ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್‌ಗೆ 'ICC ಪ್ಲೇಯರ್ ಆಫ್ ದಿ Month' ಪ್ರಶಸ್ತಿ

David warner

ಆಸ್ಟ್ರೇಲಿಯಾದ ಸ್ಫೋಟಕ ಓಪನಿಂಗ್ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ನವೆಂಬರ್ ತಿಂಗಳ 'ICC ಪ್ಲೇಯರ್ ಆಫ್ ದಿ Month' ಪ್ರಶಸ್ತಿಯನ್ನ ಗೆದ್ದುಕೊಂಡಿದ್ದಾರೆ. ಇನ್ನು ಮಹಿಳಾ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಹೇಲಿ ಮ್ಯಾಥ್ಯೂಸ್ ಕೂಡ ನವೆಂಬರ್ ತಿಂಗಳ ಪ್ರಶಸ್ತಿ ಗೆದ್ದಿದ್ದಾರೆ.

ಆಸ್ಟ್ರೇಲಿಯಾ ಇತ್ತೀಚೆಗಷ್ಟೇ ಮೊದಲ ಬಾರಿಗೆ ಗೆದ್ದ ICC ಪುರುಷರ ಟಿ20 ವಿಶ್ವಕಪ್‌ ಗೆಲ್ಲಲು ಡೇವಿಡ್ ವಾರ್ನರ್‌ನ ನಿರ್ಣಾಯಕ ಇನ್ನಿಂಗ್ಸ್‌ನಿಂದಾಗಿ , ಪಾಕಿಸ್ತಾನದ ಆರಂಭಿಕ ಆಟಗಾರ ಅಬಿದ್ ಅಲಿ ಮತ್ತು ನ್ಯೂಜಿಲೆಂಡ್ ಸೀಮ್ ಬೌಲರ್ ಟಿಮ್ ಸೌಥಿ ಅವರನ್ನು ಹಿಂದಿಕ್ಕಿ ಪುರುಷರ ಪ್ರಶಸ್ತಿಯನ್ನು ಪಡೆಯಲು ಸಹಾಯ ಮಾಡಿತು.

ಶೀಘ್ರದಲ್ಲೇ ಭಾರತ ತಂಡವು ICC ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ: ಸೌರವ್‌ ಗಂಗೂಲಿ ಭವಿಷ್ಯಶೀಘ್ರದಲ್ಲೇ ಭಾರತ ತಂಡವು ICC ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ: ಸೌರವ್‌ ಗಂಗೂಲಿ ಭವಿಷ್ಯ

ವಾರ್ನರ್ ಅವರು ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರದರ್ಶನದ ನಂತರ ಅವರ ಮೊದಲ ನಾಮನಿರ್ದೇಶನದಲ್ಲಿ ಪ್ರಶಸ್ತಿಯನ್ನು ಗೆದ್ದರು, ಇದರಲ್ಲಿ ಅವರು ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್‌ನಲ್ಲಿ 49 ರನ್, ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ 53 ರನ್ ಗಳಿಸಿದ್ರು.

ವೆಸ್ಟ್ ಇಂಡೀಸ್ ವಿರುದ್ಧದ ಹಿಂದಿನ ಸೂಪರ್ 12 ಪಂದ್ಯದಲ್ಲಿ 56 ಎಸೆತಗಳಲ್ಲಿ ಔಟಾಗದೆ 89 ರನ್ ಗಳಿಸಿದ್ದ ವಾರ್ನರ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ವಾರ್ನರ್ ಈ ಅವಧಿಯಲ್ಲಿ ನಾಲ್ಕು ಟಿ20 ಪಂದ್ಯಗಳಲ್ಲಿ 69.66 ರ ಸರಾಸರಿಯಲ್ಲಿ ಮತ್ತು 151.44 ಸ್ಟ್ರೈಕ್ ರೇಟ್‌ಗಳಲ್ಲಿ 209 ರನ್ ಗಳಿಸಿದ್ರು.

ಇನ್ನು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಪಡೆದ ಮ್ಯಾಥ್ಯೂಸ್ ಏಕದಿನ ಪಂದ್ಯಗಳಲ್ಲಿ ಅವರ ಆಲ್‌ರೌಂಡ್ ಪ್ರದರ್ಶನದಿಂದಾಗಿ ಈ ಪ್ರಶಸ್ತಿಗೆ ಭಾಜನರಾದ್ರು. ಪಾಕಿಸ್ತಾನದ ಎಡಗೈ ಸ್ಪಿನ್ನರ್‌ ಅನಮ್ ಅಮೀನ್ ಮತ್ತು ಬಾಂಗ್ಲಾದೇಶದ ನಹಿದಾ ಅಕ್ತರ್‌ ಹಿಂದಿಕ್ಕಿ ಮಹಿಳಾ ಪ್ರಶಸ್ತಿಯನ್ನು ಗೆದ್ದುಕೊಂಡರು.

Yuvraj Singh ತಂಗಿ ಮೇಲೆ ಕಣ್ಣಿಟ್ಟ ರೋಹಿತ್!! ಮುಂದೆ ಆಗಿದ್ದೇನು? | Oneindia Kannada

ಮ್ಯಾಥ್ಯೂಸ್ ಈ ವರ್ಷದಲ್ಲಿ ಎರಡನೇ ಬಾರಿಗೆ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಈ ಹಿಂದೆ ಜುಲೈನಲ್ಲಿ ವಿಂಡೀಸ್ ಕ್ಯಾಪ್ಟನ್ ಸ್ಟಾಫಾನಿ ಟೇಲರ್ ಅವರೊಂದಿಗೆ ನಾಮನಿರ್ದೇಶನಗೊಂಡಿದ್ದರು.

Story first published: Tuesday, December 14, 2021, 9:24 [IST]
Other articles published on Dec 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X