ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವು

David Warner ends his Sunrisers tenure as Hyderabad look to give chance to new faces in IPL

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವೀ ವಿದೇಶಿ ಆಟಗಾರರ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅಗ್ರ ಸ್ಥಾನದಲ್ಲಿದ್ದಾರೆ. ಆಟಗಾರನಾಗಿ ನಾಯಕನಾಗಿ ಅತ್ಯಂತ ಯಶಸ್ಸನ್ನು ತಮ್ಮ ತಂಡಕ್ಕೆ ನೀಡಿದ್ದಾರೆ ಡೇವಿಡ್ ವಾರ್ನರ್. ಒಂದು ಬಾರಿ ಚಾಂಪಿಯನ್ ಸ್ಥಾನಕ್ಕೂ ಏರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿಯ ಐಪಿಎಲ್ ಡೇವಿಡ್ ವಾರ್ನರ್ ಹಾಗೂ ಸನ್‌ರೈಸರ್ಸ್ ಪಾಲಿಗೆ ಅತ್ಯಂತ ಕೆಟ್ಟ ಆವೃತ್ತಿಯೆನಿಸಿದೆ. ಸ್ವತಃ ಡೇವಿಡ್ ವಾರ್ನರ್ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದು ಮೊದಲ ಚರಣದ ಪಂದ್ಯಗಳ ಸಂದರ್ಭದಲ್ಲಿಯೇ ಹೈದರಾಬಾದ್ ಫ್ರಾಂಚೈಸಿ ವಾರ್ನರ್‌ರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಳಪೆ ಪ್ರದರ್ಶನ ಯುಎಇ ಚರಣದಲ್ಲಿಯೂ ಮುಂದುವರಿದಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಪ್ರದದರ್ಶನ ನೀಡಿ ಸೋಲು ಕಂಡಿತ್ತು, ಈ ಎರಡು ಪಂದ್ಯದಲ್ಲಿಯೂ ಡೇವಿಡ್ ವಾರ್ನರ್ ವಿಫಲವಾಗಿದ್ದರು. ಹೀಗಾಗಿ ಮೂರನೇ ಪಂದ್ಯದ ಆಡುವ ಬಳಗದಿಂದ ಅವರನ್ನು ಹೊರಗಿಡಲಾಗಿದೆ.

ಐಪಿಎಲ್‌ನಲ್ಲಿ ಇಂದು ಡಬಲ್ ಹೆಡ್ಡರ್: ಕೊಲ್ಕತ್ತಾಗೆ ಡೆಲ್ಲಿ ಸವಾಲು, ಮುಂಬೈ ವಿರುದ್ಧ ಪಂಜಾಬ್ ಸೆಣೆಸಾಟಐಪಿಎಲ್‌ನಲ್ಲಿ ಇಂದು ಡಬಲ್ ಹೆಡ್ಡರ್: ಕೊಲ್ಕತ್ತಾಗೆ ಡೆಲ್ಲಿ ಸವಾಲು, ಮುಂಬೈ ವಿರುದ್ಧ ಪಂಜಾಬ್ ಸೆಣೆಸಾಟ

ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಸನ್‌ರೈಸರ್ಸ್ ತಂಡದ ಪರವಾಗಿ ಡೇವಿಡ್ ವಾರ್ನರ್ ಕಣಕ್ಕಿಳಿಯುವುದು ಅನುಮಾನ ಎಂಬುದಾಗಿ ಅಭಿಮಾನಿಗಳು ಈಗ ವಿಶ್ಲೇಷಣೆ ಮಾಡುತ್ತಿದ್ದಾರೆ.

ಯುವ ಆಟಗಾರರಿಗೆ ಮನ್ನಣೆ

ಯುವ ಆಟಗಾರರಿಗೆ ಮನ್ನಣೆ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ತಂಡದ ಕೋಚ್ ಟ್ರೇವರ್ ಬೇಲಿಸ್ ಮ್ಯಾನೇಜ್‌ಮೆಂಟ್ ಯುವ ಆಟಗಾರರಿಗೆ ಅವಕಾಶವನ್ನು ನೀಡಲು ಮುಂದಾಗಿದೆ ಎಂದಿದ್ದಾರೆ. ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಸನ್‌ರೈಸರ್ಸ್ ತಂಡದ ಪರವಾಗಿ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಆ ಆಟಗಾರರ ಸಾಮರ್ಥ್ಯ ಪರೀಕ್ಷೆಗೆ ತಂಡ ಮುಂದಾಗಿದೆ. "ನಾವು ಇನ್ನು ಮುಂದಿನ ಹಂತಕ್ಕೇರಲು ಸಾಧ್ಯವಿಲ್ಲ. ಹಾಗಾಗಿ ಒಂದು ನಿರ್ಧಾರವನ್ನು ನಾವು ಮಾಡಿದ್ದು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಮುಂದಾಗಿದ್ದೇವೆ. ಯುವ ಆಟಗಾರರು ಪಂದ್ಯಗಳ ಅನುಭವವನ್ನು ಮಾತ್ರವಲ್ಲ ಮೈದಾನದ ಅನುಭವಗಳನ್ನು ಕೂಡ ಪಡೆಯಬೇಕೆಂದು ನಾವು ಈ ಸಂದರ್ಭದಲ್ಲಿ ನಿರ್ಧರಿಸಿದ್ದೇವೆ" ಎಂದಿದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್.

ಮುಂದಿನ ಪಂದ್ಯಗಳಲ್ಲಿ ವಾರ್ನರ್ ಕಣಕ್ಕಿಳಿಯುವುದು ಅನುಮಾನ

ಮುಂದಿನ ಪಂದ್ಯಗಳಲ್ಲಿ ವಾರ್ನರ್ ಕಣಕ್ಕಿಳಿಯುವುದು ಅನುಮಾನ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಕೋಚ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಈ ಮಾತುಗಳಿಂದಾಗಿ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಯುವ ಆಟಗಾರರನ್ನು ಕಣಕ್ಕಿಳಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧಧ ಪಂದ್ಯದಲ್ಲಿ ವಾರ್ನರ್ ಸ್ಥಾನದಲ್ಲಿ ಜೇಸನ್ ರಾಯ್ ಕಣಕ್ಕಿಳಿದಿದ್ದು ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಹೀಗಾಗಿ ಮುಂದಿನ ವಾರ್ನರ್ ಸದ್ಯದ ಮಟ್ಟಿಗೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ.

ಈ ಸ್ಟಾರ್ ಆಟಗಾರನ ಭವಿಷ್ಯದ ಜೊತೆ ವಿರಾಟ್ ಚೆಲ್ಲಾಟವಾಡ್ತಿರೋದು ಯಾಕೆ? | Oneindia Kannada
ಮುಂದಿನ ವರ್ಷ ನಡೆಯಲಿದೆ ಮೆಗಾ ಆಕ್ಷನ್

ಮುಂದಿನ ವರ್ಷ ನಡೆಯಲಿದೆ ಮೆಗಾ ಆಕ್ಷನ್

ಇನ್ನು ಈ ಬಾರಿಯ ಐಪಿಎಲ್ ಅಂತ್ಯದ ಬಳಿಕ ಮೆಗಾ ಆಕ್ಷನ್ ನಡೆಯಲಿದೆ. ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ತೊರೆಯುವುದು ಖಚಿತ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ವರದಿಗಳು ಲಭ್ಯವಾಗುತ್ತಿದೆ. ಹಲವು ಆವೃತ್ತಿಗಳಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿದ್ದರೂ ಫ್ರಾಂಚೈಸಿ ಈ ಆವೃತ್ತಿಯಲ್ಲಿ ನಡೆಸಿಕೊಂಡ ರೀತಿಯಿಂದಾಗಿ ಡೇವಿಡ್ ವಾರ್ನರ್‌ ಬೇಸರವಾಗಿದ್ದಾರೆ ಎನ್ನಲಾಗಿದೆ. ತಂಡಕ್ಕೆ ಯುವ ಆಟಗಾರರಿಗೆ ಅದ್ಭುತ ಬೆಂಬಲವನ್ನು ನೀಡುತ್ತಿದ್ದರೂ ಮುಂದಿನ ಆವೃತ್ತಿಯಲ್ಲಿ ವಾರ್ನರ್ ಹೈದರಾಬಾದ್ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆಯಿದೆ.

Story first published: Tuesday, September 28, 2021, 12:18 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X