ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್ ರೈಸರ್ಸ್ ಹೈದರಾಬಾದ್‌ನಿಂದ ಹೊರಬಿದ್ದ ನಂತರ ಮುಂದಿನ ನಡೆ ಕುರಿತು ಸುಳಿವು ನೀಡಿದ ವಾರ್ನರ್‌

David Warner likely to participate in IPL Mega Auction 2022

ಈ ಬಾರಿ ಭಾರತ ನೆಲದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟು, ಯಶಸ್ವಿಯಾಗಿ ಮುಕ್ತಾಯಗೊಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಈ ಟೂರ್ನಿ ನಡೆಯುವಾಗ ಆಟಗಾರರಿಗೆ ಕೊರೋನಾವೈರಸ್ ತಗುಲಿದ್ದರ ವಿವಾದಕ್ಕೆ ಕಾರಣವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಂತರದ ದಿನಗಳಲ್ಲಿ ಆಟಗಾರರು ಮತ್ತು ಫ್ರಾಂಚೈಸಿಗಳ ನಡುವೆ ಉಂಟಾದ ಮನಸ್ತಾಪಗಳಿಗೆ ಸಾಕ್ಷಿಯಾಗಿತ್ತು.

ಭಾರತ vs ಕಿವೀಸ್ ಟೆಸ್ಟ್ ನಂತರ WTC 21-23 ಅಂಕಪಟ್ಟಿ ಹೀಗಿದೆ; ಅಂಕ ಹೆಚ್ಚಿದ್ದರೂ ಭಾರತಕ್ಕಿಲ್ಲ ಅಗ್ರಸ್ಥಾನ!ಭಾರತ vs ಕಿವೀಸ್ ಟೆಸ್ಟ್ ನಂತರ WTC 21-23 ಅಂಕಪಟ್ಟಿ ಹೀಗಿದೆ; ಅಂಕ ಹೆಚ್ಚಿದ್ದರೂ ಭಾರತಕ್ಕಿಲ್ಲ ಅಗ್ರಸ್ಥಾನ!

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗ ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಪಂದ್ಯಗಳಲ್ಲಿ ಸೋಲುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಲ್ಪಟ್ಟಿತು. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕನಾಗಿ ಟೂರ್ನಿಯ ಮಧ್ಯದಲ್ಲಿ ನೇಮಿಸಿತು.

ಹೀಗೆ ಟೂರ್ನಿಯ ಮಧ್ಯಂತರದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಕಳೆದುಕೊಂಡ ಡೇವಿಡ್ ವಾರ್ನರ್ ಕೆಲ ಪಂದ್ಯಗಳಲ್ಲಿ ಆಟಗಾರನಾಗಿ ಕಣಕ್ಕಿಳಿದರು. ಆದರೆ ಈ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡಲಿಲ್ಲ ಎಂಬ ಕಾರಣದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರನ್ನು ತಂಡದ ಆಡುವ ಬಳಗದಿಂದ ನಂತರದ ಪಂದ್ಯಗಳಲ್ಲಿ ಕೈಬಿಟ್ಟಿತು. ಹೀಗೆ ತಂಡದ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡ ಡೇವಿಡ್ ವಾರ್ನರ್ ನಂತರದ ಪಂದ್ಯಗಳಲ್ಲಿ ತಮ್ಮ ತಂಡದ ಆಟಗಾರರ ಜತೆ ಪ್ರಯಾಣ ಮಾಡುವ ಅವಕಾಶವನ್ನೂ ಕಳೆದುಕೊಂಡರು.

ಡೇವಿಡ್ ವಾರ್ನರ್ ಅವರಿಗೆ ತಂಡದ ಇತರ ಆಟಗಾರರ ಜತೆ ಪ್ರಯಾಣ ಬೆಳೆಸುವುದಕ್ಕೆ ಬಿಡದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವಿರುದ್ಧ ಭಾರೀ ದೊಡ್ಡ ಮಟ್ಟದ ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಹೀಗೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮತ್ತು ಡೇವಿಡ್ ವಾರ್ನರ್ ನಡುವೆ ಟೂರ್ನಿಯುದ್ದಕ್ಕೂ ಮನಸ್ತಾಪವಿತ್ತು. ಅಂತಿಮವಾಗಿ ಇತ್ತೀಚೆಗಷ್ಟೇ ನಡೆದ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಡೇವಿಡ್ ವಾರ್ನರ್ ಅವರನ್ನು ಉಳಿಸಿಕೊಳ್ಳದೇ ತಂಡದಿಂದ ಹೊರ ಹಾಕುವುದರ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಮತ್ತು ಡೇವಿಡ್ ವಾರ್ನರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿತು.

ಸಾಲು ಸಾಲು ಕಳಪೆ ಪ್ರದರ್ಶನ; ರಹಾನೆ ಬದಲು ಭಾರತ ಟೆಸ್ಟ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆ!ಸಾಲು ಸಾಲು ಕಳಪೆ ಪ್ರದರ್ಶನ; ರಹಾನೆ ಬದಲು ಭಾರತ ಟೆಸ್ಟ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆ!

ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರನ್ನು ಕಡೆಗಣಿಸಿದರೆ, ಡೇವಿಡ್ ವಾರ್ನರ್ ಕೂಡ ಮುಂಬರುವ ಐಪಿಎಲ್ ಆವೃತ್ತಿಗಳಲ್ಲಿ ಮತ್ತೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿಲ್ಲ ಎಂಬುದನ್ನು ಈ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದರ ಕುರಿತಾಗಿ ಮಾತನಾಡಿರುವ ಡೇವಿಡ್ ವಾರ್ನರ್ ಐಪಿಎಲ್ ಮೆಗಾ ಆಕ್ಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ.

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

ಹೌದು, ಇನ್ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ಅಭಿಮಾನಿಯೊಬ್ಬ ಐಪಿಎಲ್ ಕುರಿತಾಗಿ ನಿಮ್ಮ ನಿಲುವೇನು ಎಂಬ ಕಾಮೆಂಟ್ ಹಾಕಿದ್ದಕ್ಕೆ ಉತ್ತರ ನೀಡಿರುವ ಡೇವಿಡ್ ವಾರ್ನರ್ 'ಮೆಗಾ ಆ್ಯಕ್ಷನ್ ಎಂದು ಊಹಿಸುತ್ತೇನೆ' ಎಂದು ಬರೆದುಕೊಳ್ಳುವುದರ ಮೂಲಕ ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಸುಳಿವು ನೀಡಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಫಾರ್ಮ್ ಹೊಂದಿರುವ ಡೇವಿಡ್ ವಾರ್ನರ್ ಈ ಬಾರಿಯ ಹರಾಜಿನಲ್ಲಿ ಯಾವ ತಂಡದ ಪಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Monday, December 6, 2021, 16:21 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X