಇದು ಆರಂಭಿಕ ಆಟಗಾರನಾಗಿ ಜೋ ಬರ್ನ್ಸ್ ಹಾಗೂ ವಿಲ್ ಪುಕೋವ್ಸ್ಕಿ ಮಧ್ಯೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಒತ್ತಡವನ್ನೂ ಸ್ವಲಪ್ ಮಟ್ಟಿಗೆ ಕಡಿಮೆ ಮಾಡಲಿದೆ ಎಂದು ಹೇಳಿದರು.

2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ

ಡೇವಡಿ್ ವಾರ್ನರ್ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಅರ್ಧ ಶತಕವನ್ನು ಬಾರಿಸಿದ್ದರು. ಈ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಒಂದು ಏಕದಿನ ಪಂದ್ಯದ ಸಹಿತ ಟಿ20 ಸರಣಿಯಿಂದ ವಾರ್ನರ್ ಹೊರಗುಳಿದಿದ್ದಾರೆ. ಅಡಿಲೇಡ್‌ನಲ್ಲಿ ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಅಹರ್ನಿಶಿಯಾಗಿ ನಡೆಯಲಿದ್ದು ಈ ಟೆಸ್ಟ್‌ನಲ್ಲೂ ವಾರ್ನರ್ ಪಾಲ್ಗೊಳ್ಳುವುದು ಅನುಮಾನವಾಗಿದೆ.

Story first published: Tuesday, December 1, 2020, 12:54 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X