ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ವಿಶಿಷ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ

DC vs MI: Amit Mishra becomes first Indian to achieve this feat in IPL

ನವದೆಹಲಿ, ಏಪ್ರಿಲ್ 18: ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ಹಿರಿಮೆಗೆ ಪಾತ್ರರಾಗಿದ್ದಾರೆ. ನವದೆಹಲಿಯಲ್ಲಿ ಗುರುವಾರ (ಏಪ್ರಿಲ್ 18) ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಿಶ್ರಾ ಈ ದಾಖಲೆ ನಿರ್ಮಿಸಿದರು.

ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ Live Score ಕೆಳಗಿದೆ

1
45910

ರಾಹುಲ್‌ ಜೊಹ್ರಿ ಮೇಲಿನ ಲೈಂಗಿಕ ಕಿರುಕುಳ ಆರೋಪ ವಿರುದ್ಧ ಮೇಲ್ಮನವಿರಾಹುಲ್‌ ಜೊಹ್ರಿ ಮೇಲಿನ ಲೈಂಗಿಕ ಕಿರುಕುಳ ಆರೋಪ ವಿರುದ್ಧ ಮೇಲ್ಮನವಿ

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ಮಿಶ್ರಾ 150 ವಿಕೆಟ್ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಲಸಿತ್ ಮಾಲಿಂಗ ಇದ್ದಾರೆ.

ಶ್ರೀಲಂಕಾ ವೇಗಿ ಮಾಲಿಂಗ ಒಟ್ಟು 114 ಐಪಿಎಲ್ ಪಂದ್ಯಗಳಲ್ಲಿ 161 ವಿಕೆಟ್ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಿಶ್ರಾ 140 ಪಂದ್ಯಗಳಲ್ಲಿ 150 ವಿಕೆಟ್ ಉರುಳಿಸಿದ್ದಾರೆ. ಈ ಯಾದಿಯಲ್ಲಿ ತೃತೀಯ ಸ್ಥಾನದಲ್ಲಿರುವ ಪೀಯೂಷ್ ಚಾವ್ಲಾ 152 ಪಂದ್ಯಗಳಲ್ಲಿ 146 ವಿಕೆಟ್ ಪಡೆದಿದ್ದಾರೆ.

ವಿಶ್ವಕಪ್‌ಗೂ ಮೊದಲು ನಿವೃತ್ತಿ ಸುಳಿವು ನೀಡಿದ ಲಂಕಾ ವೇಗಿ ಮಾಲಿಂಗವಿಶ್ವಕಪ್‌ಗೂ ಮೊದಲು ನಿವೃತ್ತಿ ಸುಳಿವು ನೀಡಿದ ಲಂಕಾ ವೇಗಿ ಮಾಲಿಂಗ

ಇನ್ನುಳಿದ ಸ್ಥಾನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ (126 ಪಂದ್ಯ, 143 ವಿಕೆಟ್), 5ನೇ ಸ್ಥಾನದಲ್ಲಿ ಚೆನ್ನೈ ತಂಡದಲ್ಲಿರುವ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ 153 ಪಂದ್ಯಗಳಲ್ಲಿ 141 ಐಪಿಎಲ್ ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Thursday, April 18, 2019, 22:16 [IST]
Other articles published on Apr 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X