ಭಾರತದ ವಿರುದ್ಧದ ಸರಣಿಯಲ್ಲಿ ಆ ನಿರ್ಧಾರ ತೆಗೆದುಕೊಳ್ಳಬಾರದಿತ್ತು: ಡೇವಿಡ್ ವಾರ್ನರ್

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡಿ ಐತಿಹಾಸಿಕ ಗೆಲುವು ಸಾಧಿಸಿರುವುದು ಈಗ ಇತಿಹಾಸದ ಪುಟ ಸೇರಿದೆ. ಆದರೆ ಈ ಸರಣಿಯಲ್ಲಿ ಅಂತಿಮ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಡೇವಿಡ್ ವಾರ್ನರ್ ತಮ್ಮ ನಿರ್ಧಾರದ ಬಗ್ಗೆ ವಿಷಾದವನ್ನು ಹೊರ ಹಾಕಿದ್ದಾರೆ. ತಾನು ಆ ನಿರ್ಧಾರವನ್ನು ತೆಗೆದುಕೊಂಡಿದ್ದು ತಪ್ಪು ಎಂದು ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಡೇವಿಡ್ ವಾರ್ನರ್ ಗಾಯಗೊಂಡಿದ್ದರು. ಬಳಿಕ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದ ವಾರ್ನರ್ ಟೆಸ್ಟ್ ಕ್ರಿಕೆಟ್‌ನ ಮೊದಲ ಎರಡನೂ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೆ ಅಂತಿಮ ಎರಡು ಪಂದ್ಯಗಳಿಗೆ ಅವರು ತಂಡವನ್ನು ಕೂಡಿಕೊಂಡಿದ್ದರಾದರೂ ಅವರಿಂದ ಉತ್ತಮ ಪ್ರದರ್ಶನ ಹೊರ ಬಂದಿರಲಿಲ್ಲ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

ಆದರೆ ಈಗ ಡೇವಿಡ್ ವಾರ್ನರ್ ಸಂಪೂರ್ಣ ಚೇತರಿಕೆ ಕಾಣುವ ಮುನ್ನವೇ ನಾನು ತಂಡವನ್ನು ಸೇರಿಕೊಂಡು ಭಾರತದ ವಿರುದ್ಧ ಆಡಲು ಇಳಿದೆ. ಆದರೆ ಆ ನಿರ್ಧಾರವನ್ನು ನಾನು ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ.

ನಾನು ಅದನ್ನು ತಪ್ಪಿಸಿಕೊಳ್ಳಬಹುದಿತ್ತು

ನಾನು ಅದನ್ನು ತಪ್ಪಿಸಿಕೊಳ್ಳಬಹುದಿತ್ತು

ತೊಡೆಸಂದು ನೋವಿನಿಂದ ತಂಡದಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್ ಭಾರತದ ವಿರುದ್ಧ ಅಂತಿಮ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಅವಸರ ಮಾಡಿದೆ. ಆ ನಿರ್ಧಾರವನ್ನು ನಾನು ತೆಗೆದುಕೊಳ್ಳಬಾರದಾಗಿತ್ತು ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. "ನಾನು ಈ ನಿರ್ಧಾರವನ್ನು ತೆಗೆದುಕೊಳ್ಳದೆ ಇರಬಹುದಾಗಿತ್ತು. ಆದರೆ ಭಾರತದ ವಿರುದ್ಧ ಎದುರಿಸಿದ ಕಠಿಣ ಸವಾಲಿನಿಂದ ಸಹ ಆಟಗಾರರಿಗೆ ಸಹಾಯವಾಗಲು ನಾನು ಬೇಗನೆ ತಂಡಕ್ಕೆ ಮರಳಲು ನಿರ್ಧರಿಸಿದ್ದೆ" ಎಂದಿದ್ದಾರೆ.

ಆ ನಿರ್ಧಾರ ಬೇಡವಾಗಿತ್ತು

ಆ ನಿರ್ಧಾರ ಬೇಡವಾಗಿತ್ತು

ಆ ಪಂದ್ಯಗಳಲ್ಲಿ ಆಡುವ ನಿರ್ಧಾರವನ್ನು ನಾನು ತೆಗದುಕೊಂಡಿದ್ದೆ. ಆ ಸಂದರ್ಭದಲ್ಲಿ ನಾನು ತಂಡದಲ್ಲಿರಬೇಕು ಹಾಗೂ ಸಹ ಆಟಗಾರರಿಗೆ ಸಹಾಯವನ್ನು ಮಾಡಬೇಕು ಎನಿಸಿತ್ತು. ಅದರೆ ಈಗ ಹಿಂದಿರುಗಿ ನೋಡಿದರೆ ಆ ನಿರ್ಧಾರವನ್ನು ನಾನು ತೆಗೆದುಕೊಳ್ಳಬಾರದಾಗಿತ್ತು ಎನಿಸುತ್ತದೆ. ನಾನು ಗಾಯಗೊಂಡಿದ್ದರಿಂದ ಅದು ನನ್ನನ್ನು ಹಿಂದಕ್ಕೆ ತಳ್ಳಿತ್ತು" ಎಂದು ಹೇಳಿದ್ದಾರೆ ಡೇವಿಡ್ ವಾರ್ನರ್.

ತಂಡಕ್ಕೆ ಒಳಿತಾಗಲಿ ಎಂದುಕೊಂಡಿದ್ದೆ

ತಂಡಕ್ಕೆ ಒಳಿತಾಗಲಿ ಎಂದುಕೊಂಡಿದ್ದೆ

ನಾನು ನನ್ನ ಬಗ್ಗೆ ಯೋಚಿಸಿದ್ದರೆ ಬಹುಶಃ ನಾನು 'ಬೇಡ' ಎನ್ನುತ್ತಿದ್ದೆ. ಆದರೆ ತಂಡಕ್ಕೆ ಒಳಿತಾಗಲೆಂದು ನಾನು ಬಯಸಿದ್ದೆ. ನಾನು ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಬಹುದು ಎಂದು ಭಾವಿಸಿದ್ದೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆಡಲಿದ್ದಾರೆ ವಾರ್ನರ್

ಐಪಿಎಲ್‌ನಲ್ಲಿ ಆಡಲಿದ್ದಾರೆ ವಾರ್ನರ್

ಇನ್ನು ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಆದರೆ ಭಾರತದಲ್ಲಿ ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, March 3, 2021, 14:32 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X