ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ವಿರಾಟ್ ಕೊಹ್ಲಿ ದಾಖಲೆ ಸರಿ ದೂಗಿಸಿದ ಡೇವಿಡ್ ವಾರ್ನರ್

David Warner equals Virat Kohli in elite list after fifty against Kolkata Knight Riders

ಹೈದರಾಬಾದ್, ಏಪ್ರಿಲ್ 22: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅರ್ಧ ಶತಕ ಬಾರಿಸುವುದರೊಂದಿಗೆ ಎಸ್‌ಆರ್‌ಎಚ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ.

'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'

38 ಎಸೆತಗಳಲ್ಲಿ ವಾರ್ನರ್ 67 ರನ್ ಕಲೆ ಹಾಕಿದರು. ಮತ್ತೊಬ್ಬ ಆಟಗಾರ ಜಾನಿ ಬೇರ್ಸ್ಟೊವ್ ಕೂಡ 43 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದ್ದರಿಂದ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.

ಐಪಿಎಲ್: ಆರ್‌ ಅಶ್ವಿನ್‌ಗೆ ವ್ಯಂಗ್ಯವಾಡಿದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ಐಪಿಎಲ್: ಆರ್‌ ಅಶ್ವಿನ್‌ಗೆ ವ್ಯಂಗ್ಯವಾಡಿದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್

ಐಪಿಎಲ್ ಸೀಸನ್‌ನಲ್ಲಿ ಡೇವಿಡ್ ವಾರ್ನರ್ ಮತ್ತು ಕೊಹ್ಲಿಯ ಸಾಧನೆಯ ಕೆಲ ಅಂಕಿ ಅಂಶಗಳು ಇಲ್ಲಿವೆ.

ಐದು ಸಾರಿ 500+ ರನ್

ಐದು ಸಾರಿ 500+ ರನ್

ಪಂದ್ಯದಲ್ಲಿ 67 ರನ್ ಸೇರಿದ್ದರಿಂದ 2019ರ ಸೀಸನ್‌ನಲ್ಲಿ ವಾರ್ನರ್ ಒಟ್ಟು 500 ರನ್ ಪೂರೈಸಿಕೊಂಡಿದ್ದಾರೆ. ಇಲ್ಲಿಗೆ ಒಟ್ಟಿಗೆ 5 ಐಪಿಎಲ್‌ ಸೀಸನ್‌ಗಳಲ್ಲಿ ವಾರ್ನರ್ 500+ ರನ್ ಬಾರಿಸಿದಂತಾಗಿದೆ. ಹೀಗಾಗಿ ಇದೇ ಸಾಧನೆ ಹೊಂದಿರುವ ಕೊಹ್ಲಿ ಸಾಲಿನಲ್ಲಿ ವಾರ್ನರ್ ಕೂಡ ಸೇರಿದ್ದಾರೆ.

ಕೊಹ್ಲಿ-ವಾರ್ನರ್ ಮುಂದು

ಕೊಹ್ಲಿ-ವಾರ್ನರ್ ಮುಂದು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 2011, 2013, 2015, 2016 ಮತ್ತು 2018ರಲ್ಲಿ 500+ ರನ್‌ಗಳನ್ನು ಗಳಿಸಿದ್ದರು. ಐಪಿಎಲ್‌ನಲ್ಲಿ ಐದು ಸಾರಿ 500+ ರನ್ ಗಳಿಸಿದವರ ಸಾಲಿನಲ್ಲಿ ಕೊಹ್ಲಿ ಮತ್ತು ವಾರ್ನರ್ ಸದ್ಯ ಮುಂದಿದ್ದಾರೆ.

ದ್ವಿತೀಯ ಸ್ಥಾನದಲ್ಲಿರುವ ಪ್ರಮುಖ ಆಟಗಾರರು

ದ್ವಿತೀಯ ಸ್ಥಾನದಲ್ಲಿರುವ ಪ್ರಮುಖ ಆಟಗಾರರು

ಐಪಿಎಲ್ ಇತಿಹಾಸದಲ್ಲಿ ಐದು ಸಾರಿ 500+ ರನ್ ಗಳಿಸಿ ದಾಖಲೆ ಸೃಷ್ಟಿಸಿರುವ ಕೊಹ್ಲಿ ಮತ್ತು ವಾರ್ನರ್ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಕ್ರಿಸ್‌ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ ಇದ್ದಾರೆ. ಇವರೆಲ್ಲರ ಹೆಸರಿನಲ್ಲಿ ತಲಾ 3 ಸಾರಿ 500+ ರನ್ ಗಳಿಸಿದ ದಾಖಲೆಯಿದೆ.

ಈ ಸೀಸನ್‌ನಲ್ಲಿ ಅತ್ಯಧಿಕ ರನ್

ಈ ಸೀಸನ್‌ನಲ್ಲಿ ಅತ್ಯಧಿಕ ರನ್

ಚೆಂಡು ವಿರೂಪ ಕ್ರಕರಣದಲ್ಲಿ ಒಂದು ವರ್ಷದ ನಿಷೇಧ ಅನುಭವಿಸಿದ ವಾರ್ನರ್, ಸ್ಟೀವ್ ಸ್ಮಿತ್ ಈಗ ಐಪಿಎಲ್‌ಗೆ ಹಿಂದಿರುಗಿದ್ದಾರೆ. ಕಳೆದ ವರ್ಷ ನಿಷೇಧಕ್ಕೀಡಾಗಿದ್ದರಿಂದ ಇಬ್ಬರೂ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಇವರಲ್ಲಿ ವಾರ್ನರ್ ಈ ಸೀಸನ್‌ನಲ್ಲಿ ಈಗಾಗಲೇ ಒಟ್ಟು 517 ರನ್‌ನೊಂದಿಗೆ ಅತ್ಯಧಿಕ ರನ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Story first published: Monday, April 22, 2019, 10:43 [IST]
Other articles published on Apr 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X