ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಯೂ ಟರ್ನ್ ಬಳಿಕ, ಹೈದರಾಬಾದ್ ತಂಡಕ್ಕೆ ರಾಯುಡು ನಾಯಕ

Days after retirement U-turn, Ambati Rayudu named captain of Hyderabad

ಹೈದರಾಬಾದ್, ಸೆಪ್ಟೆಂಬರ್ 14: ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಮತ್ತೆ ನಿರ್ಧಾರ ಬದಲಿಸಿ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಹೇಳಿದ್ದ ಟೀಮ್ ಇಂಡಿಯಾದ ಅನುಭವಿ ಬ್ಯಾಟ್‌ಮನ್ ಅಂಬಾಟಿ ರಾಯುಡು ವಿಜಯ್ ಹಝಾರೆ ಟ್ರೋಫಿಗೆ ಹೈದರಾಬಾದ್ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 24ರಿಂದ ವಿಜಯ್ ಹಝಾರೆ ಟ್ರೋಫಿ ಆರಂಭವಾಗಲಿದೆ.

ಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20: ಸಂಭಾವ್ಯ ತಂಡಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20: ಸಂಭಾವ್ಯ ತಂಡ

ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಬಳಿಕ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು, ಮತ್ತೆ ನಿರ್ಧಾರ ಬದಲಿಸಿದ್ದರು. ಸದ್ಯ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿರುವ ರಾಯುಡುಗೆ ಭಾರತ ತಂಡವನ್ನು ಮತ್ತೆ ಪ್ರತಿನಿಧಿಸುವ ಆಸೆಯಿದೆ. ರಿಸರ್ವ್ಡ್‌ ಆಟಗಾರನಾಗಿದ್ದರೂ ವಿಶ್ವಕಪ್‌ನಲ್ಲಿ ತಂಡಕ್ಕೆ ಸೇರಿಸಿಕೊಳ್ಳದಿದ್ದರಿಂದ ಬೇಸರಗೊಂಡು ರಾಯುಡು ನಿವೃತ್ತಿ ಘೋಷಿಸಿದ್ದರು.

ಶಿಖರ್ ಧವನ್ ಪ್ರಶ್ನೆಗೆ ಹಲ್ಲು ಕಿಸಿದ ವಿರಾಟ್ ಕೊಹ್ಲಿ: ಗಮ್ಮತ್ತಿನ ವಿಡಿಯೋ!ಶಿಖರ್ ಧವನ್ ಪ್ರಶ್ನೆಗೆ ಹಲ್ಲು ಕಿಸಿದ ವಿರಾಟ್ ಕೊಹ್ಲಿ: ಗಮ್ಮತ್ತಿನ ವಿಡಿಯೋ!

ರಾಯುಡು ಅವರಿಗೆ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಯಾಕೆಂದರೆ ಅವರಿಗಿನ್ನೂ 33ರ ಹರೆಯ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ (ಎಚ್‌ಸಿಎ) ಮುಖ್ಯ ಆಯ್ಕೆದಾರ ನಿಯೋಲ್ ಡೇವಿಡ್ ಹೇಳಿದ್ದಾರೆ. ನಿವೃತ್ತಿ ನೀಡಿದ್ದ ರಾಯುಡು ನಿರ್ಧಾರ ಬದಲಿಸುವಲ್ಲಿ ಡೇವಿಡ್ ಮತ್ತು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಪ್ರಮುಖ ಪಾತ್ರ ವಹಿಸಿದ್ದರು.

ಹಾರ್ದಿಕ್ ಫಿಟ್ ಇದ್ದರೂ ಟೆಸ್ಟ್‌ ತಂಡದಲ್ಲಿ ಇಲ್ಲದ್ದಕ್ಕೆ ಕಾರಣ ಏನ್ ಗೊತ್ತಾ?!ಹಾರ್ದಿಕ್ ಫಿಟ್ ಇದ್ದರೂ ಟೆಸ್ಟ್‌ ತಂಡದಲ್ಲಿ ಇಲ್ಲದ್ದಕ್ಕೆ ಕಾರಣ ಏನ್ ಗೊತ್ತಾ?!

ವಿಜಯ್ ಹಝಾರೆ ಟ್ರೋಫಿಗೆ ಹೈದರಾಬಾದ್ ತಂಡ: ಅಂಬಾಟಿ ರಾಯುಡು (ನಾಯಕ) ಬಿ ಸಂದೀಪ್ (ಉಪನಾಯಕ), ಪಿ ಅಕ್ಷತ್ ರೆಡ್ಡಿ, ತನ್ಮಯ್ ಅಗರ್ವಾಲ್, ಠಾಕೂರ್ ವರ್ಮಾ, ರೋಹಿತ್ ರಾಯಡು, ಸಿ.ವಿ. ಮಿಲಿಂದ್, ಮೆಹದಿ ಹಸನ್, ಸಾಕೇತ್ ಸಾಯಿ ರಾಮ್, ಮೊಹಮ್ಮದ್ ಸಿರಾಜ್, ಮಿಕಿಲ್ ಜೈಸ್ವಾಲ್, ಜೆ ಮಲ್ಲಿಕಾರ್ಜುನ್ (ವಿಕೆ), ಕಾರ್ತಿಕೇಯ, ಟಿ ರವಿ ತೇಜ, ಆಯ ದೇವ್ ಗೌಡ್.

Story first published: Saturday, September 14, 2019, 15:12 [IST]
Other articles published on Sep 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X