ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಗಿಲ್‌ಕ್ರಿಸ್ಟ

David Warner is very close to playing in 3rd test: Adam Gilchrist

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸಾಕಷ್ಟು ರೋಚಕತೆಯನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾಗೆ ಶರಣಾದ ಬಳಿಕ ಎರಡನೇ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಮೂರನೇ ಪಂದ್ಯಕ್ಕೆ ಸಿದ್ದವಾಗುತ್ತಿರುವ ಆಸ್ಟ್ರೇಲಿಯಾ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ.

ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ 2ರಿಂದ 4 ಬದಲಾವಣೆಗಳು ನಡೆಯುವ ಸಾಧ್ಯತೆಯಿದೆ. ಗಾಯಗೊಂಡಿದ್ದ ಡೇವಿಡ್ ವಾರ್ನರ್ ಮೂರನೇ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇವರ ಜೊತೆಗೆ ವಿಲ್ ಪುಕೋವ್ಸ್ಕಿ ಹಾಗೂ ವೇಗಿ ಶಾನ್ ಅಬಾಟ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಫಾರ್ಮ್ ಕಳೆದುಕೊಂಡಿರುವ ಜೋ ಬರ್ನ್ಸ್ ತಂಡದಿಂದ ಹೊರಬೀಳುವ ಸಾರ್ಧಯತೆಯಿದೆ.

ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಮೂರನೇ ಟೆಸ್ಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಸೇರ್ಪಡೆಗೊಳ್ಳುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಡೇವಿಡ್ ವಾರ್ನರ್ ಕಣಕ್ಕಿಳಿಯುವ ಬಗ್ಗೆ ಗಿಲ್‌ಕ್ರಿಸ್ಟ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಫಾಕ್ಸ್ಸ ಸ್ಪೋರ್ಟ್ಸ್‌ ನ್ಯೂಸ್ ಜೊತೆಗೆ ಮಾತನಾಡಿದ ಗಿಲ್‌ಕ್ರಿಸ್ಟ್ "ಡೇವಿಡ್ ವಾರ್ನರ್ ಸಿಡ್ನಿ ಪಂದ್ಯದಲ್ಲಿ ಆಡಲು ಅತ್ಯಂತ ಸನಿಹದಲ್ಲಿದ್ದಾರೆ. ನಾನು ಕಂಡಂತೆ ಮೆಲ್ಬರ್ನ್ ಪಂದ್ಯದ ವೇಳೆಗಾಗಲೇ ಅವರು ಬಹುತೇಕ ಆಡುವ ಹಂತದಲ್ಲಿದ್ದರು. ಆದರೆ ಆತುರ ಪಡದೆ ವಿಶ್ರಾಂತಿ ನೀಡಲಾಗಿತ್ತು" ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್

"ಆಸ್ಟ್ರೇಲಿಯಾ ತಂಡ ಮೆಲ್ಬರ್ನ್‌ನಲ್ಲಿ ಎರಡು ದಿನಗಳ ತರಬೇತಿ ಶಿಬಿರವನ್ನು ಹೊಂದಿದೆ. ಅದಾದ ಬಳಿಕ ಆವರು ಸಿಡ್ನಿಗೆ ತೆರಳಲಿದ್ದಾರೆ. ನನ್ನ ಪ್ರಕಾರ ಎಲ್ಲವೂ ಸರಿಯಾಗಿದ್ದು ಅವರು ಕಣಕ್ಕಿಳಿಯಲಿದ್ದಾರೆ. ಈಗನ ಪ್ರಶ್ನೆಯೇನೆಂದರೆ ಅವರ(ವಾರ್ನರ್) ಜೊತೆಗೆ ಇನ್ನೊಂದು ತುದಿಯಲ್ಲಿರುವ ಆಟಗಾರ ಯಾರು ಎಂಬುದಾಗಿದೆ" ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

Story first published: Thursday, December 31, 2020, 23:52 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X