ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುನೀತ್‌ ನೆನೆದು ವಿಶೇಷವಾಗಿ ಗೌರವ ಸಲ್ಲಿಸಿದ ಡೇವಿಡ್ ವಾರ್ನರ್; ವಿಡಿಯೋ ವೈರಲ್

David Warner posted a special video as respect to Kannada actor Puneeth Rajkumar

ಕಳೆದ ಅಕ್ಟೋಬರ್ 29ರ ಕರಾಳ ಶುಕ್ರವಾರವನ್ನು ಪ್ರತಿಯೊಬ್ಬ ಕನ್ನಡಿಗನೂ ಸಹ ಅಷ್ಟು ಸುಲಭವಾಗಿ ಮರೆಯುವ ಹಾಗೆ ಕಾಣುತ್ತಿಲ್ಲ. ಎಂದಿನಂತೆ ಆ ಶುಕ್ರವಾರದಂದು ಚಲನಚಿತ್ರಗಳ ಬಿಡುಗಡೆಯಲ್ಲಿ ನಿರತವಾಗಿದ್ದ ಕನ್ನಡ ಚಲನಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು ಕನ್ನಡದ ಖ್ಯಾತ ಪ್ರತಿಭಾವಂತ ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ.

ಭಾರತ vs ಕಿವೀಸ್ ಟೆಸ್ಟ್ ನಂತರ WTC 21-23 ಅಂಕಪಟ್ಟಿ ಹೀಗಿದೆ; ಅಂಕ ಹೆಚ್ಚಿದ್ದರೂ ಭಾರತಕ್ಕಿಲ್ಲ ಅಗ್ರಸ್ಥಾನ!ಭಾರತ vs ಕಿವೀಸ್ ಟೆಸ್ಟ್ ನಂತರ WTC 21-23 ಅಂಕಪಟ್ಟಿ ಹೀಗಿದೆ; ಅಂಕ ಹೆಚ್ಚಿದ್ದರೂ ಭಾರತಕ್ಕಿಲ್ಲ ಅಗ್ರಸ್ಥಾನ!

ಅಂದು ಎಂದಿನಂತೆ ತಮ್ಮ ದೈನಂದಿನ ವ್ಯಾಯಾಮ ಮುಗಿಸಿದ್ದ ಪುನೀತ್ ಅವರಿಗೆ ಕೊಂಚ ಸುಸ್ತಾದ ಅನುಭವವಾಗಿತ್ತು. ಹೀಗೆ ಸಮಯ ಕಳೆದಂತೆ ಸುಸ್ತಿನಿಂದ ಬೆವರಲು ಆರಂಭಿಸಿದ್ದ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಶೀಘ್ರವೇ ಕರೆದೊಯ್ಯಲು ಅವರ ಕುಟುಂಬ ವೈದ್ಯರು ಸೂಚಿಸಿದ್ದರು. ಅದರಂತೆ ಪುನೀತ್ ಅವರನ್ನು ಕೂಡಲೇ ವಿಕ್ರಂ ಆಸ್ಪತ್ರೆಗೆ ತಲುಪಿಸುವ ಯತ್ನ ಮಾಡಿದರೂ ಸಹ ಪುನೀತ್ ಮಾರ್ಗಮಧ್ಯದಲ್ಲಿಯೇ ಕೊನೆ ಉಸಿರೆಳೆದಿದ್ದರು. ತೀವ್ರ ಹೃದಯಸ್ತಂಭನಕ್ಕೆ ಒಳಗಾಗಿದ್ದ ಪುನೀತ್ ಕಾರಿನಲ್ಲಿಯೇ ನಿಧನ ಹೊಂದಿದ್ದರು. ಹೀಗೆ 46ನೇ ವಯಸ್ಸಿನಲ್ಲಿಯೇ ನಿಧನ ಹೊಂದಿದ ಪುನೀತ್ ಅವರಿಗೆ ದೇಶದ ಮೂಲೆ ಮೂಲೆಗಳಿಂದ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು ಮತ್ತು ಕ್ರಿಕೆಟಿಗರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕಿವೀಸ್ ವಿರುದ್ಧ 372 ರನ್‌ಗಳ ಭರ್ಜರಿ ಜಯ ಸಾಧಿಸಿ ಹಿಂದೆಂದೂ ಮಾಡಿರದ ಸಾಧನೆ ಮಾಡಿದ ಭಾರತಕಿವೀಸ್ ವಿರುದ್ಧ 372 ರನ್‌ಗಳ ಭರ್ಜರಿ ಜಯ ಸಾಧಿಸಿ ಹಿಂದೆಂದೂ ಮಾಡಿರದ ಸಾಧನೆ ಮಾಡಿದ ಭಾರತ

ಅದರಲ್ಲಿಯೂ ಪುನೀತ್ ರಾಜ್ ಕುಮಾರ್ ಸಾವಿನ ನಂತರ ಅವರು ಮಾಡಿದ್ದ ದಾನ ಮತ್ತು ಸಹಾಯಗಳು ಒಂದೊಂದೇ ಆಚೆ ಬರಲು ಶುರುವಾದವು. ತಾವು ಬದುಕಿದ್ದಾಗ ಕಷ್ಟ ಎಂದವರಿಗೆ ಮತ್ತು ಶಿಕ್ಷಣ ಪಡೆಯಲು ಕಷ್ಟಪಡುತ್ತಿದ್ದ ಮಕ್ಕಳಿಗೆ ಸ್ಪಂದಿಸಿ ಸಹಾಯ ಮಾಡುತ್ತಿದ್ದ ಪುನೀತ್ ರಾಜ್ ಕುಮಾರ್ ತಾವು ಮಾಡಿದ ಸಹಾಯವನ್ನು ಯಾರ ಬಳಿಯೂ ಹೇಳಬಾರದಂತೆ ಪ್ರಮಾಣವನ್ನು ಕೂಡ ಮಾಡಿಸಿಕೊಳ್ಳುತ್ತಿದ್ದರು. ಹೀಗೆ ಪುನೀತ್ ಅಗಲಿಕೆಯ ನಂತರ ಅವರು ಈ ಹಿಂದೆ ಮಾಡಿದ್ದ ಈ ಸಹಾಯಗಳೆಲ್ಲಾ ಬಹಿರಂಗವಾದ ನಂತರ ಪುನೀತ್ ಮೇಲಿನ ಗೌರವ ಎಲ್ಲರಲ್ಲಿಯೂ ದುಪ್ಪಟ್ಟಾಯಿತು. ಕೇವಲ ಕರ್ನಾಟಕ ಹಾಗೂ ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಜನರು ಪುನೀತ್ ಅವರ ಭಾವಚಿತ್ರಗಳನ್ನಿಟ್ಟು ಶ್ರದ್ಧಾಂಜಲಿ ಸಲ್ಲಿಸಲು ಆರಂಭಿಸಿದರು. ಇನ್ನು ಸುರೇಶ್ ರೈನಾ, ಕೆಎಲ್ ರಾಹುಲ್ ಸೇರಿದಂತೆ ಹಲವಾರು ಕ್ರಿಕೆಟಿಗರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಪುನೀತ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದರು.

ಇದೀಗ ಪುನೀತ್ ನಿಧನ ಹೊಂದಿ ತಿಂಗಳು ಕಳೆದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್‌ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ವಿಡಿಯೋ ಒಂದರ ಮೂಲಕ ವಿಶೇಷವಾಗಿ ಗೌರವವನ್ನು ಸೂಚಿಸಿದ್ದಾರೆ.

ಪ್ರಸಿದ್ಧ ಬೊಂಬೆ ಹೇಳುತೈತೆ ಹಾಡಿನ ದೃಶ್ಯವೊಂದನ್ನು ಪೋಸ್ಟ್ ಮಾಡಿದ ವಾರ್ನರ್

ಪ್ರಸಿದ್ಧ ಬೊಂಬೆ ಹೇಳುತೈತೆ ಹಾಡಿನ ದೃಶ್ಯವೊಂದನ್ನು ಪೋಸ್ಟ್ ಮಾಡಿದ ವಾರ್ನರ್

ಪುನೀತ್ ಅಭಿನಯದ ಜನಪ್ರಿಯ ಸಿನಿಮಾ ರಾಜಕುಮಾರ ಚಿತ್ರದ ಹಿಟ್ ಗೀತೆ ಬೊಂಬೆ ಹೇಳುತೈತೆ ಹಾಡಿಗೆ ಫೇಸ್ ಚೇಂಜರ್ ಅಪ್ಲಿಕೇಷನ್ ಬಳಸಿ ತಮ್ಮ ಮುಖವನ್ನು ಪುನೀತ್ ದೇಹಕ್ಕೆ ಅಳವಡಿಸುವುದರ ಮೂಲಕ ವಾರ್ನರ್ ವಿಡಿಯೋವೊಂದನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋ ಜತೆಗೆ ರೆಸ್ಪೆಕ್ಟ್ ಎಂಬ ಹ್ಯಾಷ್ ಟ್ಯಾಗ್ ಬಳಸಿದ ವಾರ್ನರ್

ವಿಡಿಯೋ ಜತೆಗೆ ರೆಸ್ಪೆಕ್ಟ್ ಎಂಬ ಹ್ಯಾಷ್ ಟ್ಯಾಗ್ ಬಳಸಿದ ವಾರ್ನರ್

ಹೀಗೆ ವಿಭಿನ್ನವಾದ ವಿಡಿಯೋ ಎಡಿಟ್ ಮಾಡುವ ಮೂಲಕ ಪುನೀತ್ ಅವರನ್ನು ಸ್ಮರಿಸಿರುವ ಡೇವಿಡ್ ವಾರ್ನರ್ ಆ ವಿಡಿಯೋ ಜತೆಗೆ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪುನೀತ್ ಅವರ ಸಮಾಜಮುಖಿ ಕೆಲಸಗಳಿಗೆ ಹಾಗೂ ದಾನ ಧರ್ಮಗಳಿಗೆ ಡೇವಿಡ್ ವಾರ್ನರ್ ಗೌರವವನ್ನು ಸಲ್ಲಿಸಿದ್ದಾರೆ.

ವಾರ್ನರ್ ಪೋಸ್ಟ್‌ಗೆ ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ ಕನ್ನಡಿಗರು

ವಾರ್ನರ್ ಪೋಸ್ಟ್‌ಗೆ ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ ಕನ್ನಡಿಗರು

ಡೇವಿಡ್ ವಾರ್ನರ್ ಪುನೀತ್ ರಾಜ್ ಕುಮಾರ್ ಕುರಿತಾಗಿ ಹಾಕಿರುವ ಈ ಪೋಸ್ಟ್‌ಗೆ 10 ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿದ್ದು, ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ ವಾರ್ನರ್ ಅವರಿಗೆ ಕೆಲವರು ಕೃತಜ್ಞತೆ ಸಲ್ಲಿಸಿದ್ದಾರೆ, ಇನ್ನೂ ಕೆಲ ನೆಟ್ಟಿಗರು ಮತ್ತೊಮ್ಮೆ ಪುನೀತ್ ಅವರನ್ನು ನೆನಪಿಸಿಕೊಂಡು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿ ಕಾಮೆಂಟ್ ಮಾಡಿದ್ದಾರೆ ಹಾಗೂ ಮತ್ತೊಂದಷ್ಟು ಕ್ರೀಡಾಭಿಮಾನಿಗಳು ಡೇವಿಡ್ ವಾರ್ನರ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.

Story first published: Monday, December 6, 2021, 17:48 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X