ಲಂಡನ್, ಆಗಸ್ಟ್ 20: ಕೊರೊನಾವೈರಸ್ ಭೀತಿ ಶುರುವಾದ ಬಳಿಕ ನಡೆಯಲಿರುವ ಮೊದಲ ಟಿ20ಐ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಕಾದಾಡಲಿವೆ. ಪಾಕ್ ವಿರುದ್ಧದ ಈ ಸರಣಿಗಾಗಿ 14 ಮಂದಿಯ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಡೇವಿಡ್ ವಿಲ್ಲೆ ಮತ್ತು ಡೇವಿಡ್ ಮಲನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್: ಮಂಕಡಿಂಗ್ ಮಾಡದಂತೆ ಆರ್ ಅಶ್ವಿನ್ಗೆ ರಿಕಿ ಪಾಂಟಿಂಗ್ ಎಚ್ಚರಿಕೆ
ಆಗಸ್ಟ್ 28ರಿಂದ ಇಂಗ್ಲೆಂಡ್ vs ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ. ಸರಣಿಗಾಗಿ ಪ್ರಕಟವಾಗಿರುವ ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್ ಸಾಮಾನ್ಯ ಆಟಗಾರರಾದ ಜೋ ರೂಟ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ಮಾರ್ಕ್ ವುಡ್, ಜೋಸ್ ಬಟ್ಲರ್ ಕಾಣಿಸಿಕೊಂಡಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ.
'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!
ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ಡೇವಿಡ್ ವಿಲ್ಲೆ ದೀರ್ಘ ಕಾಲದ ಬಳಿಕ ಮತ್ತೆ ಟಿ20ಐ ತಂಡಕ್ಕೆ ಮರಳಿದ್ದಾರೆ. ವಿಲ್ಲೆ ಕಡೇಯ ಅಂತಾರಾತಾಷ್ಟ್ರೀಯ ಟಿ20 ಆಡಿದ್ದು 2019ರ ಮೇನಲ್ಲಿ. ಡೇವಿಡ್ ಮಲನ್ ಕೂಡ ಈ ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಪಿಎಲ್ನಲ್ಲಿ ಆಡುವ ಐಪಿಎಲ್ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ
ಪಾಕ್ ವಿರುದ್ಧದ ಟಿ20ಐ ಸರಣಿಗೆ ಇಂಗ್ಲೆಂಡ್ ತಂಡ
ಇಯಾನ್ ಮೋರ್ಗಾನ್ (ಸಿ), ಮೊಯೀನ್ ಅಲಿ, ಜೊನಾಥನ್ ಬೈರ್ಸ್ಟೋವ್, ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರನ್, ಜೋ ಡೆನ್ಲಿ, ಲೆವಿಸ್ ಗ್ರೆಗೊರಿ, ಕ್ರಿಸ್ ಜೋರ್ಡಾನ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ.