ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಿಂದ ಗೆದ್ದು ಬೀಗಿದ ಇಂಗ್ಲೆಂಡ್

Dawid Malan, Jos Buttler Set Record Partnership as England Beat South Africa to Complete 3-0 Whitewash

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತವರಿನಲ್ಲೇ ಮುಖಭಂಗವನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲೂ ಸೋಲನ್ನು ಅನುಭವಿಸುವ ಮೂಲಕ ತನ್ನ ತವರಿನಲ್ಲೇ ನಡೆದ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಈಡಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಫಾಪ್ ಡು ಪ್ಲೆಸಿಸ್ ಹಾಗೂ ವಾನ್‌ ಡೆರ್ ಡಸೆನ್ ಅವರ ಶತಕದ ಜೊತೆಯಾಟದ ಕಾರಣದಿಂದ ಭರ್ಜರಿ 191 ರನ್‌ಗಳನ್ನು ದಾಖಲಿಸಿತು. ಡು ಪ್ಲೆಸಿಸ್ 52 ರನ್ ಬಾರಿಸಿದರೆ ಡಸೆನ್ 32 ಎಸೆತಗಳಲ್ಲಿ 74 ರನ್ ಬಾರಿಸಿ ಮಿಂಚಿದರು.

3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ

ದಕ್ಷಿಣ ಆಫ್ರಿಕಾ ತಂಡ ನೀಡಿದ ಈ ಬೃಹತ್ ಗುರಿಯನ್ನು ಇಂಗ್ಲೆಂಡ್ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಟಗಾರ ಜೇಸನ್ ರಾಯ್ ವಿಕೆಟ್ ಬೇಗನೆ ಕಳೆದುಕೊಂಡ ಇಂಗ್ಲೆಂಡ್ ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ನಾಯಕ ಜೋಸ್ ಬಟ್ಲರ್ ಹಾಗೂ ಡೇವಿಡ್ ಮಲನ್ ಅಜೇಯವಾಗಿಯೇ ಈ ಗುರಿಯನ್ನು ತಲುಪಿದರು.

ಈ ರನ್ ಬೆನ್ನಟ್ಟುವ ವೇಳೆ ಇಂಗ್ಲೆಂಡ್ ನಾಯಕ 46 ಎಸೆತಗಳಲ್ಲಿ 67 ರನ್ ಸಿಡಿಸಿದರೆ ಚುಟುಕು ಕ್ರಿಕೆಟ್‌ನ ನಂಬರ್ 1 ಆಟಗಾರ ಡೇವಿಡ್ ಮಲನ್ 47 ಎಸೆತಗಳಲ್ಲಿ ಭರ್ಜರಿ 99 ರನ್ ಗಳಿಸಿ ಅಜೇಯವಾಗುಳಿದರು. ಈ ಮೂಲಕ ಒಂದು ರನ್‌ನಿಂದ ಮಲನ್ ಶತಕವನ್ನು ತಪ್ಪಿಸಿಕೊಂಡಿದ್ದಾರೆ.

ಆಫ್ರಿಕಾ ನೀಡಿದ್ದ ಬೃಹತ್ ಗುರಿಯನ್ನು ಇಂಗ್ಲೆಂಡ್ 14 ಎಸೆತಗಳು ಉಳಿದಿರುವಂತೆಯೇ ತಲುಪಿದೆ. ಈ ಜೋಡಿ ಅಜೇಯ 167 ರನ್‌ಗಳ ಜೊತೆಯಾಟವನ್ನು ನೀಡಿತು. ಈ ಮೂಲಕ ಮಲನ್-ಬಟ್ಲರ್ ಜೋಡಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಜೊತೆಯಾಟವನ್ನಾಡಿದ ಇಂಗ್ಲೆಂಡ್ ಜೊಡಿ ಎನಿಸಿಕೊಂಡರು.

Story first published: Wednesday, December 2, 2020, 14:39 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X