ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್‌ರನ್ನ ಖರೀದಿಸಲಿದ್ಯಾ ಆರ್‌ಸಿಬಿ? ಬ್ರಾಡ್‌ ಹಾಗ್‌ ಭವಿಷ್ಯ ನಿಜವಾಗುತ್ತಾ?

David warner

ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್‌ ತಂಡ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಹಾಗೂ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ತಮ್ಮ ಮೇಲಿನ ಟೀಕೆಗಳಿಗೆ ಅದ್ಭುತ ಪರ್ಫಾಮೆನ್ಸ್ ಮೂಲಕ ಉತ್ತರ ನೀಡಿದ್ದಾರೆ. ಚುಟುಕು ಕ್ರಿಕೆಟ್ ವಿಶ್ವಕಪ್‌ ಫೈನಲ್‌ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕಾಂಗರೂಗಳು ಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಕಳೆದ ಐಪಿಎಲ್ ಸೀಸನ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದ ಡೇವಿಡ್‌ ವಾರ್ನರ್‌ರನ್ನು ಆಡುವ ಹನ್ನೊಂದರ ಬಳಗದಿಂದ ಸನ್‌ರೈಸರ್ಸ್ ಹೈದ್ರಾಬಾದ್ ಕೈ ಬಿಟ್ಟಿತ್ತು. ಡೇವಿಡ್ ವಾರ್ನರ್‌ ಸ್ವತಃ ಹೇಳುವಂತೆ ತನ್ನನ್ನು ಏಕೆ ನಾಯಕತ್ವದಿಂದ ಕೆಳಗಿಸಲಾಯಿತು ಎಂಬುದು ನಿಜವಾಗಿಯೂ ತಿಳಿದಿಲ್ಲ ಎಂದಿದ್ದರು. ಜೊತೆಗೆ ರನ್‌ಗಳಿಕೆಯು ನಿಧಾನಗತಿಯಾಗಿದೆ ಎಂಬ ಟೀಕೆಗಳು ವಾರ್ನರ್ ಬೆನ್ನತ್ತಿದ್ವು.

ಎಸ್‌ಆರ್‌ಎಚ್‌ ತಂಡವನ್ನ 2016ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿಸಿದ ಕೀರ್ತಿ ವಾರ್ನರ್‌ ಅವರದ್ದು, ಹೀಗಿರುವಾಗ ಆತನನ್ನೇ ಪ್ಲೇಯಿಂಗ್ 11ನಿಂದ ಹೊರಗಿಡಬಹುದು ಎಂದು ಯಾರೂ ಊಹಿಸಿರ್ಲಿಲ್ಲ. ಆದ್ರೆ ಕಳೆದ ಐಪಿಎಲ್‌ ಸೀಸನ್‌ನಲ್ಲಿ ಅದು ಕೂಡ ನಡೆದುಹೋಯ್ತು. ಡೇವಿಡ್‌ ವಾರ್ನರ್‌ನಲ್ಲಿ ಕೊನೆಯ ಕೆಲವು ಪಂದ್ಯಗಳಲ್ಲಿ ತಂಡದಿಂದಲೇ ಹೊರಗಿಡಲಾಯ್ತು.

ಹೀಗೆ ನೋವು, ಅಪಮಾನ, ಟೀಕೆಗಳನ್ನೇ ಮೆಟ್ಟಿಲಾಗಿಸಿಕೊಂಡ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ ಅದ್ಭುತ ಪರ್ಫಾಮೆನ್ಸ್ ನೀಡಿ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವಲ್ಲಿ ತಂಡಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ರು. ಇದಕ್ಕೆ ಸಾಕ್ಷಿಯೆಂಬಂತೆ ಡೇವಿಡ್‌ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದ್ರು.

ಆಸೀಸ್‌ ಪರ ಬಲಿಷ್ಠವಾಗಿ ಕಂಬ್ಯಾಕ್ ಮಾಡಿರುವ ಡೇವಿಡ್ ವಾರ್ನರ್‌ನನ್ನು ಎಸ್‌ಆರ್‌ಎಚ್ ಫ್ರಾಂಚೈಸಿ ಮತ್ತೆ ಯಾವುದೇ ಕಾರಣಕ್ಕೂ ರೀಟೇನು ಮಾಡಿಕೊಳ್ಳದ ಮನಸ್ಸನ್ನು ಹೊಂದಿದೆ. ಹೀಗಿರುವಾಗಿ ಡೇವಿಡ್ ವಾರ್ನರ್‌ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಖರೀದಿಸುತ್ತಾ ಎಂಬ ಚರ್ಚೆ ಶುರುವಾಗಿದೆ.

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್ ಪ್ರಕಾರ ಡೇವಿಡ್ ವಾರ್ನರ್ ಮುಂದಿನ ವರ್ಷ ಸನ್‌ರೈಸರ್ಸ್ ಹೈದರಾಬಾದ್‌ನ (SRH) ತಂಡದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆ ಬದಲಾಗುತ್ತಾರೆ ಎಂದು ನಂಬಿದ್ದಾರೆ. ಎಡಗೈ ಆರಂಭಿಕ ಆಟಗಾರನನ್ನು 2021 ರ ಐಪಿಎಲ್‌ನಲ್ಲಿ ಫ್ರಾಂಚೈಸಿಯಿಂದ ಹೊರಗಿಡಲಾಯಿತು ಮತ್ತು ಅವರನ್ನು ತಂಡವು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂದಾಜಿಸಿದ್ದಾರೆ.

ಸೀಸನ್‌ನಲ್ಲಿ ಕಳಪೆ ಆರಂಭ ಪಡೆದ ಬಳಿಕ ಡೇವಿಡ್ ವಾರ್ನರ್ ಬದಲಿಗೆ ನಾಯಕತ್ವದ ಜವಾಬ್ದಾರಿಯನ್ನು ಎಸ್‌ಆರ್‌ಎಚ್‌ ಫ್ರಾಂಚೈಸಿ ಕೇನ್ ವಿಲಿಯಮ್ಸನ್‌ಗೆ ನೀಡಿತು. ನಾಯಕತ್ವವನ್ನು ಕಳೆದುಕೊಂಡ ನಂತರ, ವಾರ್ನರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು, ತಂಡವು ಜೇಸನ್ ರಾಯ್ ಅವರಿಗೆ ಅವಕಾಶ ನೀಡಿತು. ಸಂಭಾವ್ಯ ನಾಯಕನ ಹುಡುಕಾಟದಲ್ಲಿರುವ ಆರ್‌ಸಿಬಿ ಮುಂಬರುವ ಹರಾಜಿನಲ್ಲಿ ವಾರ್ನರ್‌ರನ್ನು ಖರೀದಿಸದೆ ಎಂದು ಬ್ರಾಡ್‌ ಹಾಗ್ ಭವಿಷ್ಯ ನುಡಿದಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವಾಗ, ''ಅವರು ಆರ್‌ಸಿಬಿಯಲ್ಲಿ ಕೊನೆಗೊಂಡರೆ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಆ ರೀತಿಯ ವಿಕೆಟ್ ಅವರಿಗೆ ಸರಿಹೊಂದುತ್ತದೆ ಮತ್ತು ಅವರಿಗೆ(ಆರ್‌ಸಿಬಿ) ನಾಯಕನ ಅಗತ್ಯವಿದೆ. ಕೊಹ್ಲಿ ನಾಯಕತ್ವ ಸ್ಥಾನವನ್ನು ತ್ಯಜಿಸಿರುವುದರಿಂದ ಅವರ ನಾಯಕತ್ವದ ದಾಖಲೆಯಿಂದಾಗಿ ಆರ್‌ಸಿಬಿ ಅವರನ್ನು ಪಡೆಯಬಹುದು." ಎಂದು ಬ್ರಾಡ್‌ ಹಾಗ್ ತಿಳಿಸಿದ್ದಾರೆ.

ಇನ್ನು ಎಸ್‌ಆರ್‌ಎಚ್‌ ಫ್ರಾಂಚೈಸ್ ಮ್ಯಾನೇಜ್‌ಮೆಂಟ್ ಮತ್ತು ವಾರ್ನರ್ ನಡುವಿನ ಸಂಬಂಧವು ಕಳೆದ ವರ್ಷದ ಅವಧಿಯಲ್ಲಿ ಹದಗೆಟ್ಟಿರಬೇಕು ಎಂದು ಹಾಗ್ ಅಂದಾಜಿಸಿದ್ದಾರೆ. ಪರಿಣಾಮವಾಗಿ, ಅವರು ಇನ್ನು ಮುಂದೆ ಆರೆಂಜ್ ಆರ್ಮಿಯನ್ನು ಪ್ರತಿನಿಧಿಸುವ ವಾರ್ನರ್ ಆಗಿ ನೋಡಲ ಸಾಧ್ಯವಿಲ್ಲ. ವಾರ್ನರ್ ಅವರು 2016 ರಲ್ಲಿ SRH ಅನ್ನು ಚಾಂಪಿಯನ್ ಆಗಿ ಮಾಡಿದ್ದಲ್ಲದೆ, ತಂಡವನ್ನು ಪ್ರತಿನಿಧಿಸುವಾಗ ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದರು.

ICC T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಂ‌ ನಾಯಕ:ಭಾರತಕ್ಕೆ ಭಾರೀ ಮುಖಭಂಗ | Oneindia Kannada

ಡೇವಿಡ್ ವಾರ್ನರ್ ಈ ಬಾರಿಯ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ಗಳಲ್ಲಿ 48.16 ಬ್ಯಾಟಿಂಗ್ ಸರಾಸರಿಯಲ್ಲಿ 289 ರನ್ ಗಳಿಸಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡ್ರು.

Story first published: Monday, November 15, 2021, 17:38 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X