ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಸ್ವಾರ್ಥ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿಯನ್ನು ಹೊಗಳಿದ ಡೇವಿಡ್ ವಾರ್ನರ್

David Warner Lauds Bengaluru Student For ‘Selfless Work’ Amid Covid-19 Pandemic

ಕೊರೊನಾ ವೈರಸ್‌ ವಿಶ್ವಾದ್ಯಂತ ತನ್ನ ಪ್ರಭಾವವನ್ನು ಬೀರುತ್ತಿದೆ. ಹೀಗಾಗಿ ಎಲ್ಲಾ ದೇಶಗಳು ಈ ವೈರಸ್ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬೆಂಗಳೂರಿನ ವಿದ್ಯಾರ್ಥಿಯ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ್ದಾರೆ.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭಾರತದ ಶ್ರೇಯಸ್ ಶ್ರೇಷ್ಟ್ ಎಂಬ ವಿದ್ಯಾರ್ಥಿಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಮಾತನಾಡಿದ್ದಾರೆ. ಶ್ರೇಯಸ್ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಲತಃ ಬೆಂಗಳೂರಿನ ವಿದ್ಯಾರ್ಥಿ ಎಂದು ಸ್ವತಃ ವಾರ್ನರ್ ಶ್ರೇಯಸ್ ಕುರಿತಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಆರಂಭಿಕರಾಗಿ ರೋಹಿತ್-ಧವನ್ ಯಶಸ್ಸು: ಸಕ್ಸಸ್‌ಗೆ ಕಾರಣ ಬಹಿರಂಗಆರಂಭಿಕರಾಗಿ ರೋಹಿತ್-ಧವನ್ ಯಶಸ್ಸು: ಸಕ್ಸಸ್‌ಗೆ ಕಾರಣ ಬಹಿರಂಗ

ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಮಾತನಾಡಿದ ವಾರ್ನರ್ " ಶ್ರೇಯಸ್ ಬೆಂಗಳೂರಿನವರಾಗಿದ್ದಾರೆ. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ, ಇದು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆಹಾರವನ್ನು ತಲುಪಿಸುವ ಕಾರ್ಯಕ್ರಮದಲ್ಲಿ ಶ್ರೇಯಸ್ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ವಾರ್ನರ್ ವಿವರಿಸಿದ್ದಾರೆ.

"ಶ್ರೇಯಸ್ ಅದ್ಭುತ ಕೆಲವನ್ನು ಮಾಡುತ್ತಿದ್ದೀರಿ. ನಿಮ್ಮ ತಾಯಿ, ತಂದೆ ಜೊತೆಗೆ ಇಡೀ ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ನನಗೆ ಖಾತ್ರಿಯಿದೆ. ದೊಡ್ಡ ಕೆಲಸವನ್ನು ಮುಂದುವರಿಸಿ, ಏಕೆಂದರೆ ನಾವೆಲ್ಲರೂ ಜೊತೆಯಾಗಿರುತ್ತೇವೆ, " ಡೇವಿಡ್ ವಾರ್ನರ್ ಹೇಳಿದ್ದಾರೆ.

ನನ್ನ ಫುಟ್ಬಾಲ್ ಆಟ ಆನಂದಿಸುತ್ತಿದ್ದೇನೆ, ಸದ್ಯಕ್ಕೆ ದೂರ ಹೋಗಲ್ಲ: ಛೆಟ್ರಿನನ್ನ ಫುಟ್ಬಾಲ್ ಆಟ ಆನಂದಿಸುತ್ತಿದ್ದೇನೆ, ಸದ್ಯಕ್ಕೆ ದೂರ ಹೋಗಲ್ಲ: ಛೆಟ್ರಿ

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಕೂಡ ಭಾರತೀಯ ವಿದ್ಯಾರ್ಥಿಯೋರ್ವಳ ನಿಸ್ವಾರ್ಥ ಸೇಬೆಯನ್ನು ಕೊಂಡಾಡಿದ್ದರು. ಕೇರಳ ಮೂಲದ ವಿಧ್ಯಾರ್ಥಿನಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶರೊನ್ ವರ್ಗೀಸ್ ಎಂಬ ವಿದ್ಯಾರ್ಥಿನಿಯ ಸೇವೆಗೆ ಧನ್ಯವಾದಗಳನ್ನು ಸಲ್ಲಿಸಿದ್ದರು. ವೊಲ್ಲೊಂಗಾಂಗ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯಾಗಿರುವ ಶರೋನ್ ಕೊರೊನಾ ವೈರಸ್ ಸಂದರ್ಭದಲ್ಲಿ ತಮ್ಮ ಸೇವೆಯ ಮೂಲಕ ಗಮನಸೆಳೆದಿದ್ದರು.

Story first published: Friday, June 12, 2020, 15:04 [IST]
Other articles published on Jun 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X