ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಲಿಂಗ ಹೆಸರಿನಲ್ಲಿರುವ ಐಪಿಎಲ್ ಸಾರ್ವಕಾಲಿಕ ದಾಖಲೆಯತ್ತ ಅಮಿತ್ ಮಿಶ್ರಾ ಕಣ್ಣು

DC spinnner Amit Mishra just 7 wickets away from Lasith Malingas IPL record

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಅಮಿತ್ ಮಿಶ್ರಾ ಐಪಿಎಲ್ ಇತಿಹಾಸದಲ್ಲಿನ ಅತಿ ದೊಡ್ಡ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಯುವ ಸಾಧನೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ 152 ಪಂದ್ಯಗಳನ್ನು ಆಡಿದ್ದು 164 ವಿಕೆಟ್ ಪಡೆದುಕೊಂಡಿದ್ದಾರೆ. ಇದು ಐಪಿಎಲ್‌ ಇತಿಹಾಸದಲ್ಲಿ ಬೌಲರ್ ಓರ್ವ ಪಡೆದ ಎರಡನೇ ಅತಿ ಹೆಚ್ಚಿನ ವಿಕೆಟ್‌ಗಳ ಸಂಖ್ಯೆಯಾಗಿದೆ. ಮೊದಲ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ ಇದ್ದಾರೆ.

ಸಿ ಎಸ್ ಕೆ ಜೀವಮಾನ ಸಾಧನೆಯನ್ನು ಮುರಿದುಹಾಕಿದ ಡೆಲ್ಲಿ ಕ್ಯಾಪಿಟಲ್ಸ್ಸಿ ಎಸ್ ಕೆ ಜೀವಮಾನ ಸಾಧನೆಯನ್ನು ಮುರಿದುಹಾಕಿದ ಡೆಲ್ಲಿ ಕ್ಯಾಪಿಟಲ್ಸ್

ಆದರೆ ಲಸಿತ್ ಮಾಲಿಂಗ್ ಪಡೆದ ವಿಕೆಟ್‌ಗಳಿಗಿಂತ ಅಮಿತ್ ಮಿಶ್ರಾ ಕೇವಲ 7 ವಿಕಟ್‌ಗಳಷ್ಟೇ ಹಿಂದಿದ್ದಾರೆ. ಹೀಗಾಗಿ ಈ ಆವೃತ್ತಿಯಲ್ಲಿ ಮಿಶ್ರಾ ಈ ಸಾಧನೆಯನ್ನು ಪೂರೈಸುವ ನಿರೀಕ್ಷೆಯಿದೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

ಆದರೆ ಈ ಮಹತ್ವದ ದಾಖಲೆ ಮುರಿಯುವ ಬಗ್ಗೆ ಅಮಿತ್ ಮಿಶ್ರಾ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದರು. ಮಾಲಿಂಗ ಅವರ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯುವ ಬಗ್ಗೆ ನಾನು ಹೆಚ್ಚು ಗಮನಹರಿಸಲ್ಲ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ ಸಹಕಾರಿಯಾಗಬೇಕೆಂಬುದಷ್ಟೇ ನನ್ನ ಚಿತ್ತವಿದೆ ಎಂದಿದ್ದಾರೆ.

ನಿಮ್ಮಂತೆ ಯಾರೂ ಇಲ್ಲ ; ಧೋನಿ ಕುರಿತು ಚೇತನ್ ಸಕಾರಿಯಾ ಮನದಾಳದ ಮಾತುನಿಮ್ಮಂತೆ ಯಾರೂ ಇಲ್ಲ ; ಧೋನಿ ಕುರಿತು ಚೇತನ್ ಸಕಾರಿಯಾ ಮನದಾಳದ ಮಾತು

"ಮುಂದಿನ ಎರಡು ಪಂದ್ಯಗಳಲ್ಲಿ ಮಲಿಂಗ ಅವರ ದಾಖಲೆಯನ್ನು ಮುರಿಯಬೇಕೆಂಬ ಎಂಬ ಬಗ್ಗೆ ನನ್ನಲ್ಲಿ ಯಾವುದೇ ಯೋಜನೆಗಳು ಇಲ್ಲ. ನಾನು ಯಾವತ್ತೂ ಆ ದಾಖಲೆಯನ್ನು ಮುರಿಯುವ ಬಗ್ಗೆ ಗಮನಹರಿಸಿಲ್ಲ. ಆದರೆ ನಾನು ವಿಕೆಟ್ ಪಡೆಯುವುದಕ್ಕೆ ಪ್ರಯತ್ನವನ್ನು ನಡೆಸುತ್ತಲೇ ಇರುತ್ತೇನೆ. ನಾನು ಶೀಘ್ರವಾಗಿ ಪಡೆದಷ್ಟೂ ಉತ್ತಮ. ಇಂದಿನ ಪಂದ್ಯದಲ್ಲಿ ನೀಡಿದಂತೆಯೇ ಉತ್ತಮ ಪ್ರದರ್ಶನವನ್ನು ನೀಡಲು ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ" ಎಂದು ಮಿಶ್ರಾ ಹೇಳಿದ್ದಾರೆ

Story first published: Wednesday, April 21, 2021, 15:12 [IST]
Other articles published on Apr 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X