ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿಗೆ ಮುನ್ನ ಭಾರತದಲ್ಲಿ ಸಾಧಿಸಬೇಕಿರುವ ಗುರಿಯನ್ನು ಬಹಿರಂಗಪಡಿಸಿದ ಡೇವಿಡ್ ವಾರ್ನರ್

David Warner eyes on win test series against India in India before quitting Test cricket

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಉತ್ತಮವಾ ಫಾರ್ಮ್‌ನಲ್ಲಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ಪಾರ್ಮ್‌ಗೆ ಮರಳಿ ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಅವರು ತಮ್ಮದಾಗಿಸಿಕೊಂಡಿದ್ದರು. ಈಗ ಪ್ರತಿಷ್ಠಿತ ಆಶಸ್ ಸರಣಿಯಲ್ಲಿಯೂ ಮಿಂಚುಹರಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿಯನ್ನು 12 ದಿನಗಳಲ್ಲಿಯೇ ವಶಕ್ಕೆ ಪಡೆದುಕೊಂಡಿರುವ ಆಸ್ಟ್ರೇಲಿಯಾ ಈಗ 5-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಈ ಸಂದರ್ಭದಲ್ಲಿ 35ರ ಹರೆಯದ ಆಸಿಸ್‌ನ ಪ್ರಮುಖ ಆಟಗಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಮುನ್ನ ಸಾಧಿಸಬೇಕಿರುವ ಕೆಲ ಪ್ರಮುಖ ಗುರಿಯನ್ನು ಹೇಳಿದ್ದಾರೆ.

ಧೋನಿ ದಾಖಲೆ ಮುರಿದ ರಿಷಭ್ ಪಂತ್: ವೇಗವಾಗಿ 100 ವಿಕೆಟ್ ಬಲಿ ಪಡೆದ ಭಾರತದ ವಿಕೆಟ್ ಕೀಪರ್ಧೋನಿ ದಾಖಲೆ ಮುರಿದ ರಿಷಭ್ ಪಂತ್: ವೇಗವಾಗಿ 100 ವಿಕೆಟ್ ಬಲಿ ಪಡೆದ ಭಾರತದ ವಿಕೆಟ್ ಕೀಪರ್

ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿ

ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿ

ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಗುರಿಯನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಸರಣಿಯಲ್ಲಿ ಭಾರತವನ್ನು ಭಾರತದ ನೆಲದಲ್ಲಿ ನಾವು ಈವರೆಗೆ ಗೆದ್ದಿಲ್ಲ. ಅದು ಸಾಧ್ಯವಾದರೆ ಬಹಳ ಸಂತೋಷವಾಗಲಿದೆ ಎಂದು ಹೇಳಿದ್ದಾರೆ. ಇನ್ನು 2023ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆಶಸ್ ಸರಣಿಯನ್ನು ಕೂಡ ಗೆಲ್ಲುವ ಗುರಿ ಹೊಂದಿರುವುದಾಗಿ ಡೇವಿಡ್ ವಾರ್ನರ್ ಹೇಳಿಕೊಂಡಿದ್ದಾರೆ.

ಭಾರತ- ಇಂಗ್ಲೆಂಡ್‌ನಲ್ಲಿ ಕಳಪೆ ಸಾಧನೆ

ಭಾರತ- ಇಂಗ್ಲೆಂಡ್‌ನಲ್ಲಿ ಕಳಪೆ ಸಾಧನೆ

ಡೇವಿಡ್ ವಾರ್ನರ್ ಇಂಗ್ಲೆಂಡ್ ಹಾಗೂ ಭಾರತದಲ್ಲಿ ಆಡಿದ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿರುವುದು ಅವರ ಅಂಕಿಅಂಶಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಸರಣಿಯಲ್ಲಿ ಆಡಿರುವ ವಾರ್ನರ್ ಕೇವಲ 26ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಭಾರತದಲ್ಲಿ ಎರಡು ಟೆಸ್ಟ್ ಸರಣಿಯನ್ನು ಆಡಿರುವ ವಾರ್ನರ್ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರ ಸರಾಸರಿ ಕೇವಲ 24. ಎರಡು ದೇಶಗಳಲ್ಲಿಯೂ ಡೇವಿಡ್ ವಾರ್ನರ್ ಒಂದೇ ಒಂದು ಶತಕವನ್ನು ಬಾರಿಸಿಲ್ಲ.

2022ರಲ್ಲಿ ಭಾರತದಲ್ಲಿ ಟೆಸ್ಟ್ ಆಡಲಿದೆ ಆಸಿಸ್

2022ರಲ್ಲಿ ಭಾರತದಲ್ಲಿ ಟೆಸ್ಟ್ ಆಡಲಿದೆ ಆಸಿಸ್

ಈ ವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಮೊದಲಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಲ್ಲಿ ಭಾರತವನ್ನು ಮಣಿಸುವ ಗುರಿಯನ್ನು ಹೊಂದಿದ್ದಾರೆ ಡೇವಿಡ್ ವಾರ್ನರ್. 2020-21ರಲ್ಲಿ ಭಾರತ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಂಡಿದ್ದಾಗ ಭಾರತ ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲಲ್ಇಯೇ ಮಣಿಸಿ ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಆ ಸೇಡನ್ನು ತೀರಿಸಿಕೊಳ್ಳಲು ಆಸಿಸ್ ಪಡೆ ಹವಣಿಸುತ್ತಿದ್ದು ಈ ಸರಣಿ ಮೇಲೆ ಸಾಕಷ್ಟು ನಿರೀಕ್ಷೆಗಳಿದೆ.

ಮತ್ತಷ್ಟು ರನ್‌ಗಳಿಸುವ ಗುರಿ

ಮತ್ತಷ್ಟು ರನ್‌ಗಳಿಸುವ ಗುರಿ

ಇನ್ನು ಆಸ್ಟ್ರೇಲಿಯಾದ ಇಂಗ್ಲೆಂಡ್ ಪ್ರವಾಸ 2023ರಲ್ಲಿ ನಡೆಯಲಿದ್ದು ಆಗ ಆಸಿಸ್ ಆರಂಭಿಕ ಆಟಗಾರ ವಾರ್ನರ್ 37ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಆದರೆ ಈ ವಿಚಾರವಾಗಿ ಮಾತನಾಡಿದ ವಾರ್ನರ್ ವಯಸ್ಸು ಕೇವಲ ಸಂಖ್ಯೆ ಎಂದು ಹೇಳಿದ್ದಾರೆ. "ನನ್ನ ಪ್ರಕಾರ ಜೇಮ್ಸ್ ಆಂಡರ್ಸನ್ ಹಿರಿಯ ಆಟಗಾರರಿಗೆ ಬೆಂಚ್ ಮಾರ್ಕ್‌ಅನ್ನು ನಿಗದಿಪಡಿಸಿದ್ದಾರೆ. ನನ್ನ ವಿಚಾರವಾಗಿ ನನ್ನ ಸಾಮರ್ಥ್ಯಕ್ಕಿಂತ ಉತ್ತಮವಾದ ಪ್ರದರ್ಶನ ನೀಡಿ ರನ್‌ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ. ನನಗೆ ಅನಿಸುತ್ತದೆ ನಾನೀಗ ಉತ್ತಮವಾದ ಲಯದಲ್ಲಿದ್ದೇನೆ. ನಾನು ಈಗಾಗಲೇ ಹೇಳಿದಂತೆ ನಾನು ಹೆಚ್ಚಿನ ರನ್‌ಗಳಿಸುತ್ತಿಲ್ಲ ಎಂದರೆ ಫಾರ್ಮ್‌ನಲ್ಲಿಲ್ಲ ಎಂದು ಅರ್ಥವಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ನಾನು ಮತ್ತಷ್ಟು ರನ್‌ಗಳನ್ನು ಬೋರ್ಡ್‌ನಲ್ಲಿ ಸೇರಿಸಲು ಪ್ರಯತ್ನಿಸಲಿದ್ದೇನೆ" ಎಂದು ಡೇವಿಡ್ ವಾರ್ನರ್ ಮುಕ್ತವಾಗಿ ಹೇಳಿಕೊಂಡಿದ್ದಾರೆ.

Story first published: Wednesday, December 29, 2021, 17:17 [IST]
Other articles published on Dec 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X