ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ-ಇಂಗ್ಲೆಂಡ್ ಸರಣಿ: ಖಾಲಿ ಮೈದಾನದಲ್ಲಿ ಆಯೋಜನೆ ಬಗ್ಗೆ ವಾರ್ನರ್ ಪ್ರತಿಕ್ರಿಯೆ

David Warner Opens Up About England Tour, Cricket In Empty Stands

ಕೊರೊನಾ ವೈರಸ್ ಕಾರಣದಿಂದಾಗಿ ಕ್ರೋಡಾ ಲೋಕ ತತ್ತರಿಸಿ ಹೋಗಿದೆ. ನಿಗದಿಯಾಗಿರವ ಅದೆಷ್ಟೋ ಕ್ರೀಡೆಗಳು ರದ್ದಾಗಿದೆ. ಆರ್ಥಿಕವಾಗಿ ಆಯೋಜಕರಿಗೆ ಇದು ಭಾರೀ ನಷ್ಟವಾದರೆ ಮತ್ತೊಂದೆಡೆ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೂ ಇದು ಬೇಸರದ ಸಂಗತಿಯಾಗಿದೆ. ಈ ಮಧ್ಯೆ ಖಾಲಿ ಮೈದಾನದಲ್ಲಿ ಸರಣಿ ಆಯೋಜನೆ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

ಜೂನ್ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗೆ ತೆರಳಿ ಅಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಮೂರು ಟಿ20 ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ನಿಗದಿ ಪಡಿಸಲಾಗಿತ್ತು.

ಸಚಿನ್‌ಗೆ ಬೌಲಿಂಗ್‌ ಮಾಡುವಾಗ ವಾರ್ನ್ ಪಡುತ್ತಿದ್ದ ಕಷ್ಟ ವಿವರಿಸಿದ ಬ್ರೇಟ್ ಲೀಸಚಿನ್‌ಗೆ ಬೌಲಿಂಗ್‌ ಮಾಡುವಾಗ ವಾರ್ನ್ ಪಡುತ್ತಿದ್ದ ಕಷ್ಟ ವಿವರಿಸಿದ ಬ್ರೇಟ್ ಲೀ

ಇಂಗ್ಲೆಂಡ್ ಪ್ರವಾಸ ನಡೆಯುವುದು ಕೂಡ ಅಸಂಭವ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸ ಏರ್ಪಡುವುದು ಸಾಧ್ಯವಿಲ್ಲ. ಸಧ್ಯದ ಸ್ಥಿತಿಯಲ್ಲಿ ಕ್ರೀಡೆಗಿಂತಲೂ ಹೆಚ್ಚಿನದನ್ನು ಜಗತ್ತು ಬಯಸುತ್ತಿದೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಸದ್ಯದ ಕೊರೊನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಇಂತಾ ಸಂದರ್ಭದಲ್ಲಿ ಕ್ರಿಕೆಟ್ ಆಡುವ ಬಗ್ಗೆ ಯೋಚಿಸುವುದು ಸರಿಯಲ್ಲ. ಮುಚ್ಚಿದ ಕ್ರೀಡಾಂಗಣದಲ್ಲಿ ಆಡುವ ನಿರ್ಧಾರವೂ ಕೂಡ ಸರಿಯಲ್ಲ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

ಇದಕ್ಕೂ ಮುನ್ನ ಜೂನ್ ತಿಂಗಳಲ್ಲಿ ಆಸ್ಟ್ರೇಲಿಯಾ ಬಾಂಗ್ಲಾದೇಶಕ್ಕೆ ಪ್ರವಾಸಕ್ಕೆ ತೆರಳ ಬೇಕಿತ್ತು. ಈ ಸರಣಿಯನ್ನು ಈಗಾಗಲೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಇಂಗ್ಲೆಂಡ್ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವನ್ನು ಇನ್ನೂ ತೆಗದುಕೊಳ್ಳಲಾಗಿಲ್ಲ.

Story first published: Wednesday, April 29, 2020, 10:31 [IST]
Other articles published on Apr 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X